ಸುದ್ದಿಗಳು

ಸನ್ನಿಗೆ ಪತಿಯಿಂದ ಭಾವನಾತ್ಮಕ ಪೋಸ್ಟ್’

ಮುಂಬೈ,ಮೇ.14: ಸನ್ನಿಲಿಯೋನ್ ಬರ್ತಡೇಗೆ ಪತಿ ಡೇನಿಯಲ್ ಭಾವನಾತ್ಮಕವಾಗಿ ಪೋಸ್ಟ್ ಒಂದನ್ನು ಮಾಡಿದ್ದಾರೆ.

ನಟಿ ಸನ್ನಿಲಿಯೋನ್ ನಿನ್ನೆಯಷ್ಟೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಮಾಜಿ ನೀಲಿ ನಟಿ, ಸದ್ಯ ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಸದ್ಯ ಹುಟ್ಟುಹಬ್ಬದ ಖುಷಿಯಲ್ಲಿದ್ದಾರೆ. ಈ ನಟಿಯ ಹುಟ್ಟುಹಬ್ಬಕ್ಕೆ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.

ಸನ್ನಿ ಪತಿ ಹೇಳಿದ್ದೇನು?

ಹೌದು ಸದಾ ಸನ್ನಿ ಲಿಯೋನ್ ಮಾಡಿರುವ ಪ್ರತಿಯೊಂದು ಕೆಲಸದ ಹಿಂದೆಯೋ ಡೇನಿಯಲ್ ಇದ್ದೇ ಇರುತ್ತಾರೆ. ಈಗಾಗಲೇ ಸಾಕಷ್ಟು ಭಾರಿ ಸ್ವತಃ ಸನ್ನಿಲಿಯೋನ್ ಹೇಳಿಕೊಂಡಿದ್ದಾರೆ. ಸದ್ಯ ಈ ನಟಿಯ ಹುಟ್ಟುಹಬ್ಬದ ದಿನ ಪತ್ನಿಯನ್ನು ಹಾಡಿ ಹೊಗೋಳೋದರ ಜೊತೆಗೆ ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ಏನಿದೆ..?

ಹೌದು, ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಡೇನಿಯಲ್, ನಿಮ್ಮ ಬಗ್ಗೆ ಬರೆಯಬೇಕೆಂದರೆ ಹಲವಾರು ವಿಚಾರಗಳಿವೆ. ಆದರೆ ಅದನ್ನೆಲ್ಲಾ ಪೋಸ್ಟರ್‌ ನಲ್ಲಿ ಹಾಕಲು ಸಾಧ್ಯವಿಲ್ಲ. ನಿಜಕ್ಕೂ ನಿಮ್ಮ ಗುಣ ದೊಡ್ಡದು. ನಿಮ್ಮ ಗುಣಕ್ಕೆ ಸರಿಸಾಟಿಯಿಲ್ಲ. ನೀವು ವಿನಮ್ರ, ಉದಾರ ವ್ಯಕ್ತಿ ಅನ್ನೋದು ನನ್ನ ಭಾವನೆ. ನಿಮಗಿಂತ ಬೇರೆಯವರಿಗೆ ನೀವು ಸಹಾಯ ಮಾಡಿದ್ದು ಹೆಚ್ಚು. ನೀವು ಹೋಗುವ ಹಾದಿಯ ಪ್ರತಿ ಹಂತದಲ್ಲೂ  ನಾನಿದ್ದೇನೆ. ಮುಂದೆಯೂ ಇರುತ್ತೇನೆ. ಭೂಮಿ ಮೇಲೆ ಹುಟ್ಟಿದ ಮಹಾನ್ ತಾಯಂದಿರ ದಿನದ ಶುಭಾಶಯಗಳು. ಹ್ಯಾಪಿ ಬರ್ತಡೇ ಎಂದಿದ್ದಾರೆ.

ತಲೈವಾ ಪತ್ನಿಗೆ ಸಮನ್ಸ್..

#sunnyleone #birthday #danielpostinstagram

Tags

Related Articles