ಸುದ್ದಿಗಳು

ಸದ್ದು ಮಾಡುತ್ತಿರುವ ಮದಕರಿ ವೇಷದ ಪೋಸ್ಟರ್

ಡಿ-ಬಾಸ್ ದರ್ಶನ್ ಅಭಿನಯ ಮಾಡಬೇಕಿರುವ ಸಿನಿಮಾ

ಬೆಂಗಳೂರು, ಅ,17: ನಟ ದರ್ಶನ್ ಮದಕರಿ ನಾಯಕ ವೇಷದ ಫೊಟೋ ಒಂದು ಬಿಡುಗಡೆಯಾಗಿದ್ದು ತುಂಬಾ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಗಂಡುಗಲಿ ಮದಕರಿಯಾಗಿ ದರ್ಶನ್

ಸದ್ಯ ಮದಕರಿ ನಾಯಕನ ಪಾತ್ರವಾಗಿ ಯಾರು ಸಿನಿಮಾ ಮಾಡುತ್ತಾರೆ ಎನ್ನುವ ಪ್ರಶ್ನೆ ಎಲ್ಲೆಡೆ ಹಬ್ಬಿದೆ. ದರ್ಶನ್ ಅಭಿಮಾನಿಗಳು ತಮ್ಮ ನಟನೇ ಮದಕರಿಯಾಗಲಿ ಅಂತಿದ್ದರೆ, ಇತ್ತ ನಟ ಸುದೀಪ್ ಅಭಿಮಾನಿಗಳು ಕೂಡ ತಮ್ಮ ನಟನೇ ವೀರ ಮದಕರಿಯಾಗಬೇಕು ಎನ್ನುತ್ತಿದ್ದಾರೆ. ಇನ್ನು ಈ ಬೆನ್ನಲ್ಲೇ ಇದೀಗ ದರ್ಶನ್ ಫೊಟೋ ಒಂದು ಎಲ್ಲೆಡೆ ಸುದ್ದು ಮಾಡುತ್ತಿದೆ.

ಅಭಿಮಾನಿಗಳಿಂದಲೇ ಪೋಸ್ಟರ್ ತಯಾರು

ಹೌದು, ಮದಕರಿ ನಾಯಕ ಸಿನಿಮಾ ಬಗ್ಗೆ ಸದ್ಯ ಹಲವಾರು ಊಹಾ ಊಹಪೋಹಗಳು ಪ್ರಾರಂಭವಾಗಿವೆ. ಇದೀಗ ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಇದೀಗ ದರ್ಶನ್ ಪೋಸ್ಟರ್ ಒಂದು ಬಾರೀ ವೈರಲ್ ಆಗುತ್ತಿದೆ. ವಿಜಯ ದಶಮಿಯ ಪ್ರಯುಕ್ತ ದರ್ಶನ್ ಅಭಿಮಾನಿಗಳೇ ತಯಾರಿಸಿದ ಪೋಸ್ಟರ್ ಇದಾಗಿದೆ.

ಕುದುರೆ ಮೇಲೆ ಕುಳಿತ ದರ್ಶನ್

ಚಿತ್ರದುರ್ಗದ ಕೋಟೆಯ ಎದುರಲ್ಲಿ ಕುದುರೆ ಮೇಲೆ ಕತ್ತಿ ಹಿಡಿದು ಸವಾರಿ ಮಾಡುವ ಪೋಸ್ಟರ್ ಇದಾಗಿದೆ. ಇನ್ನು ಸದ್ಯ ಈ ಪೋಸ್ಟರ್ ಎಲ್ಲೆಡೆ ಸದ್ದು ಮಾಡುತ್ತಿದೆ. ಇನ್ನು ಸುದೀಪ್ ಹಾಗೂ ದರ್ಶನ್ ನಡುವೆ ಯಾರಾಗುತ್ತಾರೆ ಮದಕರಿ ನಾಯಕ ಎನ್ನುವುದು ಸದ್ಯ ಅಭಿಮಾನಿಗಳಲ್ಲಿ ಕಾಡುತ್ತಿರುವ ಪ್ರಶ್ನೆ…!

Tags