ಸುದ್ದಿಗಳು

ಕನ್ನಡದ ಹಿರಿಯ ನಟ ಹಾಗೂ ವಿಲನ್ ಭರತ್ ರಿಗೆ ಸಹಾಯ ಮಾಡಿ ಮಾನವೀಯತೆ ಮೆರೆದ ಡಿ-ಬಾಸ್ ದರ್ಶನ್

ಬೆಂಗಳೂರು.ಮೇ.14: ನಟ ಡಿ-ಬಾಸ್ ದರ್ಶನ್ ರವರು ಯಾರಿಗೆ ಸಹಾಯ ಮಾಡಲಿ ಅದನ್ನು ಅವರು ಎಲ್ಲರ ಮುಂದೆಯೂ ಹೇಳಿಕೊಳ್ಳುವುದಿಲ್ಲ. ಹೀಗಾಗಿ ಅವರು ಅದೆಷ್ಟೋ ಜನರಿಗೆ ಮಾಡಿರುವ ಸಹಾಯ ಎಲೆಮರೆ ಕಾಯಿಯಂತೆ ಹೊರ ಜಗತ್ತಿಗೆ ಗೊತ್ತಾಗುವುದಿಲ್ಲ.

ಇದಷ್ಟೇ ಅಲ್ಲದೇ ಸಹಾಯ ಪಡೆದವರು ಹೇಳುವವರೆಗೂ ಅದು ಸೀಕ್ರೆಟ್ ಆಗಿಯೇ ಉಳಿಯಲಿದೆ. ಆದಾಗ್ಯೂ, ಅಲ್ಲೊಬ್ಬರು ಇಲ್ಲೊಬ್ಬರು ದರ್ಶನ್ ಮಾಡಿರುವ ಸಹಾಯವನ್ನು ಹೊರ ಜಗತ್ತಿಗೆ ಅನಾವರಣ ಮಾಡಿದ್ದಾರೆ. ಅವರ ಹೆಸರು ಭರತ್, ಕನ್ನಡ ಚಿತ್ರರಂಗದಲ್ಲಿ ವಿಲನ್ ಪಾತ್ರಗಳನ್ನು ನಿರ್ವಹಿಸುತ್ತಿದ್ದವರು.

ಹೌದು, ಕನ್ನಡ ಚಿತ್ರರಂಗದಲ್ಲಿ ಸುಮಾರು ವರ್ಷಗಳ ಕಾಲ ಪೋಷಕ ನಟನಾಗಿ ಅಭಿನಯಿಸಿದ್ದ ಹಿರಿಯ ನಟ ಭರತ್ ಅವರು ಕಷ್ಟದಲ್ಲಿದ್ದಾಗ ದರ್ಶನ್ ಸಹಾಯ ಮಾಡಿದ್ರಂತೆ. ಬೇರೆ ಯಾರೂ ನನ್ನ ಕಷ್ಟಕ್ಕೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ, ನಟ ಭರತ್ ಅವರಿಗೆ ಏನಾಗಿತ್ತು? ದರ್ಶನ್ ಮಾಡಿದ ಸಹಾಯವೇನು ಗೊತ್ತಾ..?

ಸುಮಾರು 08 ವರ್ಷಗಳ ಹಿಂದೆ , ಖಳ ನಟ ಭರತ್ ರ ತಲೆಗೆ ಸ್ಟ್ರೋಕ್ ಆದ ಪರಿಣಾಮ ಕಳೆದ ಹಣವಿಲ್ಲದೆ ತೀವ್ರ ತೊಂದರೆ ಅನುಭವಿಸಿದ್ದರು. ಹಾಸಿಗೆ ಹಿಡಿದ ಸಂದರ್ಭದಲ್ಲಿ ತಾವೇ ಸಹಾಯಕ್ಕಾಗಿ ಕೈ ಚಾಚಿದರೂ ಯಾರೂ ಕೂಡಾ ಸಹಾಯ ಮಾಡಿರಲಿಲ್ಲ. ಈ ವಿಷಯ ತಿಳಿದ ದರ್ಶನ್, ಯಾರಿಗೂ ತಿಳಿಯದಂತೆ ತಮ್ಮ ಆಪ್ತರನ್ನು ಕಳುಹಿಸಿ ಚಿತ್ತೂರಿನಲ್ಲಿ ಭರತ್ ಗೆ ಚಿಕಿತ್ಸೆ ಕೊಡಿಸಿದ್ದಾರೆ.

ಅಂದ ಹಾಗೆ ಭರತ್ ರವರು ಇದುವರೆಗೂ ಸುಮಾರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಇದೀಗ ಗುಣಮುಖರಾಗಿದ್ದು, ಸದ್ಯ ‘ಜಲ್ಲಿಕಟ್ಟು’ ಎಂಬ ಚಿತ್ರದ ಮೂಲಕ ಖಳನಟರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಅಂದ ಹಾಗೆ , ಇದೀಗ ಸಂಪೂರ್ಣವಾಗಿ ಗುಣಮುಖರಾಗಿರುವ ಭರತ್ ರಿಗೆ, ತಮಗೆ ಸಹಾಯ ಮಾಡಿದ ದರ್ಶನ್ ಅವರನ್ನು ಭೇಟಿಯಾಗಿ ಧನ್ಯವಾದ ಹೇಳಬೇಕೆಂಬುದು ಆಸೆಯಾಗಿದೆ. ಆ ಆಸೆ ಬಹಳ ಬೇಗ ನೆರವೇರಲಿ ಹಾಗೂ ನೂರಾರು ಕಾಲ ಅವರು ಸಂತಸದಿಂದಿರಲಿ ಎಂದು ನಾವು ಸಹ ಹಾರೈಸುತ್ತೇವೆ.

ಸ್ವಿಟ್ಜರ್ಲೆಂಡ್ ನಲ್ಲಿ ಜಾಲಿ ಮೂಡ್ ನಲ್ಲಿರುವ ಅಲ್ಲು!!

#darshan, #help, , #bharath, #balkaninews #kannadasuddigalu, #filmnews,

Tags

Related Articles