ಸುದ್ದಿಗಳು

“ನಿಮ್ಮೆಲ್ಲರ ನಿಶ್ಕಲ್ಮಶವಾದ ಪ್ರೀತಿಗೆ ನಾನು ಸದಾ ಚಿರಋಣಿ”

ಬೆಂಗಳೂರು,ಫೆ.17:

ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ 42 ನೇ ಹುಟ್ಟುಹಬ್ಬವನ್ನು ನಿನ್ನೆ ಲಕ್ಷಾಂತರ ಅಭಿಮಾನಿಗಳ ಜೊತೆ  ಸರಳವಾಗಿ  ಆಚರಿಸಿಕೊಂಡಿದ್ದಾರೆ. ಕೇಕ್, ಹೂವು ಹಾರ ಬದಲು ಶ್ರೀಮಠಕ್ಕೆ ಅನುಕೂಲವಾಗುವಂತೆ ದವಸ ಧಾನ್ಯ ತಂದು ಕೊಟ್ಟಿದ್ದಾರೆ.. ಇನ್ನು ದಾಸನ ಹುಟ್ಟು ಹಬ್ಬಕ್ಕೆ ಹಲವಾರು ಗಣ್ಯರು ಸಿನಿತಾರೆಯರು ಶುಭಹಾರೈಸಿದ್ದಾರೆ…  ದಾಸನ ಮನವಿಗೆ ಬೆಲೆಕೊಟ್ಟು ಹುಟ್ಟುಹಬ್ಬವನ್ನು ಅಚ್ಚುಕಟ್ಟಾಗಿ ನೆರವೇರಿಸಿದ್ದಲ್ಲದೆ, ಅಭಿಮಾನಿಗಳ ಪ್ರೀತಿಗೆ ದಾಸ ಫಿದಾ ಆಗಿದ್ದು ಟ್ವಿಟರ್ ನಲ್ಲಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ..

Image result for actor darshan thanking

ಅಭಿಮಾನಿ ಬಳಗಕ್ಕೆ ಕೃತಘ್ನತೆಗಳು

ನನ್ನ ಮನವಿಗೆ ಬೆಲೆಕೊಟ್ಟು ಶಾಂತರೀತಿಯಿಂದ ಹುಟ್ಟುಹಬ್ಬದ ಅರ್ಥಪೂರ್ಣ ಆಚರಣೆಗಾಗಿ ಪುಣ್ಯಕರವಾದ ಕೆಲಸಕ್ಕೆ ನೆರವಾದ ಅಭಿಮಾನಿ ಬಳಗಕ್ಕೆ ಎಷ್ಟು ಕೃತಘ್ನತೆಗಳು ಸಲ್ಲಿಸಿದರೂ ಕಮ್ಮಿಯೇ ಅನಿಸುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಬಂದು ನನ್ನನು ನೋಡಿ, ಹರಸಿ, ಆಶೀರ್ವದಿಸಿ ಹೋಗಿದ್ದೀರಾ.

ಪೊಲೀಸ್ ಅಧಿಕಾರಿಗಳಿಗೂ ನನ್ನ ಧನ್ಯವಾದಗಳು

ನಿಮ್ಮೆಲ್ಲರ ನಿಶ್ಕಲ್ಮಶವಾದ ಪ್ರೀತಿಗೆ ನಾನು ಸದಾ ಚಿರಋಣಿ. ನೀವು ತೋರಿಸುತ್ತಿರುವ ಈ ಪ್ರೀತಿಗೆ ನನ್ನ ಹತ್ತಿರ ಬೇರೆ ಮಾತುಗಳಿಲ್ಲ . ಎಲ್ಲರನ್ನು ನಿಯಂತ್ರಿಸಲು ಶ್ರಮಿಸಿದ ಪೊಲೀಸ್ ಅಧಿಕಾರಿಗಳಿಗೂ ನನ್ನ ಧನ್ಯವಾದಗಳು. ಸೋಶಿಯಲ್ ಮೀಡಿಯಾದಲ್ಲಿ ಕಾಲ್ ಗಳಲ್ಲಿ ಖುದ್ದಾಗಿ ಬಂದು ಹರಸಿ ಅಭಿನಂದಿಸಿದ ಅಭಿಮಾನಿಗಳು ಸ್ನೇಹಿತರು ಚಿತ್ರರಂಗದ ಬಳಗದವರಿಗೂ ಧನ್ಯವಾದಗಳು…

ಅಭಿಮಾನಿಗಳ ಸಂಘದ ಸದಸ್ಯರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು

ಹುಟ್ಟುಹಬ್ಬದ ಆಯೋಜನೆಗಾಗಿ ೨ ವಾರದಿಂದ ಶ್ರಮಿಸಿದ ಎಲ್ಲಾ ನನ್ನ ಅಭಿಮಾನಿಗಳ ಸಂಘದ ಸದಸ್ಯರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು ಈ ನಿಮ್ಮ ಪ್ರೀತಿಯ ದಾಸನ ಅನಂತ ವಂದನೆಗಳು.

ಗ್ರಾಹಕರೇ ಹಣ್ಣು ಮತ್ತು ತರಕಾರಿಗಳ ಮೇಲಿರುವ ಸ್ಟಿಕ್ಕರ್ ಗಳನ್ನು ನೋಡಿ ಮರುಳಾಗದಿರಿ…!!!

#balkaninews #darshan #darshantwitter #darshanthanksgiving

Tags

Related Articles