ಸುದ್ದಿಗಳು

ದರ್ಶನ್ 50 ನೇ ಸಿನಿಮಾ ಯಾವುದಾಗುತ್ತೆ..?..ಈ ಹಿಂದೆ ಪುನೀತ್ 25 ನೇ ಚಿತ್ರಕ್ಕೂ ಹೀಗೆಯೇ ಆಗಿತ್ತು…!!

‘ಕುರುಕ್ಷೇತ್ರ’ಕ್ಕಿಂತ ‘ಯಜಮಾನ’ ಮೊದಲು ತೆರೆಗೆ

ಬೆಂಗಳೂರು.ಜ.03: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿರುವ 50 ನೇ ಸಿನಿಮಾ ಯಾವುದು.. ಎಂಬುದರ ಬಗ್ಗೆ ಸದ್ಯ ಸಿನಿವಲಯದಲ್ಲಿ ಚರ್ಚಿತವಾಗುತ್ತಿದೆ. ಏಕೆಂದರೆ ಈ ಮೊದಲು ‘ಕುರುಕ್ಷೇತ್ರ’ 50 ನೇ ಚಿತ್ರವೆಂದು ಹೇಳಲಾಗಿತ್ತು. ಆದರೆ ಈ ನಡುವೆ ಚಿತ್ರೀಕರಣ ಮುಗಿಸಿ, ಉಳಿದ ಕೆಲಸದಲ್ಲಿರುವ ‘ಯಜಮಾನ’ ಫೆಬ್ರವರಿ ತಿಂಗಳಲ್ಲಿ ತೆರೆಗೆ ಬರುತ್ತಿದೆ.

50 ನೇ ಸಿನಿಮಾ

ಇನ್ನು ‘ಕುರುಕ್ಷೇತ್ರ’ ಚಿತ್ರ 2 ಡಿ ಅವತರಣಿಕೆ ಈಗಾಗಲೇ ಸೆನ್ಸಾರ್ ಆಗಿದೆ. ಇನ್ನು 3 ಡಿ ಸೆನ್ಸಾರ್ ಆಗಬೇಕಿದೆ. ಹೀಗಾಗಿ ದರ್ಶನ್ ಅವರ 50 ನೇ ಸಿನಿಮಾ ಯಾವುದು ಆಗಲಿದೆ ಎಂಬ ಅನುಮಾನ ದರ್ಶನ್ ಅಭಿಮಾನಿ ವಲಯದಲ್ಲಿ ಗಿರಕಿ ಹೊಡೆಯುತ್ತಿದೆ. ಒಂದು ಕಡೆ ದರ್ಶನ್ ವೃತ್ತಿ ಬದುಕಿಗೆ ಬಹು ತಿರುವು ನೀಡುವುದರಲ್ಲಿ ‘ಕುರುಕ್ಷೇತ್ರ’ ಪಾಲು ಬಹಳಷ್ಟಿದೆ. ಏಕೆಂದರೆ ಇದು ಪೌರಾಣಿಕ ಸಿನಿಮಾ.

ಯಾವುದು ಮೊದಲು

ಒಂದು ಕಡೆ ‘ಕುರುಕ್ಷೇತ್ರ’ ಚಿತ್ರದ ಬಗ್ಗೆಯಾದರೆ, ‘ಯಜಮಾನ’ ಡಾ. ವಿಷ್ಣುವರ್ಧನ್ ಅವರ ದಿ ಬೆಸ್ಟ್ ಸಿನಿಮಾಗಳಲ್ಲೊಂದು. ಇದೇ ಶೀರ್ಷಿಕೆಯಡಿ ಸಿನಿಮಾ ಬರುತ್ತಿರುವುದರಿಂದ ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ಹೈಫ್ ಕ್ರಿಯೇಟ್ ಆಗಿದೆ. ಒಂದು ವೇಳೆ ಇದೇ ಮೊದಲು ತೆರೆ ಕಂಡರೂ ಸಹ ದರ್ಶನ್ ರಿಗೆ ಒಳ್ಳೆಯದೂ ಆಗಲಿದೆ.

ಒಂದು ವೇಳೆ ಈ ಎರಡೂ ಚಿತ್ರಗಳು ಸಹ ಒಂದೇ ಟೈಮ್ ನಲ್ಲಿ ಬಂದ್ರೆ, ದೊಡ್ಡ ಸ್ಟಾರ್ ಒಬ್ಬರ 2 ಸಿನಿಮಾ ರೆಡಿಯಾಗಿ ಕನ್ನಡದಲ್ಲಿ ಬಹಳ ವರ್ಷಗಳೇ ಕಳೆದಿದ್ದು ಅದೂ ಕೂಡ ಸ್ಪೆಷಲ್ ಆಗೇ ಇರಲಿದೆ.

ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಿನಿಮಾ ವೃತ್ತಿ ಬದುಕಿನಲ್ಲಿಯೂ ಹೀಗೆಯೇ ಆಯಿತು. 24 ನೇ ಚಿತ್ರವೆಂದು ಶುರುವಾಗಿದ್ದ ‘ದೊಡ್ಮನೆ ಹುಡ್ಗ’ ಲೇಟ್ ಆಗಿ ರಿಲೀಸ್ ಆಗಿ 25 ನೇ ಚಿತ್ರವಾಯಿತು. ‘ಚಕ್ರವ್ಯೂಹ’ ಸಿನಿಮಾ 24 ನೇ ಸಿನಿಮಾವೆಂಬ ಖ್ಯಾತಿಗೆ ಒಳಗಾಯಿತು.

Tags