ಸುದ್ದಿಗಳು

ದರ್ಶನ್ ಗೆ ಮತ್ತೆ ಕೈ ನೋವು..?

ಬೆಂಗಳೂರು,ಏ.14: ನಟ ದರ್ಶನ್ ಸತತ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಈ ನಟನಿಗೆ ಮತ್ತೆ ಕೈ ನೋವು ಕಾಣಿಸಿಕೊಂಡಿದ್ದು, ಆ ನೋವಿನಲ್ಲಿಯೇ ಪ್ರಚಾರ ಮಾಡುತ್ತಿದ್ದಾರೆ.

ನಟ ದರ್ಶನ್ ಮೈಸೂರಿಗೆ ತೆರಳುತ್ತಿದ್ದ ವೇಳೆ ಅಪಘಾತವಾಗಿ ಕೈಗೆ ಪೆಟ್ಟು ಬಿದ್ದಿತ್ತು. ಈ ವೇಳೆ ನಟ ದಶ್ನ್ ಆಸ್ಪತ್ರಗೆ ದಾಖಲಾಗಿ, ಬಲಗೈ ಆಪರೇಷನ್ ಕೂಡ ಮಾಡಿಸಿಕೊಂಡಿದ್ದರು. ಚೇತರಿಕೆಯ ನಂತರ ಸಿನಿಮಾ ಶೂಟಿಂಗ್ ಗಳಲ್ಲಿ ಭಾಗಿಯಾಗುತ್ತಿದ್ದರು. ಮತ್ತೆ ದರ್ಶನ್‌ಗೆ ಕೈ ನೋವು ಕಾಣಿಸಿಕೊಳ್ಳುತ್ತಿದೆಯಂತೆ.

Image result for darshan hand pain

ಕೈ ನೋವಿನಲ್ಲಿಯೇ ಪ್ರಚಾರ

ಎಸ್ ಸದ್ಯ ಸುಮಲತ ಪರ ಪ್ರಚಾರದಲ್ಲಿರುವ ನಟ ದರ್ಶನ್, ಒಂದು ದಿನ ಬಿಡುವಿಲ್ಲದೆ ಸತತ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಮಂಡ್ಯದ ಪ್ರತಿಯೊಂದು ಹಳ್ಳಿ ಹಳ್ಳಿಯಲ್ಲೂ , ಪ್ರತಿಯೊಂದು ರಸ್ತೆಯ ಇಕ್ಕೆಲಗಳಿಗೂ ದರ್ಶನ್ ಭೇಟಿ ನೀಡುತ್ತಿದ್ದಾರೆ. ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದಾರೆ. ಅಭಿಮಾನಿಗಳ ಆಸೆಯಂತೆ ಅಭಿಮಾನಿಗಳಿಗೆ ಕೈ ಕೊಡುವ ಮೂಲಕ ಅಭಿಮಾನಿ ಮೆರೆಯುತ್ತಿದ್ದಾರೆ.

ಮತ್ತೆ ಕೈಗೆ ಆಪರೇಷನ್..?

ಇದೀಗ ನಟ ದರ್ಶನ್ ಬಲಗೈ ಮತ್ತೆ ನೋವು ಬರುತ್ತಿದೆಯಂತೆ. ಅಭಿಮಾನಿಗಳ ಎಳೆದಾಟದಿಂದಾಗಿ ಕೈ ನೋವು ಹೆಚ್ಚಾಗಿದೆ ಎನ್ನಲಾಗಿದೆ. ಬಲಗೈಗೆ ಹಾಕಿರುವ ರಾಡ್‌ನಲ್ಲಿ ಗ್ಯಾಪ್ ಬಿಟ್ಟಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನೋವು ಕಾಣಿಸುತ್ತಿದೆ ಎನ್ನಲಾಗಿದೆ. ಇನ್ನು ಸದ್ಯ ಈ ನೋವಿಗೆ ನಟ ಮೈಸೂರಿನಲ್ಲಿ ಚಿಕಿತ್ಸೆ ಪಡೆದಿದ್ದಾರಂತೆ. ಇನ್ನು ಮೂಲಗಳ ಪ್ರಕಾರ ೧೭ ರ ನಂತರ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ನೀಡಿದ ವೈದ್ಯರ ಬಳಿ ಚಿಕಿತ್ಸೆ ಪಡೆಯಲಿದ್ದು, ವೈದ್ಯರ ಸಲಹೆ ಮೇರೆಗೆ ಅಡ್ಮಿಟ್ ಆಗಬಹುದು ಎನ್ನಲಾಗಿದೆ. ಇನ್ನು ಅವಶ್ಯಕತೆ ಇದ್ದಲ್ಲಿ ಆಪರೇಷನ್ ಮಾಡಬೇಕಾಬಹುದು ಎನ್ನಲಾಗಿದೆ.

ರಾಜಮೌಳಿ ‘ಆರ್ ಆರ್ ಆರ್’ ಚಿತ್ರದಲ್ಲಿ ಪ್ರಭಾಸ್!!

#darshan #darshanhandpain #sandalwood #election2019

 

Tags