ಸುದ್ದಿಗಳು

ದರ್ಶನ್ ಫಾರ್ಮ್ ಹೌಸ್ ಮೇಲೆ ಐಟಿ ದಾಳಿ..!!?!!

ಬೆಂಗಳೂರು, ಏ.15:

ಸದ್ಯ ನಟ ದರ್ಶನ್ ಸುಮಲತ ಪರ ಚುನಾವಣಾ ಪ್ರಚಾರದಲ್ಲಿದ್ದಾರೆ. ಈಗಾಗಲೇ ಕಳೆದ ಕೆಲವು ದಿನಗಳಿಂದ ಸತತ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದಾರೆ ನಟ ದರ್ಶನ್. ಕೈ ನೋವಿನ ನಡುವೆಯೂ ಸುಮಲತಾ ಅವರ ಪರ ಪ್ರಚಾರಕ್ಕಿಳಿದಿರುವ ದಾಸ ಇಂದೂ ಕೂಡ ತಮ್ಮ ಪ್ರಚಾರ ಕಾರ್ಯ ಮುಂದುವರೆಸಿದ್ದಾರೆ. ಆದರೆ ಇಂದು ಐಟಿ ಅಧಿಕಾರಿಗಳು ಅವರ ಫಾರ್ಮ್ ಹೌಸ್ ಮೇಲೆ ದಾಳಿ ಮಾಡಿದ್ದಾರೆ ಎನ್ನಲಾಗಿದೆ.

ಐಟಿನಾ..? ಚುನಾವಣಾಧಿಕಾರಿಗಳ..?

ಮೈಸೂರಿನ ಟಿ.ನರಸೀಪುರ ರಸ್ತೆಯಲ್ಲಿರುವ ದರ್ಶನ್ ಫಾರ್ಮ್ ಹೌಸ್‌ಗೆ ಒಬ್ಬರು ಪೇದೆ.. ಹಾಗೂ ಪೇದೆ ಜೊತೆ ಇಬ್ಬರು ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದಾರೆ. ಸುಮಾರು 30 ನಿಮಿಷಗಳ ಕಾಲ ಈ ಫಾರ್ಮ್ ಹೌಸ್‌ ನಲ್ಲಿ ಪರಿಶೀಲನೆ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಇವರು ಐಟಿ ಅಧಿಕಾರಿಗಳಲ್ಲಿ ಬದಲಾಗಿ ಚುನಾವಣಾಧಿಕಾರಿಗಳು ಅಂತಾ ಹೇಳಲಾಗುತ್ತಿದೆ.

ಪ್ರಾಣಿ ಪಕ್ಷಿಗಳನ್ನು ನೋಡಿಕೊಂಡು ಹೋಗಲಿ

ಸದ್ಯ ಈ ವಿಚಾರಗಳಿಗೆ ಮಾಧ್ಯಮಗಳ ಜೊತೆ ಕೂಡ ನಟ ದರ್ಶನ್ ಮಾತನಾಡಿರುವುದು ವರದಿಗಳಾಗಿವೆ. ಐಟಿ ರೈಡ್ ಏನು ಆಗಿಲ್ಲ. ಚುನಾವಣಾಧಿಕಾರಿಗಳು ಬಂದಿದ್ದರಂತೆ. ಬರಲಿ ಬಿಡಿ. ನನ್ನ ಫಾರ್ಮ್ ಹೌಸ್‌ನಲ್ಲಿ ಪ್ರಾಣಿ ಪಕ್ಷಿಗಳು ಬಿಟ್ಟು ಬೇರೇನು ಇಲ್ಲ. ಅದನ್ನು ನೋಡಿಕೊಂಡು ಹೋಗಲಿ ಬಿಡಿ.. ಅಲ್ಲಿ ಪ್ರಾಣಿಗಳಿಗೆ ಹಾಕುವ ಬೂಸ ಇದೆ.. ಅಂತಾ ತುಂಬಾ ಕೂಲ್ ಆಗಿ ಉತ್ತರಿಸಿದ್ದಾರೆ..

ಸನ್ನಿ ಲಿಯೋನ್ ಬ್ಯಾಗ್ನಲ್ಲಿ ಏನಿರುತ್ತೆ ಗೊತ್ತಾ..?

#darshan #darshanmovies #darshanhits #sandalwood #kannadamovies #darshanfarmhouse

Tags