ಸುದ್ದಿಗಳು

ಪ್ರಯೋಗಾತ್ಮಕ ಚಿತ್ರಗಳು ಬರಲಿ ನಾವು ಯಾರಿಗೂ ಕಮ್ಮಿ ಇಲ್ಲ ಎಂದ ದಚ್ಚು ….!

ನಾವು ನಮ್ಮ ಭಾಷೆಯನ್ನು ಬೇರೆಯವರಿಗೆ ಕಲಿಸದೇ ಅವರ ಭಾಷೆಯಲ್ಲೇ ವ್ಯವಹಾರ ಮಾಡುತ್ತೇವೆ’

ಬೆಂಗಳೂರು,,23: ಒಬ್ಬ ನಾರ್ಮಲ್ ಕನ್ನಡ ಪ್ರೇಕ್ಷಕನ ಪ್ರಯೋಗಾತ್ಮಕ ಸಿನಿಮಾ ನೋಡಬೇಕು ಅಂದ್ರೆ ಕಾಲಿವುಡ್ ನ ತಮಿಳು ಸಿನಿಮಾಗಳ ಕಡೆ ನೋಡೋದೇ ಜಾಸ್ತಿ. ಜೊತೆಗೆ ಪಕ್ಕಾ ಆಕ್ಷನ್ ಸೌಂಡ್ ಸಿನಿಮಾಗಳು ಬೇಕೆಂದರೆ  ಟಾಲಿವುಡ್ ಗಳ ಕಡೆ ಮುಖ ಮಾಡ್ತಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್  ….!

ವಿದೇಶಿ ಲೊಕೇಷನ್ ನೋಡಬೇಕು ಎಂದರೆ ಬಾಲಿವುಡ್ ಕಡೆ ಕಣ್ಣು ಹೊರಳಿಸುತ್ತಾನೆ. ಇದರ ಜೊತೆಗೆ ಅಯ್ಯೋ ಕನ್ನಡ ಸಿನಿಮಾ ನೋಡಬೇಕಲ್ಲ ಅಂತ ಬೇಕಾಬಿಟ್ಟಿ ಮನಸ್ಸು ಮಾಡಿ ಹಾಗೋ ಹೀಗೋ ಅಂತ ಕನ್ನಡ ಸಿನಿಮಾ ನೋಡ್ತಾರೆ. ಇದು ಈಗೀನ ಪರಿಸ್ಥಿತಿ. ಹೌದು ಈ ಮಾತು ಹೇಳಿದವರು ಬೇರೆ ಯಾರು ಅಲ್ಲ. ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ . ನಾವು ನಮ್ಮ ಭಾಷೆಯನ್ನು ಬೇರೆಯವರಿಗೆ ಕಲಿಸದೇ ಅವರ ಭಾಷೆಯಲ್ಲೇ ವ್ಯವಹಾರ ಮಾಡುತ್ತೇವೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Image result for darshan

 

ಕನ್ನಡ ಸಿನಿಮಾಗಳಲ್ಲಿ ಟ್ರೆಂಡ್ ಬದಲಾಗುತ್ತಿದೆ …!

ನಮ್ಮಲ್ಲಿ ಈಗ ಟ್ರೆಂಡ್ ಬದಲಾಗುತ್ತಿದೆ. ಬೇರೆ ಯಾವ ಭಾಷೆಗಳಿಗೂ ಕಡಿಮೆ ಇಲ್ಲದಂತೆ ನಮ್ಮಲ್ಲಿ ಸಾಕಷ್ಟು ಪ್ರಯೋಗಾತ್ಮಕ ಚಿತ್ರಗಳು ಬರುತ್ತಿವೆ. ಇದು ನಮ್ಮ ಚಿತ್ರರಂಗಕ್ಕೆ ಪ್ಲಸ್ ಪಾಯಿಂಟ್. ಇದೇ ರೀತಿ ಚಿತ್ರಗಳ ಸಂಖ್ಯೆ ಮತ್ತಷ್ಟು ಹೆಚ್ಚಲಿ. ಜನರು ಆಶೀರ್ವಾದ ಮಾಡುತ್ತಾರೆ’ ಎಂದು ಹೊಸಬರ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದರು.

 

 

 

Tags