ಸುದ್ದಿಗಳು

ಮುಖಾಮುಖಿಯಾಗಲಿದೆ ದರ್ಶನ್ ಹಾಗೂ ಸುದೀಪ್ ಸಿನಿಮಾ !!?!!

ಬೆಂಗಳೂರು,ಮೇ.19: ವರಮಹಾಲಕ್ಷ್ಮಿಗೆ ದರ್ಶನ್ ಹಾಗೂ ಸುದೀಪ್ ಸಿನಿಮಾಗಳು ತೆರೆಗೆ ಅಪ್ಪಳಿಸಲಿವೆ.

ದರ್ಶನ್ ಅಭಿನಯದ ಪೌರಾಣಿಕ ಕಥೆ ಕುರುಕ್ಷೇತ್ರ ಸಿನಿಮಾಗೆ ಅಂತೂ ಬಿಡುಗಡೆ ಮುಹೂರ್ತ ಕೂಡಿ ಬಂದಿದೆ. ನಿನ್ನೆಯಷ್ಟೆ ಈ ಸಿನಿಮಾ ಬಿಡುಗಡೆ ದಿನಾಂಕವನ್ನು ಮುನಿರತ್ನ ಪ್ರಕಟ ಮಾಡಿದ್ದಾರೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಕುರುಕ್ಷೇತ್ರ ಸಿನಿನಾ ೫ ಭಾಷೆಯಲ್ಲಿ ಅಬ್ಬರಿಸಲಿದೆ. ಸದ್ಯ ಈ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

Image result for pailwan movie

ಸ್ಟಾರ್ ನಟರ ಸಿನಿಮಾಗಳು ಮುಖಾಮುಖಿ

ಇನ್ನು ಪೈಲ್ವಾನ್ ಸಿನಿಮಾ ಕೂಡ ವರಲಕ್ಷ್ಮಿ ಹಬ್ಬಕ್ಕೇ ರಿಲೀಸ್ ಆಗ್ತಾ ಇದೆ. ಈಗಾಗಲೇ ನಿರ್ದೇಶಕ ಕೃಷ್ಣ ತಿಳಿಸಿದಂತೆ ಈ ಚಿತ್ರ ಕೂಡ ಅಂದೇ ಬಿಡುಗಡೆ ಕಾಣುತ್ತಿದೆ. ಸದ್ಯ ಈ ಚಿತ್ರ ಕೂಡ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಇನ್ನು ಈ ಸಿನಿಮಾ ಟೀಸರ್ ಪೋಸ್ಟರ್ ಗಳಿಂದಲೇ ಸಖತ್ ಸೌಂಡ್ ಮಾಡ್ತಾ ಇದೆ. ಸದ್ಯ ಈ ಸಿನಿಮಾ ಹಾಗು ಕುರುಕ್ಷೇತ್ರ ಎರಡು ಒಂದೇ ದಿನ ರಿಲೀಸ್ ಆಗ್ತಾ ಇದೆ. ಇನ್ನು ಇಬ್ಬರು ನಟರು ಒಂದೇ ಬಾರೀಗೆ ತೆರೆಗೆ ಅಬ್ಬರಿಸಲಿದ್ದಾರೆ.

Image result for kurukshetra movie kannada

ಪೈಲ್ವಾನ್ ವರ್ಸಸ್ ಕುರುಕ್ಷೇತ್ರ

ಸದ್ಯ ಈ ಎರಡು ಸಿನಿಮಾಗಳು ಒಂದೇ ಬಾರಿಗೆ ರಿಲೀಸ್ ಆಗ್ತಾ ಇದ್ದು, ಅತ್ತ ದರ್ಶನ್ ಅಭಿಮಾನಿಗಳು ಇತ್ತ ಸುದೀಪ್ ಅಭಿಮಾನಿಗಳ ಇಬ್ಬರು ತಮ್ಮ ತಮ್ಮ ನೆಚ್ಚಿನ ನಟರ ಸಿನಿಮಾಗಳನ್ನು ನೋಡಬಹುದಾಗಿದೆ. ಇನ್ನು ಸ್ಟಾರ್ ನಟರ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಕದನಕ್ಕಿಳಿಯಲು ರೆಡಿಯಾಗಿವೆ. ಇನ್ನು ದೋಸ್ತ್ ಗಳಾಗಿದ್ದ ಈ ಇಬ್ಬರು ನಟರ ಸಿನಿಮಾಗಳು ಒಂದೇ ಸಮಯದಲ್ಲಿ ಬಿಡಿಗಡೆಯಾಗುತ್ತಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿವೆ

ಹಾಲಿವುಡ್ ಸ್ಟಾರ್ ಜೊತೆ ರಿಯಲ್ ಸ್ಟಾರ್ ಮಕ್ಕಳು..!

#darshan #sudeep #kurukshetra #pailwaan #sandalwood

Tags