ಸುದ್ದಿಗಳು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತಡೇ ಗೆ ವಿಶೇಷವಾಗಿ ರಿಲೀಸ್ ಆದ ಪೋಸ್ಟರ್ ಗಳು

ಮಾರ್ಚ್ 1 ರಂದು ‘ಯಜಮಾನ’ ಬಿಡುಗಡೆ

ಬೆಂಗಳೂರು.ಫೆ.16

ಇಂದು ಚಂದನವನದ ‘ಸಾರಥಿ’ ಡಿ-ಬಾಸ್ ದರ್ಶನ್ ರ 42 ನೇ ಜನ್ಮ ದಿನ. ಈಗಾಗಲೇ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸಲು ರಾಜ್ಯದ ಮೂಲೆ ಮೂಲೆಯಿಂದ ಅಭಿಮಾನಿಗಳು ಆಗಮಿಸಿ ಚಕ್ರವರ್ತಿಗೆ ಶುಭಾಶಯಗಳ ಮಹಾಪೂರ ಹರಿಸಿದ್ದಾರೆ.

ಸರಳ ಹುಟ್ಟುಹಬ್ಬ

ಹಿರಿಯ ನಟ ಅಂಬರೀಶ್ ಹಾಗೂ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ನಿಧನದ ಹಿನ್ನೆಲೆಯಲ್ಲಿ ದರ್ಶನ್ ಈ ಬಾರಿಯ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುವುದಾಗಿ ಹೇಳಿದ್ದರು. ಹೀಗಾಗಿ ಅವರ ಮಾತಿಗೆ ಬೆಲೆ ಕೊಟ್ಟ ಅಭಿಮಾನಿಗಳು ಕೇಕ್ ಕತ್ತರಿಸದೇ ಅವರ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸುತ್ತಿದ್ದಾರೆ. ಹಾಗೆಯೇ ಸಿದ್ಧಗಂಗಾ ಮಠದ ದಾಸೋಹ ಸೇವೆಗಾಗಿ ಅಭಿಮಾನಿಗಳು ಅಕ್ಕಿ, ಬೇಳೆ ಸೇರಿದಂತೆ ದಿನಸಿ ಪದಾರ್ಥಗಳನ್ನು ಕೊಡುತ್ತಿದ್ದಾರೆ.

ರಿಲೀಸ್ ಆದ ಪೋಸ್ಟರ್ ಗಳು

ಮುಂದಿನ ತಿಂಗಳ 1 ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿರುವ ‘ಯಜಮಾನ’ ‘ಕುರುಕ್ಷೇತ್ರ’, ‘ಒಡೆಯ’, ‘ರಾಬರ್ಟ್’, ‘ಗಂಡುಗಲಿ ಮದಕರಿ ನಾಯಕ’, ‘ಡಿ-55’ ಚಿತ್ರಗಳ ಹೊಸ ಪೋಸ್ಟರ್ ಗಳು ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಪಡೆಯುತ್ತಿವೆ.

 

ಕುತೂಹಲ ಮೂಡಿಸಿರುವ ಸಿನಿಮಾ

ಹೆಚ್ಚು ಕಡಿಮೆ ಒಂದುವರೆ ವರ್ಷದಿಂದ ದರ್ಶನ್ ನಟಿಸಿರುವ ಯಾವ ಸಿನಿಮಾಗಳು ರಿಲೀಸ್ ಆಗಿರಲಿಲ್ಲ. ಇದರೊಂದಿಗೆ ಇವರು ನಟಿಸಿರುವ 50 ನೇ ಸಿನಿಮಾ ‘ಕುರುಕ್ಷೇತ್ರ’ದ ಬಗ್ಗೆಯೂ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಕೆಲವು ಅನಿವಾರ್ಯ ಕಾರಣಗಳಿಂದ ಈ ಸಿನಿಮಾ ಎಪ್ರಿಲ್ ತಿಂಗಳಲ್ಲಿ ತೆರೆಗ ಬರಲಿದೆ. ಇದಕ್ಕೂ ಮುನ್ನ ಅವರು ನಟಿಸಿದ 51 ನೇ ಸಿನಿಮಾ ‘ಯಜಮಾನ’ ರಿಲೀಸ್ ಆಗುತ್ತಿದೆ.

ಇನ್ನು ಈಗಾಗಲೇ ‘ಯಜಮಾನ’ ಚಿತ್ರದ ಹಾಡುಗಳು, ಟೀಸರ್, ಟ್ರೈಲರ್.. ಸಾಕಷ್ಟು ಹಿಟ್ ಆಗಿದೆ. ಹೀಗಾಗಿ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಒನ್ಸ್ ಅಗೇನ್ ಹ್ಯಾಪಿ ಬರ್ತಡೇ ಚಾಲೆಂಜಿಂಗ್ ಸ್ಟಾರ್ ದರ್ಶನ್..

“ನನ್ನ ಹೃದಯ ಒಡೆದು ಹೋಯ್ತು..ಇದೊಂದು ದೊಡ್ಡ ದುರಂತ” ಎಂದ ಮಿಸ್ಟರ್ ಪರ್ಫೆಕ್ಟ್!!

#darshan #balkaninews #birthday, #filmnews, #kannadasuddigalu, #yajamana, #robert, #odeya,

Tags

Related Articles