ಸುದ್ದಿಗಳು

ಫೇಸ್ ಬುಕ್ ಮತ್ತು ವಾಟ್ಸ್ ಅಪ್ ಸ್ಟೇಟಸ್ ಆಗಿರುವ ‘ಡಿ53’ ಪೋಸ್ಟರ್

ದರ್ಶನ್ ಈಗ 'ಡಿ53'

ಬೆಂಗಳೂರು, ನ.08: ದರ್ಶನ್ ಮುಂದಿನ ಸಿನಿಮಾ ‘ಡಿ53’ ಪೋಸ್ಟರ್ ಬಿಡುಗಡೆಯಾಗಿ ಸದ್ಯ ಎಲ್ಲೆಡೆ ಟ್ರೆಂಡ್ ಸೃಷ್ಟಿ ಮಾಡಿದೆ. ಇದೀಗ ಎಲ್ಲರ ವಾಟ್ಸಾಪ್, ಫೇಸ್ಬುಕ್ನಲ್ಲಿ ದರ್ಶನ್ ರಾರಾಜಿಸುತ್ತಿದ್ದಾರೆ.

‘ಡಿ53’, ಈ ಶಬ್ದ ಕೇಳಿದ ತಕ್ಷಣ ನೆನಪಾಗುವುದು ದರ್ಶನ್ ಹೊಸ ಪೋಸ್ಟರ್. ಅಷ್ಟೇ ಅಲ್ಲ ಅದರಲ್ಲಿ ಬರೆದಿರುವ ಕ್ಯಾಚಿ ಟ್ಯಾಗ್ ಲೈನ್. “ಈ ಕೈಗೆ ಶಬರಿ ಮುಂದೆ ಸೋಲೋದು ಗೊತ್ತು. ರಾವಣನ ಮುಂದೆ ಗೆಲ್ಲೋದು ಗೊತ್ತು” ಎಂದು ಟ್ಯಾಗ್ ಲೈನ್ ಹಾಕಿರುವ ಈ ಪೋಸ್ಟರ್ ಸದ್ಯ ಬಾರೀ ಕುತೂಹಲ ಮೂಡಿಸಿದೆ.  ಮಂಗಳವಾರ ಸಂಜೆ  ಬಿಡುಗಡೆಯಾದ ಈ ಟ್ಯಾಗ್‌ಲೈನ್ ಹಾಗೂ ಪೋಸ್ಟರ್ ಅಭಿಮಾನಿಗಳಲ್ಲಿ ಟ್ರೆಂಡ್ ಸೃಷ್ಠಿ ಮಾಡಿದೆ.ದರ್ಶನ್‌ ಕೈ ಹಿಡಿದ ಮಗುವಿನ ಪೋಟೋ

ಯಾವುದೇ ಒಬ್ಬ ನೆಚ್ಚಿನ ನಟನ ಪೋಸ್ಟರ್‌ಗಳು, ಹೇರ್ ಸೈಲ್‌ಗಳು, ವಾಕಿಂಗ್ ಸ್ಟೈಲ್‌ಗಳು ಬಿಡುಗಡೆಯಾದ್ರೆ ಅದು ಟ್ರೆಂಡ್ ಆಗೋದ್ರಲ್ಲಿ ಅನುಮಾನವಿಲ್ಲ. ಇದೀಗ ಬಾರೀ ನಿರೀಕ್ಷೆಯ ಈ ಪೋಸ್ಟರ್ ಕೂಡ ಅಭಿಮಾನಿಗಳಲ್ಲಿ ಟ್ರೆಂಡ್ ಸೃಷ್ಟಿ ಮಾಡಿದೆ. ದರ್ಶನ್ ಮಗುವಿನ ಕೈ ಹಿಡಿದ ಈ ಫೋಟೋವನ್ನು ಅಭಿಮಾನಿಗಳು ಕೂಡ ಫಾಲೋ ಮಾಡಿದ್ದಾರೆ. ಮಕ್ಕಳ ಕೈ ಹಿಡಿದು ಫೋಟೋಗೆ ಫೋಸ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ಬೈಕ್‌ ಗಳ ಮೇಲೆ, ವಾಟ್ಸಪ್ ಸ್ಟೇಟಸ್ ಹಾಗೂ ಫೇಸ್‌ಬುಕ್‌ನಲ್ಲೂ ಈ ಪೋಸ್ಟರ್ ರಾರಾಜಿಸುತ್ತಿದೆ.

Tags