ಸುದ್ದಿಗಳು

ಡಿ-ಬಾಸ್ ‘ದರ್ಶನ್’ ರನ್ನು ಭೇಟಿ ಮಾಡಿದ ‘ಟಕ್ಕರ್’ ಚಿತ್ರತಂಡ

ದರ್ಶನ್ ಅವರ ಸಂಬಂಧಿಯಾಗಿರುವ ಮನೋಜ್ ಈಗ "ಟಕ್ಕರ್' ಮೂಲಕ ನಾಯಕರಾಗಿ ಚಿತ್ರರಂಗಕ್ಕೆ

‘ಟಕ್ಕರ್’ ಚಿತ್ರದ ನಾಯಕ, ನಿರ್ಮಾಪಕ ಹಾಗೂ ನಿರ್ದೇಶಕರು ‘ಡಿ-ಬಾಸ್’ ದರ್ಶನ್ ರನ್ನು ಭೇಟಿ ಮಾಡಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ದರ್ಶನ್ ಸಹೋದರ ದಿನಕರ್ ರವರು ಈ ಚಿತ್ರದ ಚಿತ್ರೀಕರಣದ ಸ್ಥಳಕ್ಕೆ ಭೇಟಿ ಕೊಟ್ಟದ್ದರು.

ಬೆಂಗಳೂರು, ಆ.30 : ವಿನಯ್ ರಾಜಕುಮಾರ್ ಅಭಿನಯದ “ರನ್ ಆ್ಯಂಟೋನಿ’ ಚಿತ್ರ ನಿರ್ದೇಶಿಸಿದ ರಘು ಶಾಸ್ತ್ರಿ ಈಗ ‘ಟಕ್ಕರ್’ ಚಿತ್ರವನ್ನು ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ‘ಡಿ-ಬಾಸ್’ ದರ್ಶನ್ ಅವರ ಸಂಬಂಧಿ ಮನೋಜ್ ನಾಯಕರಾಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಸದ್ಯ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.

ದರ್ಶನ್ ರನ್ನು ಭೇಟಿಯಾದ ಚಿತ್ರತಂಡ

‘ಟಕ್ಕರ್’ ಚಿತ್ರದ ನಾಯಕ, ನಿರ್ಮಾಪಕ ಹಾಗೂ ನಿರ್ದೇಶಕರು ನಿನ್ನೆಯಷ್ಟೇ ನಟ ದರ್ಶನ್ ಅವರನ್ನು ಯಜಮಾನ ಚಿತ್ರದ ಚಿತ್ರೀಕರಣದ ಸ್ಥಳದಲ್ಲಿ ಭೇಟಿ ಮಾಡಿದ್ದಾರೆ. ಇನ್ನು ದರ್ಶನ್ ಸಹ ಚಿತ್ರದ ಬಗ್ಗೆ ಪ್ರತಿಯೊಂದನ್ನೂ ವಿಚಾರಿಸಿಕೊಂಡಿದ್ದಾರೆ. ಅತ್ಯಂತ ವೇಗವಾಗಿ ಚಿತ್ರೀಕರಣ ನಡೆಯುತ್ತಿರುವುದರ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಚಿತ್ರಕ್ಕೆ ಚೆಂದದ ಅಭಿನಯ ನೀಡುತ್ತಿರುವ ಸೋದರಳಿಯ ಮನೋಜ್ ಅವರನ್ನೂ ಮೆಚ್ಚಿಕೊಂಡು ಪ್ರೋತ್ಸಾಹಿಸಿದ್ದಾರೆ.

ನಾಯಕಿಯಾಗಿ ಪುಟ್ಟಗೌರಿ

‘ಪುಟ್ಟಗೌರಿ ಮದುವೆ’ ಧಾರಾವಾಹಿಯಿಂದಲೇ ಕರ್ನಾಟಕದಲ್ಲಿ ಜನಪ್ರಿಯರಾಗಿರುವ ಗೌರಿ ಅಲಿಯಾಸ್ ರಂಜನಿ ರಾಘವನ್ ಬೆಳ್ಳಿತೆರೆಗೂ ಪಾದಾರ್ಪಣೆ ಮಾಡಿ, ಮೊದಲ ಚಿತ್ರ ‘ರಾಜಹಂಸ’ದಲ್ಲಿಯೇ ಯಶಸ್ಸು ಕಂಡಿದ್ದಾರೆ. ಸದ್ಯ ‘ಡಿ-ಬಾಸ್’ ದರ್ಶನ್ ಕುಟುಂಬದಿಂದ ಬಂದಿರುವ ಮನೋಜ್ ಅವರು ನಟಿಸುತ್ತಿರುವ ಮೊದಲ ಸಿನಿಮಾ ‘ಟಕ್ಕರ್’ ಚಿತ್ರದಲ್ಲಿ ರಂಜಿನಿ ರಾಘವನ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕಾಗಿ ನಿರ್ದೇಶಕ ರಘು ಶಾಸ್ತ್ರಿ ಹಾಗೂ ನಿರ್ಮಾಪಕ ಕೆ.ಎನ್ ನಾಗೇಶ್ ಕೋಗಿಲು ಎಲ್ಲಾ ತಯಾರಿ ನಡೆಸುತ್ತಿದ್ದಾರೆ.

Tags