ಸುದ್ದಿಗಳು

ಅಂಬಿ ಅಪ್ಪಾಜಿಯ ಸಮಾಧಿ ಬಳಿ ದಚ್ಚು !!

ದರ್ಶನ್ ಗಂತೂ ಅಂಬಿ ತುಂಬಾ ಹತ್ತಿರ

ಬೆಂಗಳೂರು,ನ.27: ಅಂಬಿಯ ಅಗಲಿಕೆಗೆ ಇಡೀ ಚಿತ್ರರಂಗ ಮೌನವಾಗಿದ್ದು, ಚಿತ್ರರಂಗ ಬಹುದೊಡ್ಡ ನಟನನ್ನೇ ಕಳೆದುಕೊಂಡಿದೆ.. ಲಕ್ಷಾಂತರ ಅಭಿಮಾನಿಗಳನ್ನು ಅಗಲಿದ ಅಂಬಿ ಇನ್ನು ನೆನಪು ಮಾತ್ರ.. ಅಂಬಿಯನ್ನು ಕಳದುಕೊಂಡ ನೋವು ಇಡೀ ಕನ್ನಡ ಚಿತ್ರರಂಗವನ್ನೇ ಬಾಧಿಸುತ್ತಿದೆ. ಅದರಲ್ಲೂ ಅಂಬರೀಶ್ ಗೆ ಹಲವಾರು ನಟರು ಹತ್ತಿರವಾಗಿ ಹೆಚ್ಚು ಒಡನಾಟ ಇಟ್ಟುಕೊಂಡಿದ್ದರು.. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಗಂತೂ ಅಂಬಿ ತುಂಬಾ ಹತ್ತಿರ.. ಅಂಬಿಯನ್ನು ಅಪ್ಪಾಜಿ ಎಂದೇ ಕರೆಯುತ್ತಿದ್ದ ದಚ್ಚುಗೆ ​ ಅಂಬಿಯನ್ನು ಕಳದುಕೊಂಡ ಆಘಾತದಿಂದ ಹೊರ ಬರಲಾಗುತ್ತಿಲ್ಲ..

ಇದಕ್ಕೆ ಸಾಕ್ಷಿಯಂಬಂತೇ ದಚ್ಚು ಇಂದು  ಅಂಬಿ ಸಮಾಧಿ ಸ್ಥಳಕ್ಕೆ ಆಗಮಿಸಿ ಭಾರವಾದ ಹೃದಯದಿಂದಲೇ ಸಮಾಧಿ ಮುಂದೆ 5 ರಿಂದ 10 ನಿಮಿಷ ಮೌನವಾಗಿಯೇ ಕುಳಿತುಕೊಂಡರು. ಬಳಿಕ ಸಮಾಧಿಗೆ ಕೈ ಮುಗಿದು ವಾಪಸ್​ ಆಗಿದ್ದಾರೆ.. ‘ಬುಲ್ ಬುಲ್’, ‘ಅಂಬರೀಷ’, ‘ದೇವರ ಮಗ’, ‘ಅಣ್ಣಾವ್ರು’, ‘ಕುರುಕ್ಷೇತ್ರ’ ಚಿತ್ರದಲ್ಲಿ ಅಂಬಿಯೊಂದಿಗೆ ದಚ್ಚು ಅಭಿನಯಿಸಿದ್ದರು..

 

Tags