ಸುದ್ದಿಗಳು

ಚಾಕ್ ಪೀಸ್ ನಲ್ಲಿ ಅರಳಿದ ‘ದುರ್ಯೋಧನ’ ದರ್ಶನ್

ಬೆಂಗಳೂರಿನ ಪ್ರತಿಭೆಯಿಂದ ಹೊರ ಬಂತು ಅದ್ಭುತ ಕಲಾಕೃತಿ

ನಿನ್ನೆಯಷ್ಟೇ (ಆ.09) ತೆರೆ ಕಂಡ ‘ಕುರುಕ್ಷೇತ್ರ’ ಚಿತ್ರವು ರಾಜ್ಯಾದ್ಯಂತ ಸಖತ್ ಸುದ್ದಿ ಮಾಡುತ್ತಿದೆ. ಈಗಾಗಲೇ ಬಾಕ್ಸ್ ಆಫೀಸ್ ನಲ್ಲಿ ದಾಖಲೆಯ ಗಳಿಕೆ ಕಾಣುತ್ತಾ ಮುನ್ನುಗ್ಗುತ್ತಿರುವ ಈ ಚಿತ್ರದ ದುರ್ಯೋಧನನ ಪಾತ್ರವು ಮತ್ತೆ ಸುದ್ದಿಯಾಗಿದೆ.

ಈಗ ಎಲ್ಲೆಲ್ಲೂ ಕನ್ನಡದ ಈ ಚಿತ್ರದ್ದೇ ಹವಾ. ಎಲ್ಲಿ ನೋಡಿದರೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರದ್ದೇ ಹವಾ. ಈಗ ಕಲಾವಿದನ ಕೈ ಚಳಕದಲ್ಲಿ ದರ್ಶನ್ ರ ಸುಂದರ ಕಲಾಕೃತಿಯೂ ಸಿದ್ದವಾಗಿದೆ. ಹೌದು, ಈಗ ಚಾಕ್ ಪೀಸ್ ( ಸೀಮೆಸುಣ್ಣ) ನಲ್ಲಿ ದರ್ಶನ್ ರ ಆಕೃತಿಯನ್ನು ಕೆತ್ತಲಾಗಿದೆ. ಈ ಸುಂದರ ಪುಟ್ಟ ಪ್ರತಿಮೆ ಅರಳಿರುವುದು ಖ್ಯಾತ ಕಲಾವಿದ ಸಚಿನ್ ಸಂಘೆ ಅವರ ಕೈಯಲ್ಲಿ.

ಈ ಕಲಾವಿದ ಸಚಿನ್ ಮೂಲತಃ ಗೌರಿ ಬಿದನೂರಿನವರು, ಸದ್ಯ ಬೆಂಗಳೂರಿನ ಸಿಸ್ಕೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಅವರು ಇದೇ ರೀತಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಮಿತಾಭ್ ಬಚ್ಚನ್ , ಪ್ರಧಾನಿ ನರೇಂದ್ರ ಮೋದಿ, ಡಾ. ರಾಜ್ಕುಮಾರ್, ಡಾ. ವಿಷ್ಣುವರ್ಧನ್, ಸೂಪರ್ ಸ್ಟಾರ್ ರಜಿನೀಕಾಂತ್, ರಕ್ಷಿತ್ ಶೆಟ್ಟಿ ಸೇರಿದಂತೆ ಸಾಕಷ್ಟು ನಟರ ಹಾಗೂ ಜನಪ್ರಿಯ ವ್ಯಕ್ತಿಗಳ ಚಿತ್ರಗಳನ್ನು ಕೆತ್ತಿರುವ ಅವರು ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಆಕೃತಿ ಕೆತ್ತಿದ್ದಾರೆ.

ವರಮಹಾಲಕ್ಷ್ಮಿ ಹಬ್ಬಕ್ಕೆ ಬಂದ ಲಕ್ಷ್ಮಿ!!

#darshan #darshanChacopiece #darshankurukshetra #kannadafilm, #kannadamovie, #kannadanews, #kannadanewmovie, #kannadacine,

Tags