ಸುದ್ದಿಗಳು

ಸ್ಯಾಂಡಲ್ ವುಡ್ ಈ ನಟಿಯ ಬ್ಯೂಟಿಗೆ ಫಿದಾ ಆಗಿದ್ದಾರಂತೆ ಛಾಲೆಂಜಿಂಗ್ ಸ್ಟಾರ್…!

ಛಾಲೆಂಜಿಂಗ್ ಸ್ಟಾರ್ ದರ್ಶನ್

ಬೆಂಗಳೂರು, ನ.21: ನಟ ದರ್ಶನ್ ಸಾಮಾನ್ಯವಾಗಿ ಕೊಂಚ ನಾಚಿಕೊಳ್ಳುವ ಸ್ವಭಾವ. ಯಾವುದೇ ಕಾರ್ಯಕ್ರಮದ ವೇದಿಕೆಯಲ್ಲೂ ಹೆಚ್ಚು ಮಾತನಾಡದೆ,  ಬಂದ ವಿಷಯವನ್ನಷ್ಟೇ ಮಾತನಾಡಿ ಅಲ್ಲಿಂದ ಜಾಗಖಾಲಿ ಮಾಡುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್. ಇದೀಗ ಈ ದರ್ಶನ್ ಸ್ಯಾಂಡಲ್ ವುಡ್ ನ 38ರ ಈ ನಟಿಯ ಸೌಂದರ್ಯಕ್ಕೆ ಮಾರುಹೋಗಿದ್ದಾರಂತೆ. ಇಷ್ಟು ವಯಸ್ಸಾದರೂ ಬ್ಯೂಟಿ ಉಳಿಸಿಕೊಂಡಿರುವ ಈ ಕ್ಯೂಟಿಯ ಬ್ಯೂಟಿ ಸಿಕ್ರೇಟ್ ಏನಪ್ಪಾ ಎಂದು ಪ್ರಶ್ನಿಸಿದ್ದಾರೆ ಛಾಲೆಂಜಿಂಗ್ ಸ್ಟಾರ್.

‘ಅನುಕ್ತಾ’ ಸಿನಿಮಾ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ದರ್ಶನ್

ಅನುಕ್ತಾ ಸಿನಿಮಾ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟ ದರ್ಶನ್, ಕನ್ನಡ ಸಿನಿಮಾ ರಂಗದಲ್ಲಿ ನಡೆಯುತ್ತಿರುವ ಮೋಸ , ವಂಚನೆ, ಭಾಷಾ ಸಮಸ್ಯೆಯ ಕುರಿತಂತೆ ಬೇಸರ ವ್ಯಕ್ತಪಡಿಸಿರುವ ನಟ ದರ್ಶನ್, ಚಿತ್ರರಂಗದಲ್ಲಿ ತನಗೆ ಇಷ್ಟವಾದ ನಟಿಯ ಕುರಿತಂತೆಯೂ ಹೇಳಿಕೊಂಡಿದ್ದಾರೆ.2001ರಲ್ಲಿ ‘ಮಿಸ್ಟರ್ ಹರಿಶ್ಚಂದ್ರ’  ಸಿನಿಮಾದಲ್ಲಿ ನಾನು ಅನುಪ್ರಭಾಕರ್ ಜೊತೆಗೆ ನಟಿಸಿದ್ದೇನೆ. ಅದೊಂದು ಅದ್ಬುತ ಅನುಭವ ಎಂದಿರುವ ದರ್ಶನ್, ವಯಸ್ಸು 38 ಆದರೂ ಆಕೆಯದ್ದು ಮಾಸದ ಸೌಂದರ್ಯ ಎಂದಿದ್ದಾರೆ. ಅಂದಹಾಗೆ ನಟಿ ಅನುಪ್ರಭಾಕರ್, ರಘುಮುಖರ್ಜಿಯನ್ನು ವಿವಾಹವಾಗಿ ದಂಪತಿಗೆ ಇದೀಗ ಮುದ್ದಾದ ಹೆಣ್ಣುಮಗುವಿದೆ.  ಅನುಪ್ರಭಾಕರ್ ಆರಂಭದಿಂದಲೂ ಅದೇ ರೀತಿಯ ಸೌಂದರ್ಯ ಉಳಿಸಿಕೊಂಡು ಬಂದಿದ್ದು, ಆಕೆಯ ಸೌಂದರ್ಯಕ್ಕೆ ಕೇವಲ ಅಭಿಮಾನಿಗಳು ಮಾತ್ರವಲ್ಲ, ಸ್ವತಃ ದರ್ಶನ್ ಕೂಡ ಫಿದಾ ಆಗಿದ್ದಾರಂತೆ. ಅನುಪ್ರಭಾಕರ್ ಅವರ ಫಿಟ್ ನೆಸ್, ಸೌಂದರ್ಯ ಹಾಗೆ ಉಳಿದಿದ್ದು, ನನಗೆ ಮಾತ್ರ ವಯಸ್ಸಾಗುತ್ತಿದೆ ಎಂದಿದ್ದಾರೆ ನಟ ದರ್ಶನ್.

Tags

Related Articles