ಸುದ್ದಿಗಳು

ಅಭಿಮಾನಿಯ ಬೈಕ್ ಓಡಿಸಿದ ದರ್ಶನ್

ಬೆಂಗಳೂರು,ಮೇ.5: ನಟ ದರ್ಶನ್ ಅಭಿಮಾನಿಯ ಬೈಕ್ ಓಡಿಸುವ ಮೂಲಕ ಅಭಿಮಾನಿಯ ಆಸೆ ಪೂರೈಸಿದ್ದಾರೆ.

ನಟ ದರ್ಶನ್ ಸದಾ ಅಭಿಮಾನಿಗಳಿಗೆ ಹತ್ತಿರದಲ್ಲಿಯೇ ಇರುತ್ತಾರೆ. ಮನೆ ಬಳಿ ಬಂದ ಅಭಿಮಾನಿಗಳು ಅಥವಾ ಶೂಟಿಂಗ್ ಸ್ಥಳದಲ್ಲಿ ಅಭಿಮಾನಿಗಳು ಕಂಡರೆ ಅವರನ್ನು ಮಾತನಾಡಿಸುವ ರೀತಿಯೇ ಅಭಿಮಾನಿಗಳಿಗೆ ಚಂದ. ಇನ್ನು ಯಾರಾದ್ರು ಅಭಿಮಾನಿಗಳು ವಾಹನ ಖರೀದಿ ಮಾಡಿ ನೀವೇ ಮೊದಲು ಗಾಡಿ ಹೋಡಿಸಬೇಕು ಅಂತಾ ಹೇಳಿದ್ರೆ ಅದನ್ನು ನಿರಾಸೆ ಮಾಡೋದಿಲ್ಲ ಈ‌ ನಟ.

 

ಅಭಿಮಾನಿ ಆಸೆ ನೆರವೇರಿಸಿದ ದಚ್ಚು

ಹೌದು ನಟ ದರ್ಶನ್ ಅಭಿಮಾನಿಗಳು ಹೊಸ ವಾಹನ ಖರೀದಿಸಿ ಅವರು ಅದನ್ನು ರೈಡ್ ಮಾಡಬೇಕು ಅಂತಾ ಹೇಳಿದ್ರೆ ಅಭಿಮಾನಿಗಳ ಆಸೆಗೆ ನಿರಾಸೆ ಮಾಡದೇ ಆ ಕೆಲಸ ಮಾಡುತ್ತಾರೆ. ಈಗಾಗಲೇ ಸಾಕಷ್ಟು ಉದಾಹರಣೆ ಇವೆ. ಇದೀಗ ಮತ್ತೊಮ್ಮೆ ಅಭಿಮಾನಿಯೊಬ್ಬರ ಬೈಕ್ ಓಡಿಸುವ ಮೂಲಕ ಅವರ ಆಸೆ ನೆರವೇರಿಸಿದ್ದಾರೆ.

ಬೈಕ್ ಓಡಿಸಿದ ದರ್ಶನ್

 ಬೆಂಗಳೂರಿನವರಾದ ಪ್ರಶಾಂತ್​ ಎಂಬಾತರು ದರ್ಶನ್​ ನ ಕಟ್ಟಾ ಅಭಿಮಾನಿ. ಪ್ರಶಾಂತ್ ಇತ್ತೀಚೆಗೆ ದುಬಾರಿ ಬೆಲೆಯ ಎನ್​ಫೀಲ್ಡ್​ ಬೈಕ್​ ಖರೀದಿಸಿದ್ದರಂತೆ. ಆ ಬೈಕ್ ಅನ್ನು ದರ್ಶನ್​ ರೈಡ್​ ಮಾಡಬೇಕೆಂದು ಕೇಳಿಕೊಂಡಿದ್ದರಂತೆ. ಅದರಂತೆ ನಟ ದರ್ಶನ್ ಬೈಕ್ ರೈಡ್ ಮಾಡಿದ್ದಾರೆ. ರಾಜರಾಜೇಶ್ವರಿ ನಗರದಲ್ಲಿರುವ ಅವರ ಮನೆ ಬಳಿಯೇ ಆ ಬೈಕ್​ ಅನ್ನು ರೈಡ್​ ಮಾಡಿದ್ದಾರೆ ದರ್ಶನ್​. ಸದ್ಯ ಈ ವಿಡಿಯೋ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗಿದೆ.

ಮೋದಿ ಹಾಗೂ ಅಕ್ಷಯ್ ಕುಮಾರ್ ಗೆ ಟಾಂಗ್ ಕೊಟ್ಟ ಸಿದ್ದಾರ್ಥ್!!

#darshanbike #darshnamovies #sandalwood

Tags