ಸುದ್ದಿಗಳು

ಯುವಕರಿಗೆ ಪ್ರಾಣಿ ದತ್ತು ಪಡೆಯಿರಿ ಎಂದು ಸಂದೇಶ ಸಾರಿದ ಚಾಲೆಂಜಿಂಗ್ ಸ್ಟಾರ್

ಕಾಡು ಪ್ರಾಣಿಗಳನ್ನು ಮನೆಯಲ್ಲಿ ಸಾಕಲು ಸಾಧ್ಯವಿಲ್ಲ

ಮೈಸೂರು,ಸೆ.23: ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗಾಗಲೇ  ರಾಜ್ಯ ಅರಣ್ಯ ಇಲಾಖೆಯ ರಾಯಭಾರಿಯಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕೇವಲ ರಾಯಭಾರಿ ಹೆಸರಿಗೆ ಮಾತ್ರವಲ್ಲದೇ ಸಾಕಷ್ಟು ದಿನಗಳಿಂದ ಕಾಡುಗಳನ್ನು ಸುತ್ತಿ  ಪ್ರಾಣಿಗಳ ಬಗ್ಗೆ, ಕಾಡಿನ ಬಗ್ಗೆ ಹಾಗೂ ಪಕ್ಷಿ ಸಂಕುಲದ ಬಗ್ಗೆ ತಾವೇ ಖುದ್ದಾಗಿ ತಿಳಿದುಕೊಳ್ಳುತ್ತಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ .

ಮೈಸೂರು ಮೃಗಾಲಯಕ್ಕೆ ಭೇಟಿ ಕೊಟ್ಟ ದರ್ಶನ್ 

ಇಂದು ಭಾನುವಾರ ಆದ ಪ್ರಯುಕ್ತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೈಸೂರಿನ ಮೃಗಾಲಯಕ್ಕೆ ಭೇಟಿ ಕೊಟ್ಟಿದ್ದಾರೆ . ಇದೇ ಸಂದರ್ಭದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ದರ್ಶನ್ ಯುವಕರಿಗೆ ಒಂದು ಉತ್ತಮ ಸಂದೇಶವನ್ನು ಸಾರಿದ್ದಾರೆ

ಅರಣ್ಯ ಇಲಾಖೆಯ ರಾಯಭಾರಿಯಾದ ನಂತರ ಉತ್ತಮ ಗಾಳಿ ಸಿಕ್ಕಿದೆ 

ಅರಣ್ಯ ಇಲಾಖೆಯ ರಾಯಭಾರಿಯಾದ ನಂತರ ನನಗೆ ಉತ್ತಮ ಗಾಳಿ ಸಿಕ್ಕಿದೆ ಎನ್ನುವ ವಿಚಾರವನ್ನು ದರ್ಶನ್ ಹಂಚಿಕೊಂಡಿದ್ದಾರೆ. ಅದಷ್ಟೇ ಅಲ್ಲದೆ ಗಿಡ ಮರ ನೆಟ್ಟು ಸೆಲ್ಫಿ ತೆಗೆದುಕೊಳ್ಳುವುದು ದೊಡ್ಡ ವಿಚಾರವಲ್ಲ ,ಕ್ರಮವಾಗಿ ಅರಣ್ಯವನ್ನು ಬೆಳೆಸಬೇಕು ಎಂದಿದ್ದಾರೆ. ನಾವು ಅರಣ್ಯಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದರಿಂದ ಪ್ರಾಣಿಗಳು ನಾಡಿಗೆ ಬರುತ್ತಿವೆ .ಯುವಕರು ದುಡ್ಡನ್ನು ವೀಕ್ ಎಂಡ್  ನೆಪದಲ್ಲಿ ಖರ್ಚು ಮಾಡುತ್ತಾರೆ ಅದೇ ಹಣವನ್ನು ಉಳಿಸಿ ಪ್ರಾಣಿಗಳನ್ನು ದತ್ತು ಪಡೆಯಿರಿ ಎಂದಿದ್ದಾರೆ .

ಕಾಡು ಪ್ರಾಣಿಗಳನ್ನು ಮನೆಯಲ್ಲಿ ಸಾಕಲು ಸಾಧ್ಯವಿಲ್ಲ

ಕಾಡು ಪ್ರಾಣಿಗಳನ್ನು ಮನೆಯಲ್ಲಿ ಸಾಕಲು ಸಾಧ್ಯವಿಲ್ಲ ಇದೇ ಕಾರಣದಿಂದ ಮೃಗಾಲಯಕ್ಕೆ ಬಂದು ಪ್ರಾಣಿಗಳನ್ನು ದತ್ತು ಪಡೆಯಿರಿ ಯುವಕರು ಪ್ರಾಣಿಗಳನ್ನು ದತ್ತು ದತ್ತು ಸ್ವೀಕಾರ ಮಾಡಿ ಮುಂದಿ ಮುಂದಿನ ಪೀಳಿಗೆಗೆ ಮಾದರಿಯಾಗಿ ಎಂದು ದರ್ಶನ್ ಹೇಳಿದ್ದಾರೆ

ರಾಜ್ಯ ರಾಜ್ಯ ಅರಣ್ಯ ಇಲಾಖೆಯ ರಾಯಭಾರಿ ಚಾಲೆಂಜಿಂಗ್

ಸ್ಟಾರ್ ದರ್ಶನ್ ಅವರನ್ನು ಈ ಬಾರಿಯ ರಾಜ್ಯ ಅರಣ್ಯ ಇಲಾಖೆಯ ರಾಯಭಾರಿಯನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ ಇದೇ ವಿಚಾರವಾಗಿ ದರ್ಶನ್ ಅರಣ್ಯ ಇಲಾಖೆಯ ಕಾರ್ಯಕ್ರಮಗಳಲ್ಲಿ ವನ್ಯಜೀವಿಗಳ ಸಂರಕ್ಷಣೆ ಮಾಡಿ ಎನ್ನುವ ಅಭಿಯಾನಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಇದರ ಜೊತೆಯಲ್ಲಿ ತಮ್ಮ ಫಾರ್ಮ್ ಹೌಸ್ನಲ್ಲಿ ಸಾಕಷ್ಟು ಬಗೆಯ ಪ್ರಾಣಿಗಳು ಹಾಗೂ ಸಸ್ಯಗಳನ್ನು ಬೆಳೆಸಿದ್ದಾರೆ..

 

Tags