ಸುದ್ದಿಗಳು

ದರ್ಶನ್ ಗೆ ಬಿಬಿಎಂಪಿ ದಂಡ….

ತೆರಿಗೆ ಜೊತೆ ದಂಡ ಹಾಕಿದ ಪಾಲಿಕೆ

ಬೆಂಗಳೂರು,ಡಿ.2: ಸ್ತಿ ತರಿಗೆ ಉಳಿಸಿಕೊಂಡ ಹಿನ್ನೆಲೆಯಲ್ಲಿ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ 100 ರೂಪಾಯಿ ದಂಡವನ್ನು ಬಿಬಿಎಂಪಿ ಹಾಕಿದೆ.

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಕಾರಣ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಪಾಲಿಕೆ ದಂಡ ವಿಧಿಸಿದೆ. 2017-18 ನೇ ಸಾಲಿನ ಆಸ್ತಿ ತೆರಿಗೆ ಕಟ್ಟಬೇಕಿತ್ತು ದರ್ಶನ್‌. ಇನ್ನು, ಆರ್ ಆರ್ ನಗರದಲ್ಲಿರುವ ನಟ ದರ್ಶನ್ ಮನೆ ಇದೆ. ಆದರೆ ಮನೆಯ ಆಸ್ತಿ ತೆರಿಗೆ ಕಟ್ಟದೆ ಹಾಗೆ ಬಾಕಿ ಉಳಿಸಿಕೊಂಡಿದ್ದಾರೆ ನಟ ದರ್ಶನ್.

ತೆರಿಗೆ ಜೊತೆ ದಂಡ ಹಾಕಿದ ಪಾಲಿಕೆ

ಇನ್ನು, ಆಸ್ತಿ ತೆರಿಗೆ ಕಟ್ಟದ ಹಿನ್ನಲೆ ನೂರು ರೂಪಾಯಿ ದಂಡದ ಜೊತೆಗೆ 2164 ಬಡ್ಡಿ ಹಾಕಿದೆ ಬಿಬಿಎಂಪಿ. ನಟ ದರ್ಶನ್ 2017-18,2018-19 ನೇ ಸಾಲಿನ 12024 ರೂ.ಆಸ್ತಿ ತೆರಿಗೆ ಕಟ್ಬೇಕಿತ್ತು. ಆದ್ರೆ ಇದನ್ನ ಕಟ್ಟದ ಹಿನ್ನಲೆ ಬಡ್ಡಿ ಮತ್ತು ದಂಡ ಹಾಕಲಾಗಿದೆ.

ಒತ್ತುವರಿ ಜಾಗದಲ್ಲಿ ಮನೆ ಇರುವ ಆರೋಪ

ಈ ಹಿಂದೆ ಕೂಡ ದರ್ಶನ್ ಮನೆ ಕಟ್ಟಿರುವುದು ಒತ್ತುವರಿ ಮಾಡಿಕೊ‌ಡು ಅಂತಾ ಸರ್ವೆಯಲ್ಲಿ ಬಹಿರಂಗವಾಗಿತ್ತು. ಜೊತೆಗೆ ಮಾರ್ಕ್ ಕೂಡ ಮಡಲಾಗಿತ್ತು. ಆದರೆ ಕೆಲವೊಂದಿಷ್ಟು ಕಾರಣದಿಂದಾಗಿ ಒತ್ತುವರಿ ಜಾಗವನ್ನು ಸರ್ಕಾರವಾಗಲೀ, ಪಾಲಿಕೆಯಾಗಲೀ ಹಿಂಪಡೆದಿರಲಿಲ್ಲ. ಇದೀಗ ಮತ್ತೆ ಪಾಲಿಕೆ ಆಸ್ತಿ ತೆರಿಗೆ ವಿಧಿಸಿದೆ.

 

Tags