ಸುದ್ದಿಗಳು

ಡಿ-ಬಾಸ್ ಹುಟ್ಟುಹಬ್ಬಕ್ಕೆ ಶುರುವಾಗುತ್ತಿದೆ ಭರ್ಜರಿ ತಯಾರಿ

ಬಾಸ್ ಪರ್ವ, ಸುಲ್ತಾನ್ ಸಂಭ್ರಮ.. ಹೆಸರಿನಲ್ಲಿ ಅಭಿಮಾನಿಗಳಿಂದ ಸಂಭ್ರಮ

ಬೆಂಗಳೂರು.ಜ.11: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬ ಮುಂದಿನ ತಿಂಗಳು 16 ರಂದು ಇದೆ. ಅಂದರೆ ಇನ್ನೂ ಒಂದು ತಿಂಗಳು ಬಾಕಿ ಇರುವಾಗಲೇ ಅವರ ಅಭಿಮಾನಿಗಳು ‘ಬಾಸ್ ಪರ್ವ, ಸುಲ್ತಾನ್ ಸಂಭ್ರಮ’ ಎಂಬ ಹೆಸರಿನಲ್ಲಿ ಅವರ ಜನ್ಮದಿನ ಆಚರಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ದರ್ಶನ್ ಪರ್ವ

ಕನ್ನಡಿಗರ ಮನ ಗೆದ್ದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿರುವ ‘ಕುರುಕ್ಷೇತ್ರ’, ‘ಯಜಮಾನ’ ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿವೆ. ಇದರೊಂದಿಗೆ ಮುಂದಿನ ತಿಂಗಳು ಅವರ ಜನ್ಮವಿದೆ. ಹೀಗಾಗಿ ಅವರ ಅಭಿಮಾನಿಗಳಿಗೆ ಖಂಡಿತ ಹಬ್ಬದಂತಾಗಿದೆ. ಹೀಗಾಗಿ ತಿಂಗಳಿಗೂ ಮೊದಲೇ ‘ಬಾಸ್ ಪರ್ವ.. ಸುಲ್ತಾನ್ ಸಂಭ್ರಮ’ ಹೆಸರಿನಲ್ಲಿ ಕೌಂಟ್ ಡೌನ್ ಆರಂಭಿಸಿದ್ದಾರೆ.

ಆದರೆ ಜನ್ಮದಿನ ಆಚರಣೆ..??

ಒಂದು ಕಡೆ ಅಭಿಮಾನಿಗಳು ಫೆಬ್ರುವರಿ 16 ರಂದು ‘ಸುಲ್ತಾನ್ ಸಂಭ್ರಮಾಚರಣೆ’ಗೆ ತಯಾರಿಯನ್ನು ನಡೆಸುತ್ತಿದ್ದಾರೆ. ಆದರೆ ‘ರೆಬೆಲ್ ಸ್ಟಾರ್’ ಅಂಬರೀಶ್ ಸಾವಿನಿಂದ ದರ್ಶನ್ ಇನ್ನೂ ಹೊರಬಂದಿಲ್ಲ. ಹೀಗಾಗಿ ಅವರ ಹುಟ್ಟು ಹಬ್ಬ ಈ ಬಾರಿ ನಡೆಯುತ್ತದೆಯೋ ಇಲ್ಲವೋ ಎಂಬ ಪ್ರಶ್ನೆ ಸದ್ಯ ಅಭಿಮಾನಿಗಳಲ್ಲಿ ಕಾಡುತ್ತಿದೆ.

ಮುಂಚಿತವಾಗಿ ಶುಭಾಶಯಗಳು

ಈಗಾಗಲೇ ಅವರಿಗೆ ಟ್ವೀಟರ್ ಮೂಲಕ ಮುಂಚಿತವಾಗಿ ಶುಭಾಶಯಗಳ ಸುರಿಮಳೆ ಕೂಡ ಶುರವಾಗಿದೆ. ಈ ಮೂಲಕ ತಮ್ಮ ಡಿ ಬಾಸ್ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಅಚರಣೆ ಮಾಡಲು ಅಭಿಮಾನಿಗಳು ಮುಂದಾಗಿದ್ದಾರೆ.

#darshan, #balkaninews, #kannadasuddigalu, #dboss #birthday

Tags