ಸುದ್ದಿಗಳು

ಸಿಎಂ ಕುಮಾರಣ್ಣ ಮತ್ತು ಮಗ ನಿಖಿಲ್ ಬಗ್ಗೆ ದರ್ಶನ್ ಅಭಿಮಾನಿಗಳ ಮಾತು

ಬೆಂಗಳೂರು.ಏ.17: ಕರ್ನಾಟಕದ ಡಿ.ಬಾಸ್ ದರ್ಶನ್ ಅಭಿಮಾನಿಗಳ ಸಂಘ, ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘ ಹಾಗೂ ಕರ್ನಾಟಕ ಸ್ವಾಭಿಮಾನಿ ಕಲಾವಿದರ ವತಿಯಿಂದ ಕನ್ನಡ ಚಿತ್ರರಂಗದ ನಿರ್ದೇಶಕರು ಮತ್ತು ನಿರ್ಮಾಪಕರುಗಳಲ್ಲಿ ಈ ಕೆಳಕಂಡ ಮಾತುಗಳನ್ನು ಗಮನಿಸಬೇಕಾಗಿ ವಿನಂತಿ.

ಮುಖ್ಯಮಂತ್ರಿಯ ಸ್ಥಾನದಲ್ಲಿ ಅಹಂಕಾರ ಮೆರೆಯುತ್ತಿರುವ ಕುಮಾರಸ್ವಾಮಿ ಹಾಗೂ ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ರಾಜಕೀಯ ಲಾಭ ಮತ್ತು ಸ್ವಾರ್ಥಕ್ಕಾಗಿ ಮಂಡ್ಯ ಚುನಾವಣೆಯ ಪ್ರಚಾರ ಅವಧಿಯಲ್ಲಿ ಅನೇಕ ಬಾರೀ ಕಲಾವಿದರನ್ನು ಹೀಯಾಳಿಸಿ ಮಾತನಾಡಿದ್ದಾರೆ

“ಮೇಕಪ್ ಹಾಕುವ ನಾಟಕದವರನ್ನು ನಂಬಬೇಡಿ”, ಬಿಸಿಲಿನ ಕಷ್ಟ ಗೊತ್ತಿಲ್ಲದವರು” ಬಣ್ಣ ಹಚ್ಚುವರಿಗೆ ನಿಜವಾದ ಜೀವನ ಗೊತ್ತಿಲ್ಲ.. ಸಿನಿಮಾದವರನದನ್ನು ನಂಬಬೇಡಿ ಹೀಗೆ ನೂರಾರು ಬಾರಿ‌ ಕಲಾವಿದರಿಗೆ  ಮತ್ತು ಸಿನಿಮಾ ರಂಗದ ಬಗ್ಗೆ ಅವಹೇಳನ ಮಾಡಿರುವ ಇವರನ್ನು ಕನ್ನಡ ಚಿತ್ರರಂಗ ಎಂದಿಗೂ ಕ್ಷಮಿಸುವುದಿಲ್ಲ.

ಇನ್ನು ಸಿಎಂ ಅವರ ಮಗ ನಿಖಿಲ್ ಕುಮಾರ ಸ್ವಾಮಿ ಮತ್ತೊಮ್ಮೆ ಸಿನಿಮಾ ರಂಗಕ್ಕೆ ಬಂದರೆ ಅವನ ಸಿನಿಮಾವನ್ನು ಯಾರೂ ಸಹ ಬೆಂಬಲಿಸಬಾರದು. ನಾವು ಅಭಿಮಾನಿಗಳೂ ಸಹ ಅವರ ಸಿನಿಮಾವನ್ನು ನೋಡುವುದಿಲ್ಲ. ಸ್ವಾಭಿಮಾನಿ ಕಲಾವಿದರು, ಸ್ವಾಭಿಮಾನಿ‌ ನಿರ್ದೇಶಕರು ಯಾರೂ ಸಹ ಅವರನ್ನು ಸಿನಿಮಾ ರಂಗದಲ್ಲಿ ಪ್ರೋತ್ಸಾಹಿಸುವುದಿಲ್ಲ. ಅವರ ಚಿತ್ರ ತೆರೆ ಮೇಲೆ ಮೂರೂ ದಿನವೂ ನಿಲ್ಲದಂತೆ‌ ಮಾಡಬೇಕು. ಹೊಟ್ಟೆಗೆ ತಣ್ಣೀರು ಬಟ್ಟೆ ಸುತ್ತಿಕೊಂಡು ಬದುಕುತ್ತಿರುವ ಕಲಾವಿದರಿಂದ ಹಿಡಿದು ಕೋಟಿಗಟ್ಟಲೆ ಗಳಿಸಿದರೂ ಸರಳ ಸಜ್ಜನಿಕೆಯಿಂದ ಬದುಕುವ ಎಲ್ಲಾ ಕಲಾವಿದರೂ ಸಹ “ಕಲಾಮಾತೆಗೆ” ಗೌರವ ಕೊಡುತ್ತಿರುವಾಗ.. ಹಣದ ಮದ, ಅಹಂಕಾರದಿಂದ, ಮತ್ತು ರಾಜಕೀಯ ಲಾಭಕ್ಕಾಗಿ ಸಿನಿಮಾ ಮಾಡುವವರಿಗೆ  “ಕಲಾದೇವಿ”ಯನ್ನು ನಿಂದಿಸುವುದು ಬಹಳ ಸುಲಭ.

ಇದೆಲ್ಲವನ್ನು ಮನಸ್ಸಿನಲ್ಲಿಟ್ಟುಕೊಂಡು ಯಾವುದೇ ಕಾರಣಕ್ಕೂ ನಿಖಿಲ್‌ ಕುಮಾರಸ್ವಾಮಿ ಮತ್ತು ಅವರ ಅಪ್ಪ ಕುಮಾರಸ್ವಾಮಿಯನ್ನು ಸಿನಿಮಾ ರಂಗದಲ್ಲಿ ಮೆರೆಯಲು ಬಿಡಬೇಡಿ.. ಕಲೆ ಯಾರಪ್ಪನ ಸ್ವತ್ತೂ ಅಲ್ಲ ನಿಜ‌. ಆದರೆ ಕಲಾರಂಗವನ್ನು ಗೌರವಿಸುವ ಗುಣವಿಲ್ಲದಿದ್ದರೆ ಯಾರೂ ಉದ್ಧಾರವಾಗುವುದಿಲ್ಲ ಎಂಬ ಪಾಠವನ್ನು ಇಂಥವರಿಗೆ ಕಲಿಸಬೇಕಾಗಿದೆ..

ಎಲ್ಲೆಲ್ಲಿ ವೋಟ್ ಮಾಡ್ತಾರೆ ಗೊತ್ತಾ ಸ್ಯಾಂಡಲ್ ವುಡ್ ಸೆಲೆಬ್ರಿಟೀಸ್…!

#fans, #balkaninews #yash, #darshan,

Tags