ಸುದ್ದಿಗಳು

ದರ್ಶನ್ ಬರ್ತಡೇ ಗೆ ಡಿ-55 ಅನೌನ್ಸ್

ಸಾಲು ಸಾಲು ಚಿತ್ರಗಳಲ್ಲಿ ಡಿ-ಬಾಸ್

ಬೆಂಗಳೂರು.ಫೆ.12

ಕಳೆದ ಒಂದುವರೆ ವರ್ಷಗಳಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಾವ ಚಿತ್ರಗಳು ಬಿಡುಗಡೆಯಾಗಿರಲಿಲ್ಲ. ಇನ್ನು ಅವರು ನಟಿಸಿರುವ ‘ಕುರುಕ್ಷೇತ್ರ’ ಇನ್ನೇನು ತೆರೆಗೆ ಬರುತ್ತದೆ ಎಂಬ ಮಾತುಗಳು ಕೇಳಿ ಬಂದವು. ಆದರೆ ಬರಲೇ ಇಲ್ಲ. ಆದರೆ ಈಗ ‘ಯಜಮಾನ’ ಬರುವ ತಿಂಗಳ 1 ರಂದು ಬಿಡುಗಡೆಯಾಗುತ್ತಿದೆ.

ಸಾಲು ಸಾಲು ಸಿನಿಮಾಗಳು

ದರ್ಶನ್ ಈಗ ‘ಯಜಮಾನ’ನಾಗಿ ಪ್ರೇಕ್ಷಕರ ಮುಂದೆ ಬರಲಿದ್ದು, ಆನಂತರ ‘ಕುರುಕ್ಷೇತ್ರ’ ಚಿತ್ರವೂ ಬಿಡುಗಡೆಯಾಗಲಿದೆ. ಹೀಗೆ ಒಂದು ಕಡೆ ‘ಯಜಮಾನ’, ‘ಒಡೆಯ’ ಮತ್ತೂಂದು ಕಡೆ ‘ರಾಬರ್ಟ್’, ಇನ್ನೊಂದು ಕಡೆ ‘ಗಂಡುಗಲಿ ಮದಕರಿ ನಾಯಕ’ ಚಿತ್ರಗಳಿವೆ. ಇದರ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ.

ಡಿ.55

ಈಗಾಗಲೇ ಸುದ್ದಿಯಾಗಿರುವಂತೆ ದರ್ಶನ್ ಅಭಿನಯಿಸುತ್ತಿರುವ ಐವತ್ತೈದನೇ ಚಿತ್ರವೇ ಡಿ.55. ಈ ಚಿತ್ರಕ್ಕೆ ‘ಮದಗಜ’ ಎಂದು ಟೈಟಲ್ ಫಿಕ್ಸ್ ಮಾಡಲಾಗಿತ್ತು. ಆದರೆ, ದರ್ಶನ್ ಅವರೇ ಸ್ವತಃ ಆ ಶೀರ್ಷಿಕೆಯನ್ನು ಶ್ರೀಮುರಳಿ ಚಿತ್ರಕ್ಕೆ ಬಿಟ್ಟುಕೊಡುವ ಮೂಲಕ ಪ್ರೀತಿ ತೋರಿದ್ದರು. ಹೀಗಾಗಿ ಈ ಚಿತ್ರಕ್ಕೆ ಯಾವ ಶೀರ್ಷಿಕೆ ಅಂತಿಮ ಮಾಡುವರೋ ಎಂಬುದನ್ನು ಕಾದು ನೋಡಬೇಕಿದೆ.

ಚಿತ್ರದ ಬಗ್ಗೆ

ಫೆಬ್ರವರಿ 16 ರಂದು ದರ್ಶನ್ ಅವರ ಹುಟ್ಟುಹಬ್ಬ. ಅಂದು ಅಭಿಮಾನಿಗಳಿಗೆ ದರ್ಶನ್ ಹೊಸ ಗಿಫ್ಟ್ ಕೊಡಲಿದ್ದಾರೆ. ಅವರು ನಟಿಸಲಿರುವ ‘ಡಿ-55’ ಫಸ್ಟ್ ಲುಕ್ ಬರುತ್ತಿದೆ. ಈ ಚಿತ್ರವನ್ನು ‘ಮೆಜೆಸ್ಟಿಕ್’ ಹಾಗೂ ‘ಧರ್ಮ’ ಚಿತ್ರಗಳನ್ನು ನಿರ್ಮಿಸಿದ್ದ ಎಂ.ಜಿ.ರಾಮಮೂರ್ತಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಸುಮಾರು 15 ವರ್ಷಗಳ ನಂತರ ನಿರ್ಮಾಪಕ ಎಂ.ಜಿ.ರಾಮಮೂರ್ತಿ ಹಾಗೂ ನಟ ದರ್ಶನ್ ಈಗ ಒಂದಾಗುತ್ತಿದ್ದು, ಇದೊಂದು ಬಿಗ್ ಬಜೆಟ್ ಚಿತ್ರವಾಗಿದೆ. ಆದರೆ, ಆ ಚಿತ್ರದ ಕಥೆ ಏನು, ನಿರ್ದೇಶಕರು ಯಾರು, ಯಾರೆಲ್ಲಾ ಕಲಾವಿದರು ಇರುತ್ತಾರೆ, ತಾಂತ್ರಿಕ ವರ್ಗದಲ್ಲಿ ಯಾರೆಲ್ಲಾ ಕೆಲಸ ಮಾಡುತ್ತಾರೆ ಎಂಬುದಕ್ಕೆ ‘ಡಿ 55’ ಸೆಟ್ಟೇರುವವರೆಗೂ ಕಾಯಬೇಕು.

ಒಟ್ಟಿನಲ್ಲಿ ದರ್ಶನ್ ಹುಟ್ಟುಹಬ್ಬದಂದು ‘ಡಿ 55’ ಫಸ್ಟ್ಲುಕ್ ಬಿಡುಗಡೆ ಮಾಡುವ ಮೂಲಕ ಅವರ ಅಭಿಮಾನಿಗಳ ಮೊಗದಲ್ಲಿ ಮಂದಹಾಸದ ಗೆರೆ ಮೂಡಿಸಲು ನಿರ್ಮಾಪಕ ಎಂ.ಜಿ.ರಾಮಮೂರ್ತಿ ಸಜ್ಜಾಗುತ್ತಿದ್ದಾರೆ.

ಕೆಜಿಎಫ್ ಚಾಪ್ಟರ್ 2 ನಲ್ಲಿ ಮುನ್ನ ಭಾಯ್!!

#darshan- #balkaninews- #filmnews, #D55. #robert, #kannadasuddigalu

Tags