ಸುದ್ದಿಗಳು

‘ದರ್ಬಾರ್’ ಸಿನಿಮಾ ಶೂಟಿಂಗ್ ನಲ್ಲಿ ಭಾಗಿಯಾದ ನಯನತಾರ

ಚೆನೈ, ಏ.24:

ರಜಿನಿಕಾಂತ್ ಅಭಿನಯದ ‘ದರ್ಬಾರ್’ ಸಿನಿಮಾ ಈಗಾಗಲೇ ಸೆಟ್ಟೇರಿದೆ. ಪೋಸ್ಟರ್ ಗಳಿಂದಲೇ ಬಾರೀ ಸದ್ದು ಮಾಡಿದ್ದ ಈ ಚಿತ್ರದ ಮೇಲೆ ಅಭಿಮಾನಿಗಳು ಬಹಳಷ್ಟು ನಿರೀಕ್ಷೆ ಹಾಗೂ ಕುತೂಹಲ ಇಟ್ಟುಕೊಂಡಿದ್ದಾರೆ. ಈಗಾಗಲೇ ವಿಭಿನ್ನ ಪಾತ್ರಗಳ ಮೂಲಕ ಸದ್ದು ಮಾಡುವ ನಟ ರಜಿನಿಕಾಂತ್ ಈ ಸಿನಿಮಾ ಮೂಲಕ‌ ಮತ್ತೊಂದು ವಿಭಿನ್ನ ಪಾತ್ರದಲ್ಲಿ ಕಾಣಿಸಲಿದ್ದಾರೆ. ಸದ್ಯ ಈ ಚಿತ್ರತಂಡದ ಜೊತೆ ನಯನತಾರಾ ಭಾಗಿಯಾಗಿದ್ದಾರೆ.

ಶೂಟಿಂಗ್ ನಲ್ಲಿ ಭಾಗಿಯಾದ ನಯನತಾರ

‘ದರ್ಬಾರ್’ ರಜನಿಕಾಂತ್ ನಟನೆಯ 167ನೇ ಸಿನಿಮಾವಾಗಿದೆ. ಈ ಚಿತ್ರವನ್ನು ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಎ ಆರ್ ಮುರುಗದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾದಲ್ಲಿ ರಜಿನಿ ಜೊತೆ ನಯನತಾರ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಇದೀಗ ನಯನತಾರ ದರ್ಬಾರ್ ಸಿನಿಮಾ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ.

ಪೊಲೀಸ್ ಪಾತ್ರದಲ್ಲಿ ತಲೈವಾ

ದರ್ಬಾರ್ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಸದ್ಯ ಮುಂಬೈನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ತಲೈವಾ ವಿರುದ್ಧ ಖ್ಯಾತ ನಟ ರಾಜ್ ಬಬ್ಬರ್ ಪುತ್ರ ಪ್ರತೀಕ್ ಬಬ್ಬರ್ ಅಖಾಡಕ್ಕೆ ಇಳಿದಿದ್ದಾರೆ. ಇನ್ನೂ ಪಾಂಡಿಯನ್‌ ಸಿನಿಮಾದಲ್ಲಿ ಪೊಲೀಸ್‌ ಪಾತ್ರದಲ್ಲಿ ನಟಿಸಿದ ಬಳಿಕ ಸುಮಾರು 25 ವರ್ಷಗಳ ಮತ್ತೊಮ್ಮೆ ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರದ ಜೊತೆ ಮತ್ತೊಂದು ಪಾತ್ರದಲ್ಲಿ ಕಾಣಿಸಲಿಕೊಳ್ಳಲಿದ್ದಾರೆ ರಜಿನಿ.

Related image

ಶ್ರೇಷ್ಠ ಲೆಜೆಂಡ್ ಹುಟ್ಟಿದ ದಿನ.. ಕಿಚ್ಚ ಟ್ವೀಟ್!!

#balkaninews #rajinikanth #naynthara #rajinikanthandnayanthara #kollywood

Tags