ಸುದ್ದಿಗಳು

ಯಜಮಾನದಲ್ಲಿ ಅಪ್ಪ- ಮಗ

ಮತ್ತೊಮ್ಮೆ ದರ್ಶನ್ ಮತ್ತು ವಿನೀಶ್ ಒಂದೇ ಚಿತ್ರದಲ್ಲಿ

ಬೆಂಗಳೂರು, ಸ.11: ಡಿ ಬಾಸ್ ದರ್ಶನ್ ಅಭಿನಯದ ‘ಯಜಮಾನ’ ಚಿತ್ರದ ಚಿತ್ರೀಕರಣ ಕೊನೆಯ ಹಂತ ತಲುಪಿದೆ. ಈಗಾಗಲೇ ಈ ಚಿತ್ರವು ಕುತೂಹಲವನ್ನು ಮೂಡಿಸಿದ್ದು, ಈ ಚಿತ್ರದಲ್ಲಿ ದರ್ಶನ್ ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಮತ್ತೊಂದು ವಿಶೇಷವೆಂದರೆ ದರ್ಶನ್ ರ ಮಗ ವಿನೀಶ್ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಎರಡನೇ ಬಾರಿಗೆ

ಹೌದು, ನಟ ದರ್ಶನ್ ಹಾಗೂ ಅವರ ಮಗ ವಿನೀಶ್ ಈಗಾಗಲೇ ‘ಐರಾವತ’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಕ್ಲೈಮ್ಯಾಕ್ಸ ದೃಶ್ಯವೊಂದರಲ್ಲಿ ವಿನೀಶ್ ಪೋಲೀಸ್ ಯುನಿಪಾರ್ಮ್ ನಲ್ಲಿ ಕಾಣಿಸಿಕೊಂಡಿದ್ದರು. ಅಪ್ಪ-ಮಗ ಒಟ್ಟಿಗೆ ಕಾಣಸಿಕೊಂಡಿದ್ದನ್ನು ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಈ ಇಬ್ಬರೂ ‘ಯಜಮಾನ’ ಚಿತ್ರದಲ್ಲೂ ಅಭಿನಯಿಸಿದ್ದಾರೆ.

ಹಾಡಿನ ಚಿತ್ರೀಕರಣ

‘ಯಜಮಾನ’ ಚಿತ್ರದ ಹಾಡೊಂದರಲ್ಲಿ ವಿನೀಶ್ ಹಾಗೂ ದರ್ಶನ್ ತೆರೆ ಹಂಚಿಕೊಳ್ಳಲಿದ್ದು, ಈಗಾಗಲೇ ಚಿತ್ರೀಕರಣ ನಡೆದಿದೆ. ಈ ಚಿತ್ರವನ್ನು ಪಿ. ಕುಮಾರ್ ನಿರ್ದೇಶನ ಮಾಡುತ್ತಿದ್ದು, ಬ. ಸುರೇಶ್ ಮತ್ತು ಶೈಲಜಾ ನಾಗ್ ನಿರ್ಮಿಸುತ್ತಿದ್ದಾರೆ.

51 ನೇ ಚಿತ್ರ
ಸದ್ಯ ದರ್ಶನ್ ರ 50 ನೇ ಚಿತ್ರ ‘ಕುರುಕ್ಷೇತ್ರ’ ಇನ್ನೂ ತೆರೆಯನ್ನು ಕಂಡಿಲ್ಲ. ಇದರೊಂದಿಗೆ 51 ನೇ ಚಿತ್ರ ‘ಯಜಮಾನ’ದ ಚಿತ್ರೀಕರಣ ಮುಗಿಯುತ್ತಾ ಬಂದಿದೆ. ಹೀಗಾಗಿ ಯಾವ ಚಿತ್ರ ಮೊದಲು ತೆರೆಗೆ ಬರಲಿದೆ, ಯಾವ ಚಿತ್ರ ದರ್ಶನ್ ರ 50 ನೇ ಚಿತ್ರ ಎನಿಸಿಕೊಳ್ಳಲಿದೆ ಎಂಬುದು ಸದ್ಯಕ್ಕೆ ಪ್ರಶ್ನೆಯಾಗಿಯೇ ಉಳಿದಿದೆ.

ಈ ನಡುವೆ ದರ್ಶನ್ ರ 52 ನೇ ಚಿತ್ರ ‘ಒಡೆಯ’ ಮುಂದಿನ ವಾರದಿಂದ ಚಿತ್ರೀಕರಣ ಪ್ರಾರಂಭಿಸಲಿದೆ. ಇನ್ನು ಈ ಚಿತ್ರಕ್ಕೆ ನಾಯಕಿಯ ಹುಡುಕಾಟ ನಡೆಯುತ್ತಿದ್ದು, ಎಂ ಡಿ ಶ್ರೀಧರ್ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

Tags