ಸುದ್ದಿಗಳು

ದಚ್ಚು ಚಿತ್ರಕ್ಕೆ ಡಬ್ಬಿಂಗ್ ಮಾಡಲಿರುವ ಬಾಲಿವುಡ್ ನ ನಟ

ಯಜಮಾನ’ ಸಿನಿಮಾದಲ್ಲೂ ಅನೂಪ್ ಮುಖ್ಯಪಾತ್ರ

ಬೆಂಗಳೂರು,ನ.18: ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ..ಇತ್ತೀಚೆಗೆಯಷ್ಟೇ  ‘ಯಜಮಾನ’ ಚಿತ್ರದ ಸಿನಿಮಾದ ಫಸ್ಟ್​ ಲುಕ್​ ಟೀಸರ್​ ದೊಡ್ಡ ಸದ್ದು ಮಾಡಿತ್ತು.  ಅಷ್ಟೇ ಅಲ್ಲದೆ ‘ಡಿ53’ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದೆ.. ಇನ್ನು ‘ ‘ಯಜಮಾನ’ ಡಬ್ಬಿಂಗ್ ಕೆಲಸ ಆರಂಭಿಸಿದೆ.  ಇನ್ನು ಈ ಚಿತ್ರದಲ್ಲಿ ಬಾಲಿವುಡ್​ ನಟ ಅನೂಪ್ ಠಾಕೂರ್​ ಸಿಂಗ್ ಈ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು​ ಡಬ್ಬಿಂಗ್ ಮಾಡೋಕೆ ಬೆಂಗಳೂರಿಗೆ ಆಗಮಿಸಿದ್ದಾರೆ.

 ಧೃತರಾಷ್ಟ್ರನ ಪಾತ್ರ ಮಾಡಿದ ಅನೂಪ್

ಅನೂಪ್ ಸಿಂಗ್ ಕನ್ನಡ,ತಮಿಳು ,ಹಿಂದಿ ಮತ್ತು ತೆಲುಗು ಚಿತ್ರರಂಗದ ಉದಯೋನ್ಮುಖ ನಟ. ಇವರು 2013 ರಲ್ಲಿ ಸ್ಟಾರ್ ಪ್ಲಸ್ ಚಾನೆಲ್‌ನಲ್ಲಿ ಪ್ರಸಾರವಾದ `ಮಹಾಭಾರತ’ ಸೀರಿಯಲ್ ನಲ್ಲಿ `ಧೃತರಾಷ್ಟ್ರನ ಪಾತ್ರ ಮಾಡಿದರು. ಇದು ಇವರಿಗೆ ಸಾಕಷ್ಟು ಹೆಸರು ತಂದು ಕೊಟ್ಟಿತು. ಬಾಡಿ ಬಿಲ್ಡರ್ ಆಗಿರುವ ಅನೂಪ್ 2015 ರಲ್ಲಿ ಬ್ಯಾಂಕಾಕ್ ನಲ್ಲಿ ನೆಡೆದ `ಬಾಡಿ ಬಿಲ್ಡಿಂಗ್’ ಸ್ಪರ್ಧೆಯಲ್ಲಿ ಚಿನ್ನ್ದ ಪದಕ ಗೆದ್ದಿದ್ದಾರೆ. `ರೋಗ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು.
Related image

 ಯಜಮಾನ ಸಿನಿಮಾದಲ್ಲೂ ಅನೂಪ್

ಇದೀಗ, ಥ್ರಿಲ್ಲರ್ ಮೂವೀ ಮಾಸ್ಟರ್ ಡೈರೆಕ್ಟರ್ ಸುನೀಲ್​ ಕುಮಾರ್ ದೇಸಾಯಿಯವರ ‘ಉದ್ಘರ್ಷ’ ಚಿತ್ರದ ಮೂಲಕ ಹೀರೋ ಕೂಡ ಆಗಿ ನಟಿಸುತ್ತಿದ್ದಾರೆ. ಇನ್ನು ‘ಯಜಮಾನ’ ಸಿನಿಮಾದಲ್ಲೂ ಅನೂಪ್​ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದು, ಡಬ್ಬಿಂಗ್ ಕೆಲಸಕ್ಕೆ ಬೆಂಗಳೂರಿಗೆ ಆಗಮಿಸಿದ್ದಾರೆ. ಇನ್ನು ಇಂಟ್ರೆಸ್ಟಿಂಗ್ ವಿಚಾರವೆಂದರೆ ಕನ್ನಡದಲ್ಲಿಯೇ ಅನೂಪ್​ ಡಬ್ಬಿಂಗ್ ಮಾಡುತ್ತಿದ್ದಾರೆ.

 

Tags

Related Articles