ಸುದ್ದಿಗಳು

ಚಾಲೆಂಜಿಂಗ್ ಸ್ಟಾರ್ ರನ್ನು ಭೇಟಿ ಮಾಡಿದ ಟಾಲಿವುಡ್ ಸ್ಟಾರ್ ನಿರ್ದೇಶಕ

ಬೆಂಗಳೂರು, ಸೆ.22: ‘ರಂಗಸ್ಥಲಂ’ ಸಿನಿಮಾ ನಿರ್ದೇಶಕ ಸುಕುಮಾರ್ ಇತ್ತೀಚೆಗಷ್ಟೇ ಹೊಸಬರ ಪ್ರಯತ್ನಕ್ಕೆ ಪ್ರಶಂಸೆ ನೀಡಲು ಚಂದನವನಕ್ಕೆ ಕಾಲಿಟ್ಟಿದ್ದರು. ‘ರಂಗಸ್ಥಲಂ’ ನಂತಹ ಹಿಟ್ ಸಿನಿಮಾ ನೀಡಿರುವ ಸುಕುಮಾರ್ ಕನ್ನಡ ಚಿತ್ರಕ್ಕೆ ಆಲ್ ದಿ ಬೆಸ್ಟ್ ಹೇಳಿದ್ದನ್ನು ಕಂಡ ಸಿನಿ ಪ್ರೇಕ್ಷಕರು  ಟಾಲಿವುಡ್ ನಿರ್ದೇಶಕರನ್ನು ಮೆಚ್ಚಿಕೊಂಡಿದ್ದರು. ಇನ್ನು ಬೆಂಗಳೂರಿನಲ್ಲೇ ಉಳಿದುಕೊಂಡಿರುವ ಸುಕುಮಾರ್ ಇತ್ತೀಚೆಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಭೇಟಿ ಮಾಡಿದ್ದಾರೆ.

ಸುಕುಮಾರ್ ಮೀಟ್ಸ್ ಡಿ‌ಬಾಸ್

ಕಮರ್ಷಿಯಲ್ ಎಂಟರ್ಟೈನ್ಮೆಂಟ್ ಸಿನಿಮಾ ನೀಡುವಲ್ಲಿ ಯಶಸ್ವಿ ನಿರ್ದೇಶಕನಾಗಿರುವ ಸುಕುಮಾರ್ ಹಾಗೂ ದರ್ಶನ್ ಅವರ ಭೇಟಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಇವರಿಬ್ಬರ ಕಾಂಬಿನೇಷನ್ ನಲ್ಲಿ ಸಿನಿಮಾ ಬಂದರೆ ಚೆನ್ನಾಗಿರುತ್ತದೆ ಎನ್ನುವ ಆಲೋಚನೆಯಲ್ಲಿದ್ದಾರೆ.

ಕನ್ನಡದಲ್ಲಿ ಸುಕುಮಾರ್ ನಿರ್ದೇಶನ

ಸುಕುಮಾರ್ ಕನ್ನಡ ಚಿತ್ರ ನಿರ್ದೇಶನ ಮಾಡಿದರೇ ಚೆನ್ನಾಗಿರುತ್ತೆ ಎನ್ನುತಿದೆ ಪ್ರೇಕ್ಷಕರ ವರ್ಗ. ಆದರೆ ದರ್ಶನ್ ಹಾಗೂ ಸುಕುಮಾರ್ ಭೇಟಿ ಸಾಮಾನ್ಯ ಉಭಯ‌ ಕುಶಲೋಪರಿ ಆಗಿಯೇ ಉಳಿಯುತ್ತಾ ಕಾದು ನೋಡಬೇಕು.

ದರ್ಶನ್ ಸಿನಿಮಾಗಳಲ್ಲಿ ಬ್ಯುಸಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಸಿನಿಮಾಗಳಲ್ಲಿ ನಿರತರಾಗಿದ್ದಾರೆ. ಯಜಮಾನ, ಕುರುಕ್ಷೇತ್ರ,  ಒಡೆಯ ಸೇರಿದಂತೆ ಮದಕರಿ ಚಿತ್ರದಲ್ಲಿ ಅಭಿನಯ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಡಿ ಬಾಸ್. ಇವುಗಳ ನಂತರ ತರುಣ್ ಸುದೀರ್ ನಿರ್ದೇಶನದಲ್ಲಿಯೂ ದಚ್ಚು ಅಭಿನಯ ಮಾಡಲಿದ್ದಾರೆ .

Tags