ಸುದ್ದಿಗಳು

‘ದರ್ಬಾರ್’ ಚಿತ್ರದ ಪೋಸ್ಟರ್ ಕಾಪಿ.!!?!!

ಚೆನ್ನೈ,ಏ.15: ರಜಿನಿಕಾಂತ್ ಅಭಿನಯದ ದರ್ಬಾರ್ ಚಿತ್ರದ ಮೊದಲ ಪೋಸ್ಟರ್ ಕಾಪಿ ಮಾಡಿದ್ದಾರೆ ಎನ್ನಲಾಗಿದೆ.

ನಟ ರಜಿನಿಕಾಂತ್ ಸದ್ಯ ದರ್ಬಾರ್ ಸಿನಿಮಾ ಮೂಲಕ ಅಭಿಮಾನಿಗಳನ್ನು ರಂಜಿಸುವುದಕ್ಕೆ ಮತ್ತೆ ಬರುತ್ತಿದ್ದಾರೆ. ಈಗಾಗಲೇ ಸಿನಿಮಾ ಶೂಟಿಂಗ್ ಪ್ರಾರಂಭವಾಗಿದೆ. ಇದೀಗ ಹೊಸ ವಿಚಾರ ಏನಪ್ಪಾ ಅಂದ್ರೆ ಈ ಚಿತ್ರದ ಪೋಸ್ಟರ್ ನ ರಜಿನಿಕಾಂತ್ ಕಾಪಿ ಮಾಡಿದ್ದಾರೆ ಅಂತಾ ಹೇಳಲಾಗುತ್ತಿದೆಯಂತೆ.

ಯಾವ ಸಿನಿಮಾ ಪೋಸ್ಟರ್ ಅದು..?

ಎಸ್, ಈ ಚಿತ್ರ ಘೋಷಣೆಯಾದ ದಿನವೇ ಈ ಚಿತ್ರದ ಪೋಸ್ಟರ್ ಕೂಡ ಬಿಡುಗಡೆಯಾಗಿತ್ತು. ಈ ಪೋಸ್ಟರ್ ನೋಡಿದ ಮಂದಿ ಇವರ ಮುಂದಿನ ಸಿನಿಮಾದ ಬಗ್ಗೆ ಸಕ್ಕತ್ ಕುತೂಹಲದ ಜೊತೆಗೆ ನಿರೀಕ್ಷೆಯನ್ನು ಇಟ್ಟುಕೋಂಡಿದ್ದಾರೆ. ಇನ್ನು ಈ ಈ ಪೋಸ್ಟರ್ ಕೂಡ ನಿರೀಕ್ಷೆ ಹುಟ್ಟುಹಾಕುವಂತೆಯೇ ಇತ್ತು. ಇದೀಗ ಈ ಪೋಸ್ಟರ್ ಟೀಕೆಗೆ ಗುರಿಯಾಗಿದೆ. ಈ ಪೋಸ್ಟ್ ಅನ್ನು ಹಾಲಿವುಡ್ ನಿಂದ ಕಾಪಿ ಮಾಡಿದರಾ ಅನ್ನೋ ಮಾತುಗಳು ಕೇಳಿ ಬರುತ್ತಿವೆ.

ಹಾಲಿವುಡ್ ಸಿನಿಮಾ ಪೋಸ್ಟರ್..?

ಈ ಚಿತ್ರದ ಪೋಸ್ಟರ್ ಹಾಲಿವುಡ್‌ನ ಕಿಲ್ಲಿಂಗ್ ಗಂಥರ್ ಚಿತ್ರದ ರೀತಿಯಲ್ಲಿಯೇ ಇದೆ ಅಂತಾ ಟೀಕೆ ಮಾಡುತ್ತಿದ್ದಾರೆ. ಇನ್ನು ಈ ಚಿತ್ರದ ಪೋಸ್ಟರ್ ಕೂಡ ಅದೇ ರೀತಿಯಾಗಿರೋದ್ರಿಂದ ಇಂಥಹ ಟೀಕೆ ಬರುತ್ತಿದೆ. ರಜಿನಿಯ ದರ್ಬಾರ ಸಿನಿಮಾ ಪೋಸ್ಟರ್ ಕಾಪಿ ಮಾಡಿದರಾ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಮುರುಗದಾಸ್ ನಿರ್ದೇಶನದ ಈ ದರ್ಬಾರ್ ಚಿತ್ರದಲ್ಲಿ ನಾಯಕಿ ನಟಿಯಾಗಿ ನಯನತಾರಾ ಹಾಗೂ ಮಗಳ ಪಾತ್ರದಲ್ಲಿ ನಿವೇದಿತಾ ಥಾಮಸ್ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿದೆ. ಸದ್ಯ ಈ ಚಿತ್ರದಲ್ಲಿ ಎರಡು ರೋಲ್ ನಲ್ಲಿ ರಜಿನಿ ಕಾಣಿಸಲಿದ್ದಾರೆ. ಫುಲ್ ಆಕ್ಷನ್ ಲುಕ್ ನಲ್ಲಿರುವ ನೆಚ್ಚಿನ ನಾಯಕನನ್ನು ಕಂಡು ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ

 

Tags