ಸುದ್ದಿಗಳು

ಪ್ರೀತಿಯ ತಮ್ಮನನ್ನು ಆಶೀರ್ವದಿಸಿ ಹರಿಸಿ ಬೆಳೆಸಿ ಎಂದ ಚಾಲೆಂಜಿಂಗ್ ಸ್ಟಾರ್ ದರ್ಶನ್

ನಾಳೆ ‘ಅಮರ್’ ಚಿತ್ರದ ಟೀಸರ್ ಬಿಡುಗಡೆ

ಬೆಂಗಳೂರು.ಫೆ.13

ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ನಟನೆಯ ಮೊದಲ ಚಿತ್ರ ‘ಅಮರ್’. ಈಗಾಗಲೇ ಚಿತ್ರವು ಮುಕ್ತಾಯ ಹಂತಕ್ಕೆ ಬಂದಿದ್ದು, ನಾಳೆ ಈ ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದೆ. ಈ ಸಮಯದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶುಭಾಶಯ ತಿಳಿಸಿದ್ದಾರೆ.

ಹಾರ್ಟ್ ಲೀ ವೆಲ್ ಕಮ್

ನಾಳೆ ‘ಅಮರ್’ ಚಿತ್ರದ ಟೀಸರ್ ಬಿಡುಗಡೆಯಾಗುತ್ತಿರುವುದರಿಂದ ದರ್ಶನ್ ತಮ್ಮ ಫೇಸ್ಬುಕ್ ಖಾತೆಯ ಮೂಲಕ “ಪ್ರೀತಿಯ ತಮ್ಮ ಅಭಿಷೇಕ್ ಅಂಬರೀಶ್ ಗೆ ಕನ್ನಡ ಚಿತ್ರರಂಗಕ್ಕೆ ಹಾರ್ಟ್ ಲೀ ವೆಲ್. ನಾಳೆ ಆತನ ಹೊಸ ಸಿನಿಮಾ ‘ಅಮರ್’ ಟೀಸರ್ ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಆಶೀರ್ವದಿಸಿ ಹರಿಸಿ ಬೆಳೆಸಿ” ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಪ್ರೀತಿಯ ತಮ್ಮನನ್ನು ಬೆಳೆಸಿ ಎಂದು ಕೇಳಿಕೊಂಡಿದ್ದಾರೆ.

ಚಿತ್ರದ ಬಗ್ಗೆ

‘ಅರಮನೆ’, ‘ಸಂಜು ವೆಡ್ಸ್ ಗೀತಾ’, ‘ಮೈನಾ’, ‘ಮಾಸ್ತಿ ಗುಡಿ’ ಚಿತ್ರಗಳ ನಂತರ ನಾಗ್ ಶೇಖರ್ ನಿರ್ದೇಶನ ಮಾಡುತ್ತಿರುವ ಚಿತ್ರವೇ ‘ಅಮರ್’. ಈ ಚಿತ್ರದ ಮೂಲಕ ಅಭಿಷೇಕ್ ಅಂಬರೀಶ್ ನಾಯಕನಟರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅವರಿಗೆ ಜೋಡಿಯಾಗಿ ತಾನ್ಯಾ ಹೋಪ್ ನಟಿಸಿದ್ದಾರೆ.

ನಾಳೆ ಪ್ರೇಮಿಗಳ ದಿನ ವಿಶೇಷವಾಗಿ ‘ಅಮರ್’ ಸಿನಿಮಾದ ಟೀಸರ್ ಬಿಡುಗಡೆಯಾಗುತ್ತಿದೆ. ಈ ಚಿತ್ರದ ವಿಶೇಷ ಪಾತ್ರದಲ್ಲಿ ದರ್ಶನ್, ಸಹ ನಟಿಸಿದ್ದಾರೆ. ಚಿತ್ರವನ್ನು ಸಂದೇಶ್ ನಾಗರಾಜ್ ನಿರ್ಮಿಸುತ್ತಿದ್ದಾರೆ.

ಚಿತ್ರದಲ್ಲಿ ದೇವರಾಜ್, ಚಿಕ್ಕಣ್ಣ, ಸಾಧು ಕೋಕಿಲಾ ಸೇರಿದಂತೆ ಬಹುದೊಡ್ಡ ತಾರಾಬಳಗವಿದೆ. ಚಿತ್ರಕ್ಕೆ ಸತ್ಯ ಹೆಗಡೆ ಛಾಯಾಗ್ರಹಣವಿದ್ದು, ಅರ್ಜುನ್ ಜನ್ಯ ಸಂಗೀತವಿದೆ. ಸುಧಾರಾಣಿ, ನಿರೂಪ್ ಭಂಡಾರಿ, ಪ್ರಣಾಮ್ ದೇವರಾಜ್, ರಚಿತಾ ರಾಮ್ ಸಹ ಚಿತ್ರದಲ್ಲಿಕಾಣಿಸಿಕೊಳ್ಳಲಿದ್ದಾರೆ.

‘ಅಮರ್’ಗಾಗಿ ಸ್ವಿಡ್ಜರ್ ಲ್ಯಾಂಡಿನ ಮೈಕೊರೆವ ಚಳಿಯಲ್ಲಿ ತಾನ್ಯಾ,ಅಭಿಷೇಕ್ ..!

#darshan, #balkaninews #filmnews, #amar, #abhishekambareesh, #sumalathamabrish, #teaserrealsed

Tags