ಸುದ್ದಿಗಳು

ಡಿ ಬಾಸ್ ಅಭಿಮಾನಿಗಳಿಗೆ ಸೂಪರ್ ಡೂಪರ್ ಸುವರ್ಣಾವಕಾಶ!!

ದರ್ಶನ್​ ಅಭಿನಯದ ಸಿನಿಮಾ ‘ಯಜಮಾನ’ ಸೂಪರ ಹಿಟ್. ದರ್ಶನ್ ಅವರನ್ನು ಎಲ್ಲರೂ ಡಿ ಬಾಸ್ ಎಂದು ಪ್ರೀತಿಯಿಂದ ಕರೆಯುತ್ತಾರೆ. ಆ ಹೆಸರಲ್ಲೇ ಒಂದು ಪವರ್ ಇದೆ.ದರ್ಶನ್ ಅಭಿನಯದ ಎಲ್ಲಾ ಸಿನಿಮಾಗಳು ಸೂಪರ್ ಹಿಟ್.

ಈಗ ಏನಪ್ಪಾ ಅಂದ್ರೆ, ಇದೇ ಆಗಸ್ಟ್ 11ರಂದು ಸ್ಟಾರ್ ಸುವರ್ಣ ವಾಹಿನಿಯಲ್ಲಿ  ‘ಯಜಮಾನ’ ರಾತ್ರಿ 7 ಗಂಟೆಗೆ ಪ್ರಸಾರವಾಗಲಿದೆ. ಇದರ ವಿಶೇಷವಾಗಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ತಮ್ಮ ಅಫೀಶಿಯಲ್ ಖಾತೆಗಳಲ್ಲಿ ಡಿ ಬಾಸ್ ಅಭಿಮಾನಿಗಳಿಗೆ ಸುವರ್ಣಾವಕಾಶವನ್ನು ನೀಡಿದ್ದಾರೆ.

Image may contain: 2 people, people standing and text

ಡಿ ಬಾಸ್ ಥರಾನೇ ಪೋಸ್ ನೀಡಿ ಆ ಫೋಟೋವನ್ನು ಕಾಮೆಂಟ್  ಅಲ್ಲಿ ಪೋಸ್ಟ್ ಮಾಡಬೇಕು. ಇನ್ನು ಅದೃಷ್ಟಶಾಲಿಗಳಿಗೆ  ಡಿ ಬಾಸ್ ಸಹಿ ಮಾಡಿರುವ ಕಾಫಿ ಕಪ್ ಸಿಗಲಿದೆ. ಹಾಗಾದ್ರೆ ಇನ್ನೇಕ ತಡ, ಡಿ ಬಾಸ್ ಥರ ಪೋಸ್ ನೀಡಿ ಡಿ ಬಾಸ್ ಸಹಿ ಮಾಡಿರುವ ಕಪ್ ನಿಮ್ಮದಾಗಿಸಿಕೊಳ್ಳಿ.

ಯಜಮಾನ ಚಿತ್ರವು ಮಾರ್ಚ್ 1 ರಂದು ರಾಜ್ಯಾದ್ಯಂತ ತೆರೆ ಕಂಡಿತ್ತು. ಚಿತ್ರದಲ್ಲಿ ದರ್ಶನ್, ರಶ್ಮಿಕಾ ಮಂದಣ್ಣ, ತಾನ್ಯಾ ಹೋಪ್, ಧನಂಜಯ್, ಶಂಕರ್ ಅಶ್ವಥ್, ಸಂಜು ಬಸಯ್ಯ, ಸಾಧುಕೋಕಿಲ, ದೇವರಾಜ್ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ.

ಜೆ ಓಂ ಪ್ರಕಾಶ್ ನಿರ್ದೇಶಕ, ಹೃತಿಕ್ ರೋಷನ್ ತಾತ ಇನ್ನಿಲ್ಲ!!

#darshan #darshanmovies #darshansignaturecup

Tags