ಸುದ್ದಿಗಳು

ಡಿ53 ಸಿನಿಮಾ ಶೀರ್ಷಿಕೆ ‘ರಾಬರ್ಟ್’ ಅಲ್ಲ !! ಹಾಗಾದರೆ ಏನು??

ತರುಣ್ ಸುಧೀರ್ ಹೇಳಿದ್ದೇನು?

ಬೆಂಗಳೂರು,ನ.7: ದೀಪಾವಳಿ ಹಬ್ಬಕ್ಕೆ ಈಗಾಗಲೇ ಚಂದನವನದಲ್ಲಿ ಬಹಳಷ್ಟು ಸಿನಿಮಾ ಹೊಸ ಪೋಸ್ಟರ್ ಗಳು ಬಿಡುಗಡೆಯಾಗಿವೆ.. ಅದರಲ್ಲಂತೂ  ಚಾಲೆಂಜಿಂಗ್​ ಸ್ಟಾರ್​ ದರ್ಶನ್ ತಮ್ಮ 53 ನೇ ಅಭಿನಯದ ಸಿನಿಮಾದ ಥೀಮ್​ ಪೋಸ್ಟರ್​ನ ರಿಲೀಸ್​ ಮಾಡಲಿದ್ದೇವೆ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು.. ಅದರಂತೆಯೇ ನಿನ್ನೆ  ಹೊಸ ಥೀಮ್ ಪೋಸ್ಟರ್ ಬಿಡುಗಡೆ ಮಾಡಿತ್ತು.. ಸದ್ಯ ಡಿ53ರ ಹೆಸರಲ್ಲಿ ಸಿನಿಮಾದ ಮೊದಲ ಪೋಸ್ಟರ್ ರಿಲೀಸ್​ ಆಗಿದೆ ಚೌಕ ಸಿನಿಮಾಕ್ಕೆ ಮೊದಲ ಬಾರಿಗೆ ಆ್ಯಕ್ಷನ್​ ಕಟ್​ ಹೇಳಿದ್ದ ತರುಣ್​ ಸುಧೀರ್​ ನಿರ್ದೇಶನದ 2ನೇ ಸಿನಿಮಾ ಇದು. ಎಲ್ಲರೂ ಈ  ಸಿನಿಮಾದ ಶೀರ್ಷಿಕೆ ರಾಬರ್ಟ್ ಎಂದೇ ಊಹಿಸಿದ್ದರು ಆದರೆ ಈಗ ಆ ಲೆಕ್ಕಚಾರ ಎಲ್ಲಾ ತಲೆಕೆಳಗಾಗಿದೆ.. ಹೌದು, ಈ ಎಲ್ಲಾ ಗಾಸಿಪ್ ಗೆ ತೆರೆ ಎಳೆದಿದ್ದಾರೆ ತರುಣ್ ಸುಧೀರ್…

Related image

ಡಿಸೆಂಬರ್ ನಲ್ಲಿ ದರ್ಶನ್ ಫೋಟೋಶೂಟ್

ದರ್ಶನ್ 53 ನೇ ಸಿನಿಮಾಕ್ಕೆಶೀರ್ಷಿಕೆ ‘ರಾಬರ್ಟ್’​ ಅಂತ  ಇಡಲಾಗಿತ್ತು ಆದರೆ ಈ ತರುಣ್ ಸುಧೀರ್ ಹೇಳುವಂತೆ, ಡಿಸೆಂಬರ್ ನಲ್ಲಿ ದರ್ಶನ್ ಫೋಟೋಶೂಟ್ ಮಾಡಿಸಲಿದ್ದು,  ನಂತರ ಟೈಟಲ್ ಲಾಂಚ್ ಮಾಡಲಿದ್ದೇವೆ, ಜನವರಿಯಲ್ಲಿ ಮುಹೂರ್ತ ಫಿಕ್ಸ್ ಮಾಡಬೇಕು..ಒಡೆಯ ಸಿನಿಮಾದ ನಂತರ ಈ ಚಿತ್ರ ಚಿತ್ರೀಕರಣ ಆರಂಭವಾಗಲಿದೆ..

‘ರಾಬರ್ಟ್’ ಅಲ್ಲ!!

ಡಿ 53ಕ್ಕೆ ‘ರಾಬರ್ಟ್’​ ಅಂತ ಟೈಟಲ್​ ರಿಜಿಸ್ಟರ್ ಮಾಡಿಸಿದ್ದು ನಿಜ, ಈ ಟೈಟಲ್ ಕೂಡ ಆಯ್ಕೆಯಲ್ಲಿಟ್ಟಿದ್ದೇವೆ ಅದರ ಜೊತೆಗೆ ಇನ್ನೊಂದೆರಡು ಟೈಟಲ್ ​ಗಳನ್ನು ಯೋಚನೆ ಮಾಡಿದ್ದೇವೆ . ಇಲ್ಲಿಯವರೆಗೂ ಸಿನಿಮಾದ ಟೈಟಲ್​  ‘ರಾಬರ್ಟ್’ ಅಂತಾನೇ ಅಭಿಮಾನಿಗಳು ಅಂದುಕೊಂಡಿದ್ದರು.. ಈಗ ಬಿಡುಗಡೆ ಆಗಿರುವ  ಥೀಮ್​ ಪೋಸ್ಟರ್​ ಹಾಗೂ ಅದರಲ್ಲಿರೋ ಕಂಟೆಂಟ್​ ನೋಡಿದ ಮೇಲೆ ಅಭಿಮಾನಿಗಳ ತಲೆಯೆಲ್ಲಿ  ಹುಳ ಬಿಟ್ಟಂತಾಗಿದೆ… ನಮಗೂ ಸಿನಿಮಾ ಟೈಟಲ್​ ಫೈನಲ್​ ಮಾಡುವ ಒತ್ತಡ ಇದೆ. ಆದ್ರೆ ಅದರ ಜೊತೆಗೆ ಇನ್ನೊಂದೆರಡು ಟೈಟಲ್​ಗಳನ್ನ ನಮಗೂ ಸಿನಿಮಾ ಟೈಟಲ್​ ಫೈನಲ್​ ಮಾಡೋ ಪ್ರೆಶರ್​ ಇದೆ.. ಇನ್ನು ವಿಭಿನ್ನ ಲೊಕೇಶನ್ ಗಳಲ್ಲಿ ಶೂಟಿಂಗ್ ನಡೆಯಲಿದೆ.. ಇನ್ನುಳಿದಂತೆ ಈ ಚಿತ್ರದಲ್ಲಿ ಬಹುತಾರಾಗಣವಿದೆ ಎನ್ನುತ್ತಾರೆ ತರುಣ್ ಸುಧೀರ್..

Tags