ಸುದ್ದಿಗಳು

ಕೇಕ್ ಕತ್ತರಿಸದೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಡಿ ಬಾಸ್!!

ಬೆಂಗಳೂರು,ಫೆ.16

: ಇಂದು ಚಂದನವನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬ.. ಡಿ ಬಾಸ್ ಹುಟ್ಟುಹಬ್ಬ ಅಂದರೆ ಅಭಿಮಾನಿಗಳಿಗೆ ಹಬ್ಬ.. ಅಂದಹಾಗೆ ದರ್ಶನ್ ಇಂದು 42 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.. ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸಲು ರಾಜ್ಯದ ಮೂಲೆ ಮೂಲೆಗಳಿಂದ  ಅಭಿಮಾನಿಗಳ ಸಾಗರವೇ ಹರಿದು ಬರುತ್ತಿದೆ.. ದಚ್ಚುನ ಒಂದು ಬಾರಿ ಕಣ್ಣುತುಂಬಿಕೊಂಡರೆ ಸಾಕು ಅನ್ನುವವರೇ ಹೆಚ್ಚು…

ಕೇಕ್ಕತ್ತರಿಸದೆ ಸರಳವಾಗಿ ಹುಟ್ಟುಹಬ್ಬ

ನಿನ್ನೆ ರಾತ್ರಿಯಿಂದಲೇ  ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿರುವ ದರ್ಶನ್​ ರವರ ಮನೆಗೆ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು.  ದರ್ಶನ್ ಈ ಬಾರಿ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸುತ್ತಿದ್ದಾರೆ..  ಈ ಹಿಂದೆ ಹಿರಿಯ ನಟ ಅಂಬರೀಶ್​​​ ಹಾಗೂ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ನಿಧನದ ಹಿನ್ನೆಲೆಯಿಂದ  ದರ್ಶನ್ ಈ ಬಾರಿಯ ಹುಟ್ಟುಹಬ್ಬವನ್ನು  ಬಹು ಸರಳವಾಗಿ ಆಚರಣೆ ಮಾಡುವುದಾಗಿ ಹೇಳಿದ್ದರು.. ಅದರಂತೆ ದಾಸನ ಅಭಿಮಾನಿಗಳು ಮಾತಿಗೆ ಬೆಲೆ ಕೊಟ್ಟು, ಹೂವಿನ ಹಾರ ತರದೇ, ಕೇಕ್​ ಕತ್ತರಿಸದ  ಸರಳವಾಗಿ ಹುಟ್ಟುಹಬ್ಬ ಆಚರಿಸಿದರು.. ಇನ್ನು ಅಭಿಮಾನಿಗಳುಕೇಕ್ ಹಾರ ಬದಲು ಸಿದ್ಧಗಂಗಾ ಮಠಕ್ಕೆ ದಾಸೋಹ ಸೇವೆಗೆ ಅಂತಲೇ ಆಭಿಮಾನಿಗಳು ಅಕ್ಕಿ, ಬೇಳೆ ಹಾಗೂ  ಇನ್ನಿತರ ದಿನಸಿಗಳನ್ನು ದರ್ಶನ್ ನಿವಾಸಕ್ಕ ತಲುಪಿಸುತ್ತಿದ್ದಾರೆ ಇದನ್ನು ಆದಷ್ಟು ಬೇಗನೆ ಸಿದ್ದಗಂಗ ಮಠಕ್ಕೆ ತಲುಪಿಸಲಾಗುವುದು..

ಪುಲ್ವಾಮಾ ಹುತಾತ್ಮ ಯೋಧರಿಗೆ ಸಂತಾಪ

ಇನ್ನು ಪುಲ್ವಾಮಾ ಹುತಾತ್ಮ ಯೋಧರಿಗೆ ಸಂತಾಪ ಸೂಚಿಸಿ ಮಾತನಾಡಿದ ದರ್ಶನ್ ಯೋಧರೇ ನಿಜವಾದ ಹೀರೋಗಳು. ಈ ಬಾರಿ ಸರಳ ಹುಟ್ಟುಹಬ್ಬ ಆಚರಣೆಗೆ ಕಾರಣ ಕಳೆದ ಬಾರಿ ನಾಲ್ಕು ಲಾರಿಗಳಷ್ಟು ಹೂವಿನ ಹಾರ, ಕೇಕ್‍ಗಳು ವೇಸ್ಟ್ ಆಗಿತ್ತು. ಬಿಬಿಎಂಪಿಯ ನಾಲ್ಕು ಲಾರಿಗಳಲ್ಲಿ ಹೂಗಳು, ಕೇಕ್ ತುಂಬಿಕೊಂಡು ಹೋದಾಗ ನನಗೆ ತುಂಬಾ ನೋವಾಗಿತ್ತು. ಅದನ್ನು ನೋಡಲಾಗುತ್ತಿರಲಿಲ್ಲ.. ಹುಟ್ಟುಹಬ್ಬಕ್ಕೆ ಬರುವ ಅಭಿಮಾನಿಗಳು ಕೇಕ್ ಮತ್ತು ಹಾರ ತರುವುದು ಬೇಡ ಯಾಕೆಂದರೆ ಅದು ವೇಸ್ಟ್ ಆಗುತ್ತದೆ..  ಅದರ ಬದಲಾಗಿ ಧವಸ ಧಾನ್ಯಗಳನ್ನು ತಂದು ಕೊಟ್ಟರೆ ಅವಶ್ಯಕತೆ ಇರೋವರಿಗೆ ನೀಡುತ್ತೇವೆ ಎಂದು ಹೇಳಿದರು.

ರಕ್ತದಾನ ಶಿಬಿರ ಆಯೋಜನೆ

ಇನ್ನು ರಕ್ತದಾನ ಶಿಬಿರ ಆಯೋಜನೆ ಹಾಗೂ ಭೋಜನ ಸೌಲಭ್ಯವನ್ನೂ ಕಲ್ಪಿಸಲಾಗಿದೆ ದಚ್ಚು ಹುಟ್ಟು ಹಬ್ಬಕ್ಕೆ ಕಲ್ಪಿಸಲಾಗಿದೆ. ಅಲ್ಲದೆ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಚಿತ್ರಗಳ ಪೋಸ್ಟರ್​ ಹೊಂದಿರೋ ಟಿ-ಶರ್ಟ್​ಗಳನ್ನು ಮಾರಾಟ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಂತೂ ಡಿ ಬಾಸ್ ಪರ್ವ ಹರಿದುಹೋಗುತ್ತಿದೆ..

Tags

Related Articles