ಸುದ್ದಿಗಳು

ದರ್ಶನ್ ಕ್ಲಿಕ್ಕಿಸಿದ ಪೋಟೋ ಇದೀಗ ರೋರಿಂಗ್ ಸ್ಟಾರ್ ಮಡಿಲಿಗೆ

ಬೆಂಗಳೂರು, ಮಾ.18:

ಸದ್ಯ ನಟ ದರ್ಶನ್ ಕಾಡಿಗೆ ಹೋದಾಗ ಅಲ್ಲಿ ತೆಗೆದಿದ್ದ ಫೋಟೋಗಳಿಗೆ ಬಾರೀ ಬೇಡಿಕೆ ಬಂದಿರೋದು ಗೊತ್ತಿರುವ ವಿಚಾರವೇ. ಅವರು ತೆಗೆದಿದ್ದಂತಹ ಫೋಟೋಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇತ್ತೀಚೆಗೆ ಮೈಸೂರಿನಲ್ಲಿ ಇಡಲಾಗಿತ್ತು. ಅಷ್ಟೇ ಅಲ್ಲ ಈ ಫೋಟೋ ಮಾರಾಟದಿಂದ ಬಹಳಷ್ಟು ಹಣ ಕೂಡ ಬಂದಿತ್ತು. ಇದೀಗ ದರ್ಶನ್ ತೆಗೆದಿದ್ದ ಫೋಟೋವೊಂದು ಶ್ರೀ ಮುರುಳಿ ಮನೆಗೆ ಬಂದಿದೆ.

10 ಸಾವಿರ ಬೆಲೆ ಬಾಳುವ ಫೋಟೋ

ಹೌದು, ನಟ ಶ್ರೀ ಮುರುಳಿಗೆ ಮದಗಜ ನಿರ್ಮಾಪಕ ಉಮಾಪತಿ ಇದೀಗ ಉಡುಗೊರೆಯೊಂದನ್ನು ನೀಡಿದ್ದಾರೆ. ಈ ಫೋಟೋ ಸದ್ಯ ದರ್ಶನ್ ತೆಗೆದ ಫೋಟೋ ಎನ್ನಲಾಗಿದೆ. ಇತ್ತೀಚೆಗಷ್ಟೇ ದರ್ಶನ್ ಕ್ಲಿಕ್ಕಿಸಿದ ಪೋಟೋಗಳನ್ನು ಮೈಸೂರಿನಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಅದರಂತೆ ಇದೀಗ ನಿರ್ಮಾಪಕ ಉಮಾಪತಿ 10 ಸಾವಿರ ಕೊಟ್ಟು ಎಕ್ಸಿಬಿಷನ್‌ ನಲ್ಲಿ ಕೊಂಡು ಕೊಂಡಿರುವ ಈ ಫೋಟೋವನ್ನು ನಟ ಶ್ರೀ ಮುರುಳಿಗೆ ಉಡುಗೊರೆಯಾಗಿ ನೀಡಿದ್ದಾರೆ.

‘ಮದಗಜ’ ನಿರ್ಮಾಪಕ ಉಮಾಪತಿ

ಸದ್ಯ ‘ಭರಾಟೆ’ ಸಿನಿಮಾ ಬ್ಯುಸಿಯಲ್ಲಿರುವ ನಟ ಶ್ರೀಮುರುಳಿ, ಇದಾದ ನಂತರ ಮದಗಜ ಸಿನಿಮಾ ಶೂಟಿಂಗ್‌ ನಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ ಭರಾಟೆ ಸಿನಿಮಾ ಶೂಟಿಂಗ್ ಮುಗಿಯುವ ಹಂತಕ್ಕೆ ತಲುಪಿದೆ. ಇನ್ನೂ ಮದಗಜ ಸಿನಿಮಾವನ್ನು ಮಹೇಶ್ ಗೌಡ ನಿರ್ದೇಶನ ಮಾಡುತ್ತಿದ್ದು, ಉಮಾಪತಿ ಬಂಡವಾಳ ಹೂಡಲಿದ್ದಾರೆ.

ಟೆರಾಕೋಟಾ ಆಭರಣಗಳನ್ನು ನೀವು ಎಂದಾದರೂ ಟ್ರೈ ಮಾಡಿದ್ದೀರಾ..? ಹಾಗಾದರೆ ಇಲ್ಲೊಮ್ಮೆ ನೋಡಿ

#balkaninews #producerumapathi #kannadamovies #sandalwood #sriimuruli #darshanphotographyexibition

Tags