ಸುದ್ದಿಗಳು

‘ಜುಮಾನ್ಜಿ’ ಚಿತ್ರದ ಮುಂದಿನ ಭಾಗದಲ್ಲಿ ಅಭಿನಯಿಸಲಿರುವ ಡ್ಯಾನಿ ಗ್ಲೋವರ್

ಜೇಕ್ ಕಾಸ್ಡನ್ ನಿರ್ದೇಶನದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ಡಿಸೆಂಬರ್ 13ರಂದು ಬಿಡುಗಡೆ

ಹಾಲಿವುಡ್ ನ ಜನಪ್ರಿಯ ಚಿತ್ರ ‘ಜುಮಾನ್ಜಿ: ವೆಲ್ಕಮ್ ಟು ಜಂಗಲ್’ನ ಮುಂದುವರಿದ ಭಾಗದಲ್ಲಿ ಅಮೆರಿಕನ್ ನಟ ಡ್ಯಾನಿ ಗ್ಲೋವರ್ ನಟಿಸಲಿದ್ದಾರೆ.

ಗ್ಲೋವರ್ ನ ಪಾತ್ರ ಮತ್ತು ಚಿತ್ರದ ಕಥಾಹಂದರದ ಕುರಿತಾದ ವಿವರಗಳನ್ನು ತಯಾರಕರು ಬಹಿರಂಗಪಡಿಸಿಲ್ಲ ಎಂದು ವೆರೈಟಿ ವರದಿ ಮಾಡಿದೆ.

ಗ್ಲೋವರ್, ಡ್ವೇಯ್ನ್ ‘ದಿ ರಾಕ್’ ಜಾನ್ಸನ್, ಜ್ಯಾಕ್ ಬ್ಲ್ಯಾಕ್, ಕೆವಿನ್ ಹಾರ್ಟ್, ಮತ್ತು ಕರೆನ್ ಗಿಲ್ಲನ್ ಎದುರು ನಟಿಸಲಿದ್ದಾರೆ. ಮತ್ತು ಈ ಎಲ್ಲಾ ನಟರು ಮೊದಲ ಭಾಗದಿಂದ ಹಿಂತಿರುಗುತ್ತಿದ್ದಾರೆ.

ಗ್ಲೋವರ್ ಜೊತೆಗೆ, ಅಮೆರಿಕಾದ ರಾಪರ್ ಅವ್ಕ್ವಾಫಿನಾ ಚಲನಚಿತ್ರದಲ್ಲಿ ಮಹತ್ವದ ಪಾತ್ರಕ್ಕಾಗಿ ಅಂತಿಮ ಮಾತುಕತೆಯಲ್ಲಿದ್ದಾರೆ ಮತ್ತು ಡ್ಯಾನಿ ಡಿವಿಟೊ ಸಹ ಪಾತ್ರವರ್ಗವನ್ನು ಸೇರಲಿದ್ದಾರೆ. ಈ ಮುಂದಿನ ಭಾಗವನ್ನು ಜೇಕ್ ಕಾಸ್ಡನ್ ನಿರ್ದೇಶಿಸಲಿದ್ದು ಮತ್ತು ಡಿಸೆಂಬರ್ 13ರಂದು ಬಿಡುಗಡೆಯಾಗಲಿದೆ.

ಡಿಸೆಂಬರ್ 2017ರಲ್ಲಿ ಬಿಡುಗಡೆಯಾದ ‘ಜುಮಾನ್ಜಿ: ವೆಲ್ಕಮ್ ಟು ಜಂಗಲ್’ ಚಿತ್ರ ವಿಶ್ವದಾದ್ಯಂತ 557 ಮಿಲಿಯನ್ ಡಾಲರ್ ಗಳಿಸಿತು. ಇದು ರಾಬಿನ್ ವಿಲಿಯಮ್ಸ್ ನಟಿಸಿದ 1995ರ ಯಶಸ್ವಿ ಚಿತ್ರ ‘ಜುಮಾನ್ಜಿ’ಯ ಉತ್ತರಭಾಗವಾಗಿದೆ.

#DannyGlove, #balkaninews #filmnews, #hollywood

Tags