ಸುದ್ದಿಗಳು

ಹೆಸರು ಬದಲಾಯಿಸಿಕೊಂಡ ದರ್ಶನ್ ..

ಬೆಂಗಳೂರು,ಫೆ.11:

50ಸಿನಿಮಾಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತ್ರ ಇತ್ತು. ಈಗ ದರ್ಶನ್  ತಮ್ಮ ಹೆಸರು ಬದಲಾಯಿಸಿಕೊಂಡಿದ್ದಾರೆ.. ಹೌದು, ದರ್ಶನ್ ತೂಗುದೀಪ… ಎಂದೇ ಯಜಮಾನ ಟ್ರೇಲರ್ ಬಿಡುಗಡೆಯಾದಾಗಿನಿಂದ ದರ್ಶನ್ ಹೆಸರಿನ ಜೊತೆಯಲ್ಲಿ ತಂದೆ ಹೆಸರು ಕೂಡ ಸೇರ್ಪಡೆಯಾಗಿದೆ..

ತೂಗುದೀಪ ಬಂದಿದ್ದು ಹೇಗೆ?

ಇನ್ನು ತೂಗುದೀಪ್ ಶ್ರೀನಿವಾಸ್ ಕನ್ನಡ ಚಿತ್ರರಂಗದ ಹೆಸರಾಂತ ಖಳನಟ..  ಶಾಲಾದಿನಗಳಲ್ಲಿ ನಾಟಕಗಳಲ್ಲಿ ಮುಂಚೂಣಿಯಿಂದ ಕಾಣಿಸಿಕೊಳ್ಳುತ್ತಿದ್ದ ಶ್ರೀನಿವಾಸ್ ಮುಂದೆ ಖ್ಯಾತ ನಿರ್ಮಾಪಕ ಎಂ.ಪಿ.ಶಂಕರ್ ತಂಡ ಸೇರಿದರು. ಮೈಸೂರಿನವರೇ ಆದ ನಿರ್ದೇಶಕ ಕೆ.ಎಸ್.ಎಲ್ ಸ್ವಾಮಿಯವರು ಇವರ ನಾಟಕ ನೋಡಿ ಮೆಚ್ಚಿಕೊಂಡು ತಮ್ಮ ಚಿತ್ರ `ತೂಗುದೀಪ’ದಲ್ಲಿ ಅವಕಾಶ ನೀಡಿದರು . ಆ ಚಿತ್ರದ ಹಾಡುಗಳಿಗೆ ಗಾಯಕ ಪಿ.ಬಿ.ಶ್ರೀನಿವಾಸ ಧ್ವನಿ ನೀಡಿದ್ದರು. ಚಿತ್ರದ ಟೈಟಲ್ ಕಾರ್ಡನಲ್ಲಿ ಇಬ್ಬರು ಶ್ರೀನಿವಾಸ ಹೆಸರುಗಳು ಬೇಡವೆಂದು ಸ್ವಾಮಿಯವರು ಶ್ರೀನಿವಾಸರಿಗೆ ತೂಗುದೀಪ ಶ್ರೀನಿವಾಸ ಎಂದು ಹೆಸರು ನೀಡಿದರು.

Image result for darshan

ದರ್ಶನ್ ತೂಗುದೀಪ

ತಂದೆಯ ಆದರ್ಶ ಮಾರ್ಗದಲ್ಲೇ ಬೆಳೆದ ದರ್ಶನ್ ಕೂಡ ತಮ್ಮ ತಂದೆಯಂತೆಯೇ ಕನ್ನಡ ಚಿತ್ರರಂಗದಲ್ಲಿ ಟಾಪ್ ನಟ…ಇಷ್ಟು ದಿನ ಸಿನಿಮಾದಲ್ಲಿ ಬರೀ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದು ಹೆಸರು ಇಟ್ಟುಕೊಂಡಿದ್ದ ದಚ್ಚು ಇದೀಗ ದರ್ಶನ್ ತೂಗುದೀಪ ಎಂದು ಬದಲಾಯಿಸಿಕೊಂಡಿದ್ದಾರೆ..

Image result for darshan

10 ಮಿಲಿಯನ್ ವೀವ್ಸ್

ಇನ್ನು ನಿನ್ನೆಯಷ್ಟೇ ಯಜಮಾನ ಟ್ರೈಲರ್ ಬಿಡುಗಡೆಯಾಗಿದೆ.. ದಚ್ಚು ಅಭಿನಯದ ಈ ಸಿನಿಮಾ ಯ್ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ಆಗಿ ಧೂಳೆಬ್ಬಿಸ್ತಾ ಇದೆ…ಕೇವಲ 24 ಗಂಟೆಯಲ್ಲಿ 10 ಮಿಲಿಯನ್ ವೀವ್ಸ್ ಪಡೆದಿದೆ..

ಮಾರ್ಚ್ಒಂದರಂದು ಥಿಯೇಟರ್ಗೆ

ಯಜಮಾನ ಚಿತ್ರವನ್ನು ವಿ.ಹರಿಕೃಷ್ಣ ಹಾಗೂ ಪಿ.ಕುಮಾರ್​ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ದರ್ಶನ್ ಜೊತೆಯಲ್ಲಿ ರಶ್ಮಿಕಾ ಮಂದಣ್ಣ, ತಾನ್ಯಾ ಹೋಪ್​, ಠಾಕೂರ್​ ಅನೂಪ್ ಸಿಂಗ್, ಧನಂಜಯ್​, ದೇವರಾಜ್​,ರವಿಶಂಕರ್​​ ಸೇರಿದಂತೆ ಕಲಾವಿದರ ದಂಡೇ ಇದೆ. ಯಜಮಾನ ಸಿನಿಮಾ ಮಾರ್ಚ್​ ಒಂದರಂದು ಥಿಯೇಟರ್​ಗೆ ಕಾಲಿಡಲಿದೆ.

ಗಣೇಶ್ ನಾಯಕತ್ವದ ‘ವೇರ್ ಈಸ್ ಮೈ ಕನ್ನಡಕ’ ಚಿತ್ರಕ್ಕೆ ಮುಹೂರ್ತ

#balkaninews #darshan #darshanmovie #yajamana

Tags