ಸುದ್ದಿಗಳು

‘ಗಂಡುಗಲಿ ಮದಕರಿ ನಾಯಕ’ ನಿಗೆ ಜೋಡಿಯಾಗಲಿರುವ ‘ಮಹಾನಟಿ’ ಖ್ಯಾತಿಯ ಕೀರ್ತಿ ಸುರೇಶ್…!!?!!

ಬೆಂಗಳೂರು, ಫೆ.20:

ಚಂದನವನದ ಬಹುಬೇಡಿಕೆಯ ನಟ ಛಾಲೆಂಜಿಂಗ್ ಸ್ಟಾರ್ ದರ್ಶನ್. ಸದ್ಯ ಮಾರ್ಚ್ 1ರಂದು ರಾಜ್ಯಾದ್ಯಂತ ‘ಯಜಮಾನ’ ಚಿತ್ರ ಬಿಡುಗಡೆಯಾಗುತ್ತಿದೆ. ಅಷ್ಟೇ ಅಲ್ಲದೇ ಬಹು ತಾರಾಗಣವಿರುವ ‘ಕುರುಕ್ಷೇತ್ರ’  ಹಾಗೂ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿರುವ ‘ಒಡೆಯ’ ಸಿನಿಮಾ ಬಹುನಿರೀಕ್ಷಿತದಿಂದ ಕೂಡಿದೆ. ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಬಿಡುವಿಲ್ಲದಂತೇ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಮೂಲಕ ಈ ವರ್ಷ ಬರೋಬ್ಬರಿ ಮೂರು ಸಿನಿಮಾಗಳು ಬೆಳ್ಳಿತೆರೆಯ ಮೇಲೆ ರಾರಾಜಿಸಲಿದೆ.

ಗಂಡುಗಲಿ ಮದಕರಿ ನಾಯಕನಿಗೆ ಜೊತೆಯಾಗುವಳೇ ಟಾಲಿವುಡ್ ಬೆಡಗಿ?

ತಮಿಳು, ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿರುವ ಕೀರ್ತಿ ಸುರೇಶ್, ಬಹುತೇಕ ಎಲ್ಲಾ ಕಲಾವಿದರ ಜೊತೆಯಲ್ಲಿ ನಟಿಸಿರುವ ಕೀರ್ತಿ ಇವರ ಪಾಲಾಗಿದೆ. ಹಾಗೂ ‘ಮಹಾನಟಿ’ ಬಯೋಪಿಕ್ ನಲ್ಲಿ ಮನೋಘ್ನವಾಗಿ ನಟಿಸುವುದರ ಮೂಲಕ ಎಲ್ಲರಿಗೂ ಪ್ರೀತಿ ಪಾತ್ರವಾದ ನಟಿಯಾಗಿದ್ದಾರೆ. ತಮಿಳು ಮತ್ತು ತೆಲುಗು  ಚಿತ್ರರಂಗದಲ್ಲಿ ಅಪಾರ ಖ್ಯಾತಿಗಳಿಸಿದ್ದಾರೆ. ಇದೀಗ ಈ ಜನಪ್ರಿಯ ನಟಿ ಕನ್ನಡ ಚಿತ್ರರಂಗಕ್ಕೆ ಬರಲಿದ್ದಾರೆ ಎನ್ನುವ ಗುಸು ಗುಸು ಮಾತು ಸ್ಯಾಂಡಲ್ ವುಡ್ ನಲ್ಲಿ ಕೇಳಿಬರುತ್ತಿದೆ.

ಹೌದು, ಕೀರ್ತಿ ಸುರೇಶ್ ಇದೀಗ ಕನ್ನಡ ಚಿತ್ರರಂಗಕ್ಕೆ ಬರುತ್ತಾರೆ ಎನ್ನುವ ಗಾಸಿಪ್ ಕೇಳಿ ಬರುತ್ತಿದ್ದು, ಇದೀಗ ಈ ನಟಿ ದರ್ಶನ್ ಜೊತೆ ತೆರೆ ಹಂಚಿಕೊಳ್ಳುತ್ತಾರೆ ಎನ್ನಲಾಗಿದೆ. ದರ್ಶನ್ ಮುಂದಿನ ಚಿತ್ರವಾದ  ‘ಗಂಡುಗಲಿ ಮದಕರಿ ನಾಯಕ’ ಚಿತ್ರದಲ್ಲಿ ನಟಿಸುತ್ತಾರೆ ಎನ್ನಲಾಗಿದ್ದು, ಈ ಚಿತ್ರಕ್ಕೆ  ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ‘ಮಹಾನಟಿ’ ಸಾವಿತ್ರಿಯವರ ಜೀವನಾಗಾಥೆಯಲ್ಲಿ ನಟಿಸಿದ ಇವರು ದರ್ಶನ್ ಜೊತೆಗೆ ಐತಿಹಾಸಿಕ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗಿದೆ. ಆದರೆ ಈ ಗುಸು ಗುಸು ಎಷ್ಟರ ಮಟ್ಟಿಗೆ ನಿಜವೆಂಬುದನ್ನು ತಿಳಿಯಲು ಇನ್ನೂ ಕೆಲವು ದಿನಗಳು ಕಾಯಲೇಬೇಕು.

ಚಿತ್ರರಂಗಕ್ಕೆ ಒಬ್ಬನೇ ‘ಯಜಮಾನ’, ಅದು ಸಾಹಸಸಿಂಹ ವಿಷ್ಣುವರ್ಧನ್ ಮಾತ್ರ : ನಟ ದರ್ಶನ್

#darshan #gandugallimadakarinayakakannadamovie #sandalwood #kannadamovies #balkaninnews #darshanandkeerthysuresh #keerthysureshmovies #tollywood #rocklinevenkatesh

 

Tags