ಸುದ್ದಿಗಳು

ಕುದುರೆ ರೇಸಿಂಗ್ ಮೂವಿಯಲ್ಲಿ ಡಿ ಬಾಸ್?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಅಂದ್ರೆ ಸಾಕು. ಡಿ ಬಾಸ್ ಅಭಿಮಾನಿಗಳಿಗೆ ಹಬ್ಬವೇ ಸರಿ. ಇನ್ನು ಡಿ ಬಾಸ್ ಗೆ ಪ್ರಾಣಿಗಳೆಂದ್ರೆ ಪಂಚ ಪ್ರಾಣ. ತಮ್ಮ ಫಾರ್ಮ್ ನಲ್ಲಿ ಬಹಳಷ್ಟು ಪ್ರಾಣಿಗಳನ್ನು ಸಾಕುತ್ತಿದ್ದಾರೆ. ಅದರಲ್ಲೂ ದಚ್ಚುಗೆ ಹಾಗೂ ಕುದುರೆಗೆ ಬಹಳ ನಂಟು. ಹೆಚ್ಚಿನ ಸಿನಿಮಾಗಳಲ್ಲಿ ದರ್ಶನ್ ಕುದುರೆ ಸವಾರಿ ಮಾಡಿದ್ದನ್ನು ಕಾಣಬಹುದು.

ಈಗ ನಿರ್ಮಾಪಕರೊಬ್ಬರು ದರ್ಶನ್ ಗೆ ಕುದುರೆ ರೇಸ್ ಆಧರಿತ  ಸಿನಿಮಾ ಮಾಡುವ ಹಂಬಲ ವ್ಯಕ್ತ ಪಡಿಸಿದ್ದಾರೆ. ಹೌದು, ಕಿರಿಕ್ ಪಾರ್ಟಿ ಚಿತ್ರ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಡಿ ಬಾಸ್ ದರ್ಶನ್ ಒಪ್ಪಿದರೆ ಸ್ಪೋರ್ಟ್ಸ್​-ಅಡ್ವೆಂಚರ್ಸ್, ಕುದುರೆ ರೇಸಿಂಗ್ ಸಿನಿಮಾ ಮಾಡುವುದಾಗಿ ಹೇಳಿದ್ದು, ಇದು ಕನ್ನಡ ಇಂಡಸ್ಟ್ರಿಯಲ್ಲಿ ಅತೀ ದೊಡ್ಡ ಸ್ಪೂರ್ಟ್ಸ್ ಆಧರಿತ ಚಿತ್ರವಾಗಲಿದೆ ಎಂದು ಬರೆದುಕೊಂಡಿದ್ದಾರೆ.

Image result for darshan horse riding

ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಪೈಲ್ವಾನ್, ಯುವರತ್ನ ಸ್ಪೋರ್ಟ್ಸ್ ಆಧರಿತ ಚಿತ್ರಗಳಾಗಿದ್ದು ಮುಂದೆ ಡಿ ಬಾಸ್ ಕೂಡ ಈ ರೀತಿಯ ಸಿನಿಮಾಗಳು ಮಾಡಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ .

ಲೇಡಿ ಸೂಪರ್ಸ್ಟಾರ್ ಗೆ ಬರ್ತಡೇ ಸಂಭ್ರಮ

#darshan #darshanmovies #pushkarallikarjunaih

Tags