ಸುದ್ದಿಗಳು

‘ಬಂಪರ್’ ಚಿತ್ರದ ಮುಹೂರ್ತಕ್ಕೆ ಬರ್ತಿದ್ದಾರೆ ಡಿ. ಬಾಸ್ …!!

ಜನವರಿ 15ರಂದು ನಡೆಯಲಿರುವ ಬಂಪರ್ ಚಿತ್ರದ ಮುಹೂರ್ತಕ್ಕೆ ಬರಲಿದ್ದಾರೆ ದರ್ಶನ್...

ಬಜಾರ್ ಚಿತ್ರದ ಮೂಲಕ ಚಿತ್ರರಂಗದಲ್ಲಿ ಬಜ಼್ ಕ್ರಿಯೇಟ್ ಮಾಡಿರುವ ಧನ್ವೀರ್ ಕಾಲೇಜ್ ಕುಮಾರ, ವಿಕ್ಟರಿ 2 ಹಾಗೂ ಅಲೆಮಾರಿ ಸೇರಿದಂತೆ ಕ್ಲಾಸ್ ಹಾಗೂ ಮಾಸ್ ಎರಡು ರೀತಿ ಚಿತ್ರಗಳನ್ನು ಮಾಡಿ ತಮ್ಮದೇ ಆದ ಐಡೆಂಟಿಟೀ ಪಡೆದುಕೊಂಡಿರುವ ಹರಿ ಸಂತೋಷ್ ‘ಬಂಪರ್’ ಚಿತ್ರ ನಿರ್ದೇಶಿಸಲಿದ್ದಾರೆ.

ಈ ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಯಾಗಿ ಸದ್ದು ಮಾಡಿದ್ದು ಈ ಚಿತ್ರದ ಶೂಟಿಂಗ್ ಮುಹೂರ್ತ ಇದೆ ತಿಂಗಳ 15ರಂದು ಶ್ರೀ ಬಂಡೆ ಮಹಾ ಕಾಳಿ ದೇವಸ್ಥಾನ ಗವಿಪುರಂ ಗುಟ್ಟಹಳ್ಳಿಯಲ್ಲಿ ಬೆಳಿಗ್ಗೆ 10:30ಕ್ಕೆ ನಡೆಯಲಿದ್ದು ಚಂದನವನದಲ್ಲಿ ಹೊಸ ಪ್ರತಿಭೆಗಳಿಗೆ ಸಾಥ್ ನೀಡುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಮಿಸಲಿದ್ದಾರೆ.

#Kannada #Bazaar #Bumper #kannadamovies #KannadaTrending #Dhanveerah #Harisantosh

Tags