ಸುದ್ದಿಗಳು

ಡಿ ಬಾಸ್ ರವರ ‘ರಾಬರ್ಟ್’ ಸಿನಿಮಾ ಮುಹೂರ್ತ ಯಾವಾಗ ಗೊತ್ತೆ…?

ಬೆಂಗಳೂರು, ಏ.16:

ಈ ಕೈಗೆ ಶಬರಿ ಮುಂದೆ ಸೋಲೋದು ಗೊತ್ತು, ರಾವಣನ ಮುಂದೆ ಗೆಲ್ಲೋದು ಗೊತ್ತು ಎನ್ನುವ ಪಂಚಿಂಗ್ ಲೈನ್‌ ಗಳ ಮೂಲಕ ಅಭಿಮಾನಿಗಳ ಎದೆಯಲ್ಲಿ ಕಿಚ್ಚು ಹಚ್ಚಿಸಿದ ರಾಬರ್ಟ್ ಸಿನಿಮಾ ಮುಹೂರ್ತಕ್ಕೆ ದಿನಾಂಕ ನಿಗಧಿಯಾಗಿದೆಯಂತೆ. ಈಗಾಗಲೇ ಸಕ್ಕತ್ ಕುತೂಹಲ ಮೂಡಿಸಿರುವ ಈ ಚಿತ್ರ ಯಾವಾಗ ಬರುತ್ತಪ್ಪ ಅಂತಾ ಅಭಿಮಾನಿಗಳು ಕಾಯ್ತಾ ಇರೋದಂತೂ ನಿಜ. ಇದೀಗ ಈ ಚಿತ್ರದ ಮುಹೂರ್ತ ಇದೇ ತಿಂಗಳಲ್ಲಿ ನೆರವೇರಲಿದೆ..

ವಿನಾಯಕನ ಸನ್ನಿಧಿಯಲ್ಲಿ ಮುಹೂರ್ತ..?

ಸದ್ಯ ಲೋಕಸಭಾ ಅಖಾಡದಲ್ಲಿ ಬ್ಯುಸಿಯಾಗಿರುವ ನಟ ದರ್ಶನ್ ಇನ್ನೊಂದು ಎರಡ್ಮೂರು ದಿನಗಳಲ್ಲಿ ಫ್ರೀಯಾಗಲಿದ್ದಾರೆ. ಇಂದು ಒಂದು ದಿನ ಬಹಿರಂಗ ಪ್ರಚಾರ ನಡೆಸುವ ಈ ನಟ, ನಂತರ ಸಿನಿಮಾಗಳಲ್ಲಿ ಬ್ಯುಸಿಯಾಗಲಿದ್ದಾರೆ. ಇದೀಗ ಈ ನಟನ ರಾಬರ್ಟ್ ಸಿನಿಮಾ ಸ್ಕ್ರಿಪ್ಟ್ ಪೂಜೆ ಮುಗಿದಿತ್ತು. ಇದೀಗ ಮುಹೂರ್ತ ಕಾರ್ಯ ನಡೆಯಲಿದೆಯಂತೆ. ಇದೇ ಏಪ್ರಿಲ್ 24ರ ಮುಂಜಾನೆ ಮೋದಿ ಆಸ್ಪತ್ರೆ ಬ್ರಿಡ್ಜ್ ಬಳಿ ಇರುವ ವಿನಾಯಕನ ಸನ್ನಿಧಿಯಲ್ಲಿ ರಾಬರ್ಟ್ ಚಿತ್ರದ ಮುಹೂರ್ತ ನೆರವೇರಲಿದೆ ಎನ್ನುವ ಮಾತುಗಳು ದಟ್ಟವಾಗಿದೆ.

ಕಂಠೀರವ ಸ್ಟುಡಿಯೋದಲ್ಲಿ ಶೂಟಿಂಗ್

ಇನ್ನೂ ಇದಾದ ನಂತರ ಕಂಠೀರವ ಸ್ಟುಡಿಯೋದ ಬೃಹತ್ ಸೆಟ್‌ ನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆಯಂತೆ. ತರುಣ್ ಸುಧೀರ್ ಆ್ಯಕ್ಷನ್ ಕಟ್‌ ನಲ್ಲಿ ಮೂಡಿಬರಲಿದೆ ರಾಬರ್ಟ್ ಚಿತ್ರ. ಇನ್ನೂ ಇದಕ್ಕೆ ಹೆಬ್ಬುಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಬಂಡವಾಳ ಹೂಡುತ್ತಿದ್ದಾರೆ.

Image result for darshan and tarun sudheer

Image result for darshan and tarun sudheer

ಚಕ್ ರಸೆಲ್ ಗುರುಗಳಾಗಿ ಸಿಕ್ಕಿದ್ದು ನನ್ನ ಭಾಗ್ಯ : ಆಶಾ ಭಟ್

#balkaninews #sandalwood #d53 #robertkannadamovie #kannadamovies #darshanandtarunsudheer

Tags

Related Articles