ಸುದ್ದಿಗಳು

ನಟ ದರ್ಶನ್ ಗೆ ಈ ಕ್ರಿಕೆಟರ್ ಅಂದರೆ ಇಷ್ಟವಂತೆ!!

ಬೆಂಗಳೂರು,ಮೇ.14: ನಟ ದರ್ಶನ್‌ಗೆ ಕ್ರಿಕೆಟ್ ಕಡೆ ಒಲವಿದೆ. ಈ ನಟನಿಗೆ ಕ್ರಿಕೆಟ್ ದೇವರಂದರೆ ಇಷ್ಟವಂತೆ.

ನಟ ದರ್ಶನ್ ಸೆಲಿಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ ಭಾಗವಿಸಿದ್ದಾರೆ. ಬ್ಯಾಟ್ ಹಿಡಿದು ಬೌಂಡರಿ ದಾಟಿದ್ದೂ ಆಗಿದೆ. ಇನ್ನು ಗಲ್ಲಿಯಲ್ಲೂ ಕ್ರಿಕೆಟ್ ಆಡಿದ್ದಾರೆ. ಇತ್ತೀಚೆಗೆ ಡಿಪಿಎಲ್‌ನಲ್ಲೂ ಕೂಡ ಭಾಗವಹಿಸಿದ್ದಾರೆ. ಸದ್ಯ ಈ ನಟನಿಗೆ ಕ್ರಿಕೆಟರ್ಸ್ ನಲ್ಲಿ ಫೇವರೇಟ್ ಅಂತಾ ಒಬ್ಬರಿದ್ದಾರಂತೆ.

Image result for darshan

ಕ್ರಿಕೆಟ್ ದೇವರೆಂದರೆ ದಚ್ಚುಗೆ ಇಷ್ಟ

ಹೌದು, ಕ್ರಿಕೆಟ್ ದೇವರು ಅಂತಾನೇ ಹೆಸರು ವಾಸಿಯಾಗಿರುವ ಸಚಿನ್ ತೆಂಡುಲ್ಕರ್ ಯಾರಿಗೆ ಇಷ್ಟವಿಲ್ಲ ಹೇಳಿ?. ಬ್ಯಾಟ್ ಹಿಡಿದು ನಿಂತರೆ ಕೇಳಬೇಕಾ.? ಈ ಕ್ರಿಕೆಟ್ ದೇವರು ಅಂದರೆ ನಟ ದರ್ಶನ್‌ಗೂ ಇಷ್ಟವಂತೆ. ಹೀಗಂತ ಇತ್ತೀಚೆಗೆ ನಟ ದರ್ಶನ್ ಹೇಳಿಕೊಂಡಿದ್ದಾರೆ.

Image result for sachin

ಸಲಹೆಗಾರರಾಗಿರುವ ಸಚಿನ್

ಸದ್ಯ ಸಚಿನ್ ತೆಂಡೂಲ್ಕರ್ ನಿವೃತ್ತಿ ಘೋಷಿಸಿದ್ದಾರೆ. ಇನ್ನು ಮುಂಬೈ ಇಂಡಿಯನ್ಸ್ ತಂಡದ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದಾಖಲೆ ಮೇಲೆ ದಾಖಲೆ ಬರೆದಿದ್ದ ಸಚಿನ್ ಇಂದಿಗೂ ಅನೇಕರಿಗೆ ಸ್ಪೂರ್ತಿ. ಸದ್ಯ ಅಭಿಮಾನಿಗಳಂತೆ ನಟ ದರ್ಶನ್ ಕೂಡ ಸಚಿನ್ ನನ್ನ ಫೇವರೇಟ್ ಎಂದಿರೋದು ಅಭಿಮಾನಿಗಳಿಗೆ ಇನ್ನಷ್ಟು ಖುಷಿ ಹೆಚ್ಚಿಸಿದೆ.

ಕೇರಳದಲ್ಲಿ ‘ಹನಿಮೂನ್’ ಮುಗಿಸಿದ ಜೋಡಿ

#darshan #sachin #godofcricket #sandalwood

 

Tags

Related Articles