ಸುದ್ದಿಗಳು

ದರ್ಶನ್ ಜೊತೆಗೆ ಸೆಲ್ಫಿ ಹಾಕಿದ ರಶ್ಮಿಕಾ

'ಯಜಮಾನ' ಚಿತ್ರೀಕರಣದಲ್ಲಿ ತೆಗೆದಂತಹ ಪೋಟೋ ಇದಾಗಿದೆ.

ಬೆಂಗಳೂರು, ನ.26: ಸದ್ಯ ‘ಯಜಮಾನ’ ಸಿನಿಮಾ ಚಿತ್ರೀಕರಣ ಭರದಿಂದ ಸಾಗಿತ್ತು. ಆದರೆ, ಅಂಬರೀಶ್ ಸಾವಿನ ಸುದ್ದಿಯಿಂದಾಗಿ ಚಿತ್ರೀಕರಣವನ್ನು ರದ್ದುಗೊಳಿಸಿ ಚಿತ್ರತಂಡ ಬೆಂಗಳೂರಿಗೆ ಆಗಮಿಸಿತು.

ಕೊರೆಯುವ ಚಳಿಯಲ್ಲಿ ರಶ್ಮಿಕಾ ದರ್ಶನ್

ನಟ ದರ್ಶನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಸಿನಿಮಾ ‘ಯಜಮಾನ’. ಟೈಟಲ್ ಹಾಗೂ ಪೋಸ್ಟರ್ ಮೂಲಕವೇ ಬಾರೀ ನಿರೀಕ್ಷೆಯನ್ನು ಹುಟ್ಟುಹಾಕಿರುವ ಸಿನಿಮಾ. ಈಗಾಗಲೇ ಈ ಸಿನಿಮಾ ಮುಗಿಯುವ ಹಂತಕ್ಕೆ ಬಂದಿದ್ದು, ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ ಎನ್ನಲಾಗಿದೆ.

ದರ್ಶನ್ ಜೊತೆ ರಶ್ಮಿಕಾ

ಹೌದು, ಪಿ. ಕುಮಾರ್​ ನಿರ್ದೇಶನದ ಸಿನಿಮಾ ಯಜಮಾನ. ಬಿ.ಸುರೇಶ್ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಸಿನಿಮಾ ಈಗಾಗಲೇ ಶೂಟಿಂಗ್ ಕಂಪ್ಲೀಟ್ ಮಾಡಲಿದೆ. ಇದೀಗ ಸಿನಿಮಾದ ರೊಮ್ಯಾಂಟಿಕ್ ಹಾಡೊಂದನ್ನು ಚಿತ್ರೀಕರಣ ಮಾಡುವ ಸಲುವಾಗಿ ಇಡೀ ಚಿತ್ರತಂಡ ಸ್ವೀಡನ್ ನಲ್ಲಿ ಬೀಡು ಬಿಟ್ಟಿತ್ತು, ಆ ಸಮಯದಲ್ಲಿ, ಕೊರೆಯುವ ಚಳಿಯಲ್ಲಿ ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಇವೆಲ್ಲದರ ನಡುವೆ ರಶ್ಮಿಕಾ ಮಂದಣ್ಣ ದರ್ಶನ್ ಜೊತೆಯಲ್ಲಿರುವ ಫೋಟೋವೊಂದನ್ನು ತೆಗೆದುಕೊಂಡಿದ್ದಾರೆ‌. ಇನ್ನು ಈ ಫೋಟೋನ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಾಕಿಕೊಂಡಿದ್ದಾರೆ.

Tags