ಸುದ್ದಿಗಳು

ಸರತಿ ಸಾಲಿನಲ್ಲಿ ನಿಂತು ಪತ್ನಿಯೊಂದಿಗೆ ಮತ ಚಲಾಯಿಸಿದ ಡಿ-ಬಾಸ್ ದರ್ಶನ್

ಇಂದು ಮೊದಲ ಹಂತದ ಲೋಕಸಭಾ ಚುನಾವಣೆ

ಬೆಂಗಳೂರು.ಏ.18: ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆ ನಡೆಯುತ್ತಿದ್ದು, ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ಸಾಗುತ್ತಿದೆ. ಸಾಮಾನ್ಯ ಜನರಂತೆ ಸಿನಿಮಾ ಸ್ಟಾರ್ ಗಳು ಕೂಡ ಬೆಳ್ಳಂಬೆಳಗ್ಗೆಯೇ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ.

ಈಗಾಗಲೇ ಅನೇಕ ಸ್ಟಾರ್ ಗಳು ಮತ ಚಲಾಯಿಸಿದ್ದು ನಟ ದರ್ಶನ್, ಪತ್ನಿಯೊಂದಿಗೆ ಆಗಮಿಸಿ ವೋಟ್ ಚಲಾಯಿಸಿದ್ದಾರೆ.ಆರ್ ಆರ್ ನಗರದಲ್ಲಿರುವ ಮೌಂಟ್ ಕರ್ಮೆಲ್ ಸ್ಕೂಲ್ ನ ಬೂತ್ ನಂ 346 ನಲ್ಲಿ ಮತ ಚಲಾಯಿಸಿದ್ದಾರೆ.

ಗ್ರಾಮಾಂತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅಶ್ವತ್ಥ್ ನಾರಾಯಣಗೌಡ ಹಾಗೂ ಮೈತ್ರಿ ಅಭ್ಯರ್ಥಿಯಾಗಿ ಡಿ.ಕೆ.ಸುರೇಶ್ ಅಖಾಡದಲ್ಲಿದ್ದಾರೆ.

#darshan, #wife, #voting, #balkaninews #kannadasuddigalu. #lokasabhaelection2019,

Tags