ಸುದ್ದಿಗಳು

ದರ್ಶನ್ ಕ್ಲಿಕ್ಕಿಸಿದ ಫೋಟೋ ಪಡೆಯಲು ಅಭಿಮಾನಿಗಳಿಗೆ ಬಂಪರ್ ಅವಕಾಶ!!

ಬೆಂಗಳೂರು,ಫೆ.20

: ಭವಿಷ್ಯದಲ್ಲಿ ಪ್ರಕೃತಿಯಲ್ಲಿ ಅಸಮತೋಲನ ಕಂಡುಬರಲಿದೆ. ಈ ಹಿನ್ನೆಲೆಯಲ್ಲಿ ವನ್ಯಜೀವಿಗಳು ಮತ್ತು ಅರಣ್ಯ ಸಂಪತ್ತಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವದಾದ್ಯಂತ ವಿಶ್ವ ವನ್ಯಜೀವಿ ದಿನವನ್ನು ಪ್ರತಿವರ್ಷ ಮಾರ್ಚ್ 3ರಂದು ಆಚರಿಸಲಾಗುತ್ತದೆ . 2013ರ ವಿಶ್ವಸಂಸ್ಥೆ ಸಮಾವೇಶದಲ್ಲಿ ಮಾರ್ಚ್ 3 ದಿನವನ್ನು ವಿಶ್ವ ವನ್ಯಜೀವಿಗಳ ದಿನವೆಂದು ಘೋಷಿಸಲಾಯಿತು. ಜಗತ್ತಿನ ಸಸ್ಯ ಹಾಗೂ ಪ್ರಾಣಿ ಪ್ರಭೇದಗಳ ಬಗ್ಗೆ ಜಾಗೃತಿ ಮೂಡಿಸುವುದು ವಿಶ್ವ ವನ್ಯಜೀವಿ ದಿನಾಚರಣೆಯ ಧ್ಯೇಯವಾಗಿದೆ..

ದರ್ಶನ್ ತೆಗೆದ ಫೋಟೋಗಳ ಮಾರಾಟ ಮತ್ತು ಪ್ರದರ್ಶನ

‘ವಿಶ್ವ ವನ್ಯಜೀವಿಗಳ ದಿನಾಚರಣೆ’ ಅಂಗವಾಗಿ ದರ್ಶನ್ ತೆಗೆದ ಫೋಟೋಗಳ ಮಾರಾಟ ಮತ್ತು ಪ್ರದರ್ಶನಕ್ಕಿಡಲಾಗಿದೆ

ಮಾರ್ಚ್ 1-2-3ರಂದು ಮೈಸೂರಿನಲ್ಲಿ ನಡೆಯಲಿರೋ ಫೋಟೋಗಳ ಪ್ರದರ್ಶನ ಮತ್ತು ಮಾರಾಟ ಒಂದು ಫೋಟೋಗೆ 1ಸಾವಿರ ಹಣ ನಿಗದಿ ಮಾಡಿದ ಅರಣ್ಯ ಇಲಾಖೆ ಫೋಟೋ ಮಾರಟದಿಂದ ಬರುವ ಹಣವನ್ನು ವನ್ಯಜೀವಿಗಳ ಸಂರಕ್ಷಣೆಗೆ ಉಪಯೋಗಕಗಕ್ಕೆ ಮೀಸಲಿಡಲಾಗಿದೆ.. ಹೋಟೆಲ್ ಸಂದೇಶ್ ದಿ ಪ್ರಿನ್ಸ್, ಮೈಸೂರಿನಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಗೆಯವರೆಗೆ  ಫೋಟೋಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ..

ವನ್ಯಮೃಗಗಳ ಬಗ್ಗೆ ಅತೀವ ಪ್ರೀತಿ

ವನ್ಯಮೃಗಗಳ ಬಗ್ಗೆ ಅತೀವ ಪ್ರೀತಿ ಇಟ್ಟುಕೊಂಡಿರುವ ನಟ ದರ್ಶನ್‌ ಇದೀಗ ತಮ್ಮ ಬಿಡುವಿನ ವೇಳೆಯಲ್ಲಿ ಕಾಡು ಪ್ರಾಣಿಗಳ ಅಪರೂಪದ ಫೋಟೋಗಳನ್ನು ಶೂಟ್‌‌ ಮಾಡಿ ಅವುಗಳ ಮಾರಾಟದಿಂದ ಬರುವ ಆದಾಯವನ್ನು ರಾಜ್ಯದಲ್ಲಿ ವನ್ಯಪ್ರಾಣಿಗಳ ಸಂರಕ್ಷಣೆಗೆ ನೀಡಲು ಮುಂದಾಗಿದ್ದಾರೆ.  ಕೃಷಿ, ಹೈನುಗಾರಿಕೆ ಹಾಗೂ ಪಶು ಸಂಗೋಪನೆ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ದರ್ಶನ್‌ ಅನೇಕ ವರ್ಷಗಳಿಂದ ವನ್ಯಜೀವಿಗಳ ಸಂರಕ್ಷಣೆಗಾಗಿ ಸದ್ದಿಲ್ಲದೆ ಕೆಲಸ ಮಾಡುತ್ತಿದ್ದಾರೆ.

Tags

Related Articles