ಸುದ್ದಿಗಳು

ದಚ್ಚು 51 ನೇ ಸಿನಿಮಾ ‘ಕುರುಕ್ಷೇತ್ರ’ ಅಲ್ಲ, ‘ಯಜಮಾನ’!!

ಬೆಂಗಳೂರು,ಫೆ.17:

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನವು ಮಾರ್ಚ್ 1 ರಂದು ಬಿಡುಗಡೆಗೊಳ್ಳಲಿದೆ ಮತ್ತು ಇದು ದಚ್ಚು ಅವರ 51ನೇ ಸಿನಿಮಾವಾಗಲಿದೆ… ಅರೇ, 50ನೇ ಚಿತ್ರ ಬಿಡುಗಡೆಯಾಗದೆ ಹೇಗೆ 51ನೇ ಸಿನಿಮಾ ಅಂದುಕೊಂಡಿರಾ? ಇದಕ್ಕೆ ದಚ್ಚು ಉತ್ತರಿಸಿದ್ದಾರೆ, ಮುನಿರತ್ನ ಅವರ ಕುರುಕ್ಷೇತ್ರವು 50 ನೇ ಚಿತ್ರವಾಗಿ ಉಳಿಯುತ್ತದೆ ಮತ್ತು ಯಜಮಾನ ಅಲ್ಲ, ಯಾಕೆಂದರೆ ಕುರುಕ್ಷೇತ್ರವು ಯಜಮಾನಕ್ಕಿಂತ ಮುಂಚೆಯೇ ಘೋಷಿಸಲಾಗಿತ್ತು…

Image result for darshan yajamana

ಯಜಮಾನ’ ದರ್ಶನ್ ಅಭಿನಯದ 51ನೇ ಸಿನಿಮಾ

ಯಜಮಾನ ಚಿತ್ರಕ್ಕಿಂತಲೂ ಮೊದಲು ಬಿಡುಗಡೆಯಾಗಬೇಕಿದ್ದ ಸಿನಿಮಾ ಕುರುಕ್ಷೇತ್ರ.. ಇದು 3ಡಿ ಸಿನಿಮಾ ಆಗಿರೋದರಿಂದ ಪೋಸ್ಟ್ ಪ್ರೊಡಕ್ಷನ್​ ಕೆಲಸಗಳು ಇನ್ನೂ ನಡೀತಾ ಇರುವುದರಿಂದ ಸಿನಿಮಾ ರಿಲೀಸ್​ ಪೋಸ್ಟ್ ಪೋನ್​ ಆಗಿದೆ..  ಇನ್ನು ‘ಯಜಮಾನ’ ದರ್ಶನ್ ಅಭಿನಯದ 51ನೇ ಸಿನಿಮಾ ಆಗಿಯೇ ಬಿಡುಗಡೆಯಾಗಲಿದೆ.. ಈಗಾಗಲೇ ಯಜಮಾನ ಸಿನಿಮಾದ ಹಾಡುಗಳು, ಟ್ರೇಲರ್​ ಹವಾ ಕ್ರಿಯೇಟ್​ ಮಾಡಿದ್ದು, ಚಿತ್ರ ಬಿಡುಗಡೆಗಾಗಿ ಕಾಯುತ್ತಿದ್ದಾರೆ ದಚ್ಚು ಫ್ಯಾನ್ಸ್!!

ಶಿವಣ್ಣನ ‘ಶಿವ ಸೈನ್ಯ’ ಅಭಿಮಾನಿ ಸಂಘದಿಂದ ಯೋಧರಿಗಾಗಿ ವಿಶೇಷ ಕಾರ್ಯಕ್ರಮ

#balkaninews #darshan #yajamana #kurukshetra

Tags

Related Articles