ಸುದ್ದಿಗಳು

ದಚ್ಚು ಹುಟ್ಟುಹಬ್ಬಕ್ಕೆ ಒಂದೆಡೆ ಸೇರಿದ್ದ ದವಸ, ಧಾನ್ಯ, ಇದೀಗ ಮಠಕ್ಕೆ ರವಾನೆ

ಬೆಂಗಳೂರು, ಫೆ.20:

ನಟ ದರ್ಶನ್ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳಬೇಕು ಎಂಬ ದೃಷ್ಟಿಯಿಂದ ಎಲ್ಲಾ ಅಭಿಮಾನಿಗಳಿಗೆ ಕೇಕ್, ಹೂವಿನ ಹಾರ ನೀಡುವ ಬದಲು ದವಸ ಧಾನ್ಯಗಳನ್ನು ತಂದು ಕೊಡುವಂತೆ ಮನವಿ ಮಾಡಿದ್ದರು. ಅಷ್ಟೇ ಅಲ್ಲ ಯಾರು ದುಂದುವೆಚ್ಚ ಮಾಡಬೇಡಿ ಅಂತಲೂ ಹೇಳಿದ್ದರು ದರ್ಶನ್. ಇದೀಗ ಆ ವಿಚಾರವಾಗಿ ಅಭಿಮಾನಿಗಳು ಕೂಡ ಅದೇ ರೀತಿಯಲ್ಲಿ ದವಸ ಧಾನ್ಯಗಳನ್ನು ಕೂಡ ತಂದಿದ್ದರು. ಇದೀಗ ಲೋಡ್ ಗಟ್ಟಲೇ ಈ ದವಸ ಧಾನ್ಯಗಳು ಆಗಿವೆ.

ಅಕ್ಕಿ ಕಾಳುಗಳು ಮಠಕ್ಕೆ

ಇಲ್ಲಿ ಮುಖ್ಯ ಉದ್ದೇಶವಿತ್ತು. ಕೇಕ್ ಹಾರಾ ತುರಾಯಿಗಳ ಬದಲು ದವಸ ಧಾನ್ಯಗಳು ತಂದರೆ ಮಠಗಳಲ್ಲಾದ್ರೂ ಊಟಕ್ಕೆ ಆಗುತ್ತೆ. ಮಕ್ಕಳು, ವೃದ್ಧರು ಊಟ ಮಾಡ್ತಾರೆ ಅನ್ನೋದು ಅವರ ಉದ್ದೇಶ ಹಾಗಾಗಿ ಈ ಕೆಲಸ ಮಾಡಲಾಗಿತ್ತು. ಇದೀಗ ಅವರ ಮಾತಿನಂತೆ ದವಸ ಧಾನ್ಯ ತಂದಿದ್ದ ಅಭಿಮಾನಿಗಳು ಅದನ್ನು ದರ್ಶನ್ ಮನೆಗೆ ತಲುಪಿಸಿದ್ದರು. ಇದೀಗ ಈ ದವಸ ಧಾನ್ಯಗಳನ್ನು ಮಠಗಳಿಗೆ ತಲುಪಿಸಲಾಗುತ್ತಿದೆಯಂತೆ. ಲೋಡ್ ಗಟ್ಟಲೆ ಬಂದಿರುವ ಈ ಧಾನ್ಯಗಳನ್ನು ಎಲ್ಲಾ ಮಠಗಳಿಗೆ ಹಂಚಲಾಗುತ್ತಿದೆಯಂತೆ.

ಹಲವಾರು ಸಮಸ್ಯೆಗಳಿಗೆ ಇಲ್ಲಿದೆ ಒಂದೇ ಮನೆ ಮದ್ದು ‘ಮಲ್ಲಿಗೆ ಹೂವಿನ ಕಷಾಯ’

#sandalwood #kannadamovies #balkaninews #darshan #darshanmovies #darshanhits #darshanbirthdayspecial

Tags

Related Articles