ಸುದ್ದಿಗಳು

ದರ್ಶನ್ ಕೈ ನೋವು ಹಿನ್ನೆಲೆ ‘ರಾಬರ್ಟ್’ ಚಿತ್ರೀಕರಣ ಮುಂದಕ್ಕೆ..!!?!!

ಬೆಂಗಳೂರು, ಏ.22:

ದರ್ಶನ್ ಅಭಿನಯದ ಬಹು ನಿರೀಕ್ಷೆಯ ‘ರಾಬರ್ಟ್’ ಸಿನಿಮಾ ಈಗಾಗಲೇ ಪೋಸ್ಟರ್ ಗಳಿಂದಲೇ ಬಾರೀ ಸದ್ದು ಮಾಡಿದ ಚಿತ್ರ. ವಿಭಿನ್ನ ಪೋಸ್ಟರ್ ಗಳು ಅಭಿಮಾನಿಗಳನ್ನು ಸಿನಿಮಾ ಮೇಲಿನ‌ ನಿರೀಕ್ಷೆ ಹೆಚ್ವಿಸುವಂತೆ ಮಾಡಿತ್ತು. ಅಷ್ಟೇ ಅಲ್ಲ ಈ‌ ಸಿನಿಮಾ ಒಂದೊಳ್ಳೆ ಮೆಸೇಜ್ ಕೊಡುತ್ತೆ ಎನ್ನುವುದನ್ನು ಕೂಡ ಪೋಸ್ಟರ್ ನಲ್ಲಿ ತೋರಿಸುವಂತಾಗಿತ್ತು. ಇಂದಿನಿಂದ ಈ ಚಿತ್ರದ ಶೂಟಿಂಗ್ ಪ್ರಾರಂಭವಾಗಬೇಕಿತ್ತು. ಆದರೆ ಮುಂದೂಡಿಕೆಯಾಗಿದೆ ಎನ್ನಲಾಗಿದೆ.

ಕೈ ನೋವು ಹಿನ್ನಲೆ ಶೂಟಿಂಗ್ ಮುಂದಕ್ಕೆ..?

ನಟ ದರ್ಶನ್, ಮಂಡ್ಯ ಅಭ್ಯರ್ಥಿ ಸುಮಲತ ಪರ ಸತತ ಪ್ರಚಾರದ ಬಳಿಕ ಮತ್ತೆ ವಾಪಸ್ಸಾಗಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ನಟ ದರ್ಶನ್ ಇಂದಿನಿಂದ ರಾಬರ್ಟ್ ಸಿನಿಮಾ ಶೂಟಿಂಗ್ ಆರಂಭವಾಗಬೇಕಿತ್ತು. ಆದರೆ ಈ ಶೂಟಿಂಗ್ ಒಂದು ವಾರ ಮುಂದೆ ಹೋಗಿದೆ ಎನ್ನಲಾಗುತ್ತಿದೆ. ಯಾಕೆಂದರೆ ನಟ ದರ್ಶನ್ ಗೆ ಕೊಂಚ ಕೈ ನೋವು ಇದೆ. ಹಾಗಾಗಿ ಚಿಕಿತ್ಸೆ ಮುಂದುವರೆದಿದ್ದು, ರೆಸ್ಟ್ ಬೇಕಾಗಿದೆ. ಹಾಗಾಗಿ ಈ‌ ಶೂಟಿಂಗ್ ಮುಂದಿನ ವಾರದಿಂದ ಆರಂಭವಾಗುತ್ತದೆಯಂತೆ. ಸದ್ಯ ಒಂದೇ ಶೆಡ್ಯುಲ್ ನಲ್ಲಿ ಈ ಚಿತ್ರೀಕರಣ ಮುಗಿಯಲಿದೆ ಎನ್ನಲಾಗಿದೆ. ಈ ಹಿಂದೆ ಹೇಳಿದಂತೆ ಚುನಾವಣೆಯ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯೋದಾಗಿ ದರ್ಶನ್ ಮೂಲಗಳು ತಿಳಿಸಿದ್ದವು ಅದರಂತೆ ಚಿಕಿತ್ಸೆ ಮುಂದುವರೆದಿದೆ.

ಪೋಸ್ಟರ್ ನಿಂದಲೇ ಸದ್ದು ಮಾಡುತ್ತಿದೆ ರಾಬರ್ಟ್

ಈ ಕೈಗೆ ಶಬರಿ ಮುಂದೆ ಸೋಲೋದು ಗೊತ್ತು, ರಾವಣನ ಮುಂದೆ ಗೆಲ್ಲೋದು ಗೊತ್ತು’ ಎನ್ನುವ ವಾಕ್ಯ ಬರೆಯಲಾಗಿತ್ತು. ಮತ್ತೊಂದು ಟೈಟಲ್​ ಪೋಸ್ಟರ್ ​ನಲ್ಲಿ ಹನುಮಂತನ ಮೇಲೆ ರಾಮ ಕೂತು ಬಾಣ ಬಿಡುತ್ತಿದ್ದಾನೆ. ಹಾಗಾಗಿ ಈ ವಿಚಾರ ಕುತೂಹಲ ಸೃಷ್ಟಿಸಿತ್ತು. ಇನ್ನೂ ದರ್ಶನ್ ಅವರು ಬಿಟ್ಟರೆ ಬೇರಾವ ಪಾತ್ರಗಳು ಇನ್ನೂ ಬಹಿರಂಗವಾಗಿಲ್ಲ. ಸದ್ಯ ಈ ಚಿತ್ರ ಉಮಾಪತಿ ಫಿಲಂಸ್ ಬ್ಯಾನರ್ ಅಡಿಯಲ್ಲಿ, ತರುಣ್ ಕಿಶೋರ್ ಸುಧೀರ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

Image result for darshan hand pain

‘ಒಂದಲ್ಲಾ ಎರಡಲ್ಲಾ’ ಚಿತ್ರಕ್ಕೆ ಸಿಕ್ತು ಮುಂಬೈ ವಿಮರ್ಶಕರಿಂದ ಪ್ರಶಸ್ತಿ

#balkaninews #sandalwood #kannadamovies #darshan #d53 #tarunkishoresudheer #darshanrobertmovie #robertkannadamovie

Tags