ಸುದ್ದಿಗಳು

ದರ್ಶನ್ ಚಿತ್ರಕ್ಕೆ ರಮ್ಯಾ ನಾಯಕಿ

ಮತ್ತೆ ಚಿತ್ರರಂಗಕ್ಕೆ ಮರಳುವ ಸೂಚನೆ ಕೊಟ್ಟ ರಮ್ಯಾ

ಬೆಂಗಳೂರು, ಅ.06: ಸ್ಯಾಂಡಲ್ ವುಡ್ ನ ಮೋಹಕ ತಾರೆ. ಗೋಲ್ಡನ್ ಕ್ವೀನ್ ಅಂತೆಲ್ಲಾ ಅಭಿಮಾನಿಗಳಿಂದ ಕರಿಸಿಕೊಂಡಿದ್ದ ನಟಿ ರಮ್ಯಾ ಚಿತ್ರರಂಗ ತೊರೆದು ಸುಮಾರು ನಾಲ್ಕು ವರ್ಷಗಳೇ ಕಳೆದಿವೆ. ಆದರೆ ರಮ್ಯಾ ಎರಡು ಸಾವಿರದ ಹತ್ತೊಂಬತ್ತಕ್ಕೆ ಮತ್ತೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಸೂಚನೆ ಕೊಟ್ಟಿದ್ದಾರೆ .ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಗಂಡುಗಲಿ ವೀರ ಮದಕರಿ’  ಸಿನಿಮಾಗೆ ರಮ್ಯಾನೇ ನಾಯಕಿ ಎನ್ನುವ ಸುದ್ದಿ ಸದ್ಯ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಈ ಹಿಂದೆ ರಮ್ಯಾ 2019 ರಲ್ಲಿ ಮತ್ತೆ ಸಿನಿಮಾ ರಂಗಕ್ಕೆ ಬರುತ್ತೇನೆ ಎಂದು  ಸುಳಿವು ಕೊಟ್ಟಿದ್ದರು. ಅದರಂತೆಯೇ ಇತ್ತೀಚೆಗಷ್ಟೇ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟು ಮತ್ತೆ ಸೇರಿಕೊಂಡಿದ್ದಾರೆ.  ಆದ್ದರಿಂದ ರಮ್ಯಾ ಚಿತ್ರರಂಗದಲ್ಲಿ ಮತ್ತೆ ನಾಯಕಿಯಾಗಿ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ .

ರಾಕ್ ಲೈನ್  ನಿರ್ಮಾಣದ ಚಿತ್ರದಲ್ಲಿ ರಮ್ಯಾ

ನಿರ್ಮಾಪಕ ಮುನಿರತ್ನ ಹಾಗೂ ರಾಕ್ ಲೈನ್ ವೆಂಕಟೇಶ್ ಅವರೊಂದಿಗೆ ರಮ್ಯಾ ಉತ್ತಮವಾದ ಸ್ನೇಹ ಬಾಂಧವ್ಯವನ್ನು ಹೊಂದಿದ್ದಾರೆ. ಈ ಹಿಂದೆಯೇ ಕಠಾರಿವೀರ ಸುರಸುಂದರಾಂಗಿ ಚಿತ್ರದಲ್ಲೂ ಕೂಡ ರಮ್ಯಾ ನಾಯಕಿಯಾಗಿ ಅಭಿನಯಿಸಿದ್ದರು ಇದೇ ಕಾರಣದಿಂದ ರಾಕ್ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿರುವ ಮತ್ತೊಂದು ಐತಿಹಾಸಿಕ ಚಿತ್ರದಲ್ಲಿ ರಮ್ಯಾ ನಾಯಕಿಯಾಗಲು ಒಪ್ಪಿಗೆ ನೀಡುವ ಸಾಧ್ಯತೆಗಳು ಹೆಚ್ಚಾಗಿವೆ .

Tags