ಸುದ್ದಿಗಳು

ಶುರುವಾಯ್ತು ‘ದಮಯಂತಿ’ ಡಬ್ಬಿಂಗ್

ಈಗಾಗಲೇ ವಿಭಿನ್ನ ಪೋಸ್ಟರ್ ಮತ್ತು ಟೈಟಲ್ ಟೀಸರ್ ನಿಂದ ಸದ್ದು ಮಾಡುತ್ತಿರುವ ಸಿನಿಮಾ

ಬೆಂಗಳೂರು, ಡಿ.9: ‘ರಾಕ್ಷಸಿ’, ‘ವೈರ’ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ನವರಸನ್​ ಆ್ಯಕ್ಷನ್​ ಕಟ್​ ಹೇಳುತ್ತಿರುವ ‘ದಮಯಂತಿ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಚಿತ್ರದ ಡಬ್ಬಿಂಗ್ ಶುರುವಾಗಿದೆ.

ಚಿತ್ರದ ಬಗ್ಗೆ

ಈ ಹಿಂದೆ ರಾಧಿಕಾ ಕುಮಾರಸ್ವಾಮಿ ಬರ್ತಡೇ ಸ್ಪೆಷಲ್ ಆಗಿ ರಿಲೀಸ್ ಆಗಿದ್ದ ಚಿತ್ರದ ಟೈಟಲ್ ಟೀಸರ್ ಜನ ಮೆಚ್ಚುಗೆ ಗಳಿಸಿದೆ. ಅಂದ ಹಾಗೆ, ಚಿತ್ರದ ಹೆಸರೇ ಹೇಳುವಂತೆ ಇದೊಂದು  ಐತಿಹಾಸಿಕ ಹಿನ್ನೆಲೆಯ ಥ್ರಿಲ್ಲರ್ ಕಥೆಯನ್ನೊಳಗೊಂಡ ಮಹಿಳಾ ಪ್ರಧಾನ ಸಿನಿಮಾ.

ವಿಭಿನ್ನ ಪಾತ್ರದಲ್ಲಿ ರಾಧಿಕಾ

‘ನಿನಗಾಗಿ’ ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ ರಾಧಿಕಾ ಈಗಾಗಲೇ ಅನೇಕ ಬಗೆಯ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆದರೆ ಈ ಚಿತ್ರದಲ್ಲಿ ಅವರು, ತುಸು ಭಯಂಕರವಾಗಿ ಕಾಣುವ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಚಿತ್ರದ ಬಗ್ಗೆ ಕುತೂಹಲವನ್ನೂ ಮೂಡಿಸಿದ್ದಾರೆ.

ಇನ್ನು ವಯಕ್ತಿಕ ಕಾರಣಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದ ರಾಧಿಕಾ ಮತ್ತೆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದರೂ ಸಹ ಅದೇ ಸೌಂದರ್ಯ, ನೋಟ, ಅಭಿನಯವಿದೆ. ಹಿಂದೆ ಹೇಗಿದ್ದರೋ ಅದೇ ರೀತಿಯೇ ಇದ್ದಾರೆ ಹೊರತು ಸ್ವಲ್ಪವೂ ಬದಲಾಗಿಲ್ಲ. ಇನ್ನು ಈ ಚಿತ್ರದಲ್ಲಿ ನಟಿಸಲು ಅವರು ಭರ್ತಿ 1 ಕೋಟಿ ರೂಪಾಯಿ ಸಂಭಾವನೆಯನ್ನು ತೆಗೆದುಕೊಂಡಿದ್ದಾರೆ.

Tags