ಸುದ್ದಿಗಳು

ಚಿತ್ರ ಬಿಡಿಸಿ ಡಿ-ಬಾಸ್ ಮನವನ್ನು ಗೆದ್ದ ಅಭಿಮಾನಿ…!!!

ಎಲ್ಲಾ ಕಲಾವಿದರಂತೆಯೇ ನಟ ಡಿ-ಬಾಸ್ ದರ್ಶನ್ ಎಂದರೆ ಎಲ್ಲರಿಗೂ ಅಚ್ಚು ಮೆಚ್ಚು ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ತಾವು ಸ್ಟಾರ್ ಆಗಿದ್ದರೂ ಹೊಸಬರಿಗೆ ಮತ್ತು ಅವರ ಸಿನಿಮಾಗಳಿಗೆ ಸದಾ ಪ್ರೋತ್ಸಾಹ ಕೊಡುತ್ತಲೇ ಬರುತ್ತಿರುವ ದರ್ಶನ್, ನಿನ್ನೆ (ಆ.15) ಕಿಶೋರ್, ಪ್ರಿಯಾಮಣಿ ಅಭಿನಯದ ‘ನನ್ನ ಪ್ರಕಾರ’ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದಾರೆ.

ಇದೇ ವೇಳೆ ದರ್ಶನ್ ರ ಅಭಿಮಾನಿ ಚಿತ್ರಗಾರ ಜೊಸೆಫ್ ಎನ್ನುವವರು ದರ್ಶನ್ ರ ಚಿತ್ರವನ್ನು ಬಿಡಿಸಿದ್ದಾರೆ. ಈ ಚಿತ್ರವನ್ನು ನೋಡಿದ ದರ್ಶನ್ ಬೆರಗಾಗಿದ್ದು, ಅಲ್ಲದೇ ಆ ಚಿತ್ರದ ಮೇಲೆ ಸಹಿ ಮಾಡಿ, ಅಭಿಮಾನಿಗೆ ಶುಭ ಹಾರೈಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಚೆಲುವರಾಯ ಸ್ವಾಮಿ, ಮಾಜಿ ಶಾಸಕ ಜಮೀರ್ ಅಹ್ಮದ್ ಸೇರಿದಂತೆ ಅನೇಕರು ಹಾಜರಿದ್ದರು.

ಸೈಮಾ ಪ್ರಶಸ್ತಿ 2019: ಯಶ್ ಅತ್ಯುತ್ತಮ ನಟ, ಪ್ರಶಾಂತ್ ನೀಲ್ ಅತ್ಯುತ್ತಮ ನಿರ್ದೇಶಕ

#darshan #darshanFan #specialGift  #kannadafilm, #kannadamovie

Tags