ಸುದ್ದಿಗಳು

ಅಂಬಿ ಮಾಮನ ಅಂತಿಮ ದರ್ಶನ ಪಡೆಯಲು ಬಂದ ದಚ್ಚು!!

ಯಜಮಾನ ಚಿತ್ರೀಕರಣ ಸ್ಥಗಿತ

ಬೆಂಗಳೂರು,ನ.26: ಅಂಬಿ ನಮ್ಮನ್ನೆಲ್ಲರನ್ನೂ ಅಗಲಿದ್ದಾರೆ.. ಇಡೀ ಚಿತ್ರರಂವೇ ಕಂಬನಿ ಮಿಡಿದಿದೆ.. ಇನ್ನು ಚಾಲೆಂಜಿಂಗ್ ಸ್ಟಾರ್​​ ದರ್ಶನ್ ‘ಯಜಮಾನ’ ಚಿತ್ರದ ಶೂಟಿಂಗ್ ಪ್ರಯುಕ್ತ ಚಿತ್ರತಂಡದೊಂದಿಗೆ ಸ್ವೀಡನ್ ಗೆ ತೆರಳಿತ್ತು.. ಚಿತ್ರದ ಶೂಟಿಂಗ್ ನಲ್ಲಿದ್ದ ದರ್ಶನ್ ಹಾಗೂ ಚಿತ್ರತಂಡಕ್ಕೆ ಅಂಬಿಯ ನಿಧನದ ಸುದ್ದಿ ಕೇಳಿ ಆಘಾತವಾಗಿತ್ತು.

Related image

 

ಕೂಡಲೇ ಚಿತ್ರೀಕರಣ ಸ್ಥಗಿತಗೊಳಿಸಿದ ತಂಡ, ಬೆಂಗಳೂರಿಗೆ ಹೊರಟಿತ್ತು. ಆದರೆ ದರ್ಶನ್ ಗೆ ಏರ್ ಪೋರ್ಟ್ ನಲ್ಲಿ ಟಿಕೆಟ್ ಸಿಗದೆ ತೊಂದರೆಯಾಗಿತ್ತು.. ಕೊನೆಗೂ ದಚ್ಚು ಇಂದು ಬೆಳಗ್ಗೆ ಹೆಚ್​ಎಎಲ್​​​ ಏರ್‌ಪೋರ್ಟ್‌ಗೆ ಬಂದಿಳಿದು ಅಂಬರೀಶ್ ಅಂತಿಮ ದರ್ಶನ ಪಡೆಯಲು ಕಂಠೀರವ ಸ್ಟೇಡಿಯಂಗೆ ಆಗಮಿಸಿ ಅಂಬಿ ಮಾಮನ ಅಂತಿಮ ದರ್ಶನ್ ಪಡೆದಿದ್ದಾರೆ

 

Tags