ಸುದ್ದಿಗಳು

ದರ್ಶನ್ ಗೆ ‘ದರ್ಶನ್’ ಸಿನಿಮಾಗಳೇ ಸ್ಫರ್ಧೆ..!!!

ಈ ಹಿಂದೆ ಹೀಗೆ ಆಗಿತ್ತು, ದರ್ಶನ್ ಅವರ ‘ಧೃವ’ ಚಿತ್ರಕ್ಕೆ ‘ನಿನಗೋಸ್ಕರ’, ‘ಕರಿಯಾ’ ಚಿತ್ರಕ್ಕೆ ‘ಲಾಲಿಹಾಡು’, ‘ದಾಸ’ ಚಿತ್ರಕ್ಕೆ ‘ನಮ್ಮ ಪ್ರೀತಿಯ ರಾಮು’ ಚಿತ್ರಗಳು ಕೆಲವೇ ಕೆಲವು ವಾರಗಳ ಅಂತರದಲ್ಲಿ ಬಿಡುಗಡೆಯಾಗಿದ್ದವು.

ಬೆಂಗಳೂರು, ಆ.18: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕುರುಕ್ಷೇತ್ರ’ ಚಿತ್ರ ಮೊದಲು ಬಿಡುಗಡೆಯಾಗುತ್ತದೆಯೋ ಅಥವಾ ‘ಯಜಮಾನ’ ಚಿತ್ರ ಮೊದಲು ಬಿಡುಗಡೆಯಾಗುತ್ತದೆಯೋ ಎಂಬ ಗೊಂದಲಗಳು ಸ್ವತಃ ನಟ ದರ್ಶನ್ ಅವರಿಗೆ ಇದೆ.

ಯಾವುದು ಮೊದಲು

ದರ್ಶನ್ ಅವರ 50 ನೇ ಚಿತ್ರವಾಗಿ ‘ಕುರುಕ್ಷೇತ್ರ’ ತೆರೆಗೆ ಬರಬೇಕಿತ್ತು. ಆದರೆ ಹತ್ತಾರು ಕಾರಣಗಳಿಂದ ಈ ಚಿತ್ರದ ಬಿಡುಗಡೆಗೆ ತಡವಾಗುತ್ತಿದೆ. ಈ ನಡುವೆ ‘ಯಜಮಾನ’ ಚಿತ್ರದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಈ ಚಿತ್ರದ ಚಿತ್ರೀಕರಣವನ್ನು ಮಾಡಿ ಮುಗಿಸಿದ್ದಾರೆ. ಹೀಗಾಗಿ ಎರಡರಲ್ಲಿ ಯಾವುದು ಮೊದಲು ತೆರೆಗೆ ಬರಬೇಕೆಂಬ ಗೊಂದಲ ಏರ್ಪಟ್ಟಿದೆ. ಆದರೆ ‘ಯಜಮಾನ’ ಮೊದಲು ಬಂದು ಆನಂತರ ‘ಕುರುಕ್ಷೇತ್ರ’ ಬರೆಲಿದೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.

ಮತ್ತೆ ಕಿರಿಕ್

ಇನ್ನು ಈಗಷ್ಟೇ ‘ಒಡೆಯ’ ಚಿತ್ರದ ಮುಹೂರ್ತವೂ ನಡೆದಿದೆ. ಒಂದು ವೇಳೆ ‘ಕುರುಕ್ಷೇತ್ರ’ ಮೊದಲು ಬಿಡುಗಡೆಯಾದರೆ ಮೂರು ತಿಂಗಳವರೆಗೂ ‘ಯಜಮಾನ’ ಚಿತ್ರ ತೆರೆಗೆ ಬರುವುದಿಲ್ಲ. ‘ಯಜಮಾನ’ ಬಿಡುಗಡೆಯ ಹಂತಕ್ಕೆ ಬಂದಾಗ ದರ್ಶನ್ ರ ಮುಂದಿನ ಸಿನಿಮಾ ‘ಒಡೆಯ’ ಚಿತ್ರೀಕರಣ ಮುಗಿಸಿ, ಬಿಡುಗಡೆಯ ಹಂತಕ್ಕೆ ಬರುವ ಸಾದ್ಯತೆ ಇದೆ. ಆಗ ‘ಯಜಮಾನ’ನಿಗೂ ‘ಒಡೆಯ’ನಿಗೂ ಮತ್ತೆ ಕಿರಿಕ್. ಯಾವುದು ಬಿಡುಗಡೆಯಾಗಬೇಕು ಅಂತಾ. ಆಗೇನಾದ್ರು ‘ಯಜಮಾನ’ ಬಿಡುಗಡೆಯಾದರೆ ಮತ್ತೆ ‘ಒಡೆಯ’ 3 ತಿಂಗಳು ಕಾಯಬೇಕು.

ಹಿಂದೆಯೂ ಹೀಗೆ ಆಗಿತ್ತು

ಹೀಗೆ ಒಂದರ ಹಿಂದೆ ಒಂದರಂತೆ ಸಿನಿಮಾಗಳನ್ನು ಮಾಡುತ್ತಿರುವ ದರ್ಶನ್ ಅವರಿಗೆ ಸ್ವತಃ ಗೊಂದಲವುಂಟಾಗಿದೆ. ಈ ಹಿಂದೆ ಹೀಗೆಯೇ ಆಗಿತ್ತು. ದರ್ಶನ್ ಅವರ ‘ಧೃವ’ ಚಿತ್ರಕ್ಕೆ ‘ನಿನಗೋಸ್ಕರ’, ‘ಕರಿಯಾ’ ಚಿತ್ರಕ್ಕೆ ‘ಲಾಲಿಹಾಡು’, ‘ದಾಸ’ ಚಿತ್ರಕ್ಕೆ ‘ನಮ್ಮ ಪ್ರೀತಿಯ ರಾಮು’ ಚಿತ್ರಗಳು ಕೆಲವೇ ಕೆಲವು ವಾರಗಳ ಅಂತರದಲ್ಲಿ ಬಿಡುಗಡೆಯಾಗಿದ್ದವು.

ತಾರಕ್ ನಂತರ

ದರ್ಶನ್ ಅವರ ಹೊಸ ಸಿನಿಮಾವನ್ನು ಜನರು ನೋಡದೇ ಈಗಾಗಲೇ ಒಂದು ವರ್ಷವಾಗುತ್ತಿದೆ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ‘ತಾರಕ್’ ಚಿತ್ರ ತೆರೆಕಂಡಿತ್ತು. ಹೀಗಾಗಿ ದರ್ಶನ್ ಅವರ ಯಾವ ಚಿತ್ರಗಳು ಬಿಡುಗಡೆಯಾಗದಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

Tags