ಸುದ್ದಿಗಳು

ಗಜರಾಜನನ್ನು ಭೇಟಿ ಮಾಡಿದ ಗಜೇಂದ್ರ

ಬೆಂಗಳೂರು, ಮಾ.16:

ಸದ್ಯ ದರ್ಶನ್ ಅಭಿನಯದ ‘ಯಜಮಾನ’ ಸಿನಿಮಾ ಈಗಾಗಲೇ ಯಶಸ್ವಿ ಪ್ರದರ್ಶನ ಕಾಣುತ್ತಿದೆ. 25ನೇ ದಿನದತ್ತ ಯಶಸ್ವಿಯಾಗಿ ಸಾಗುತ್ತಿರುವ ಈ ಸಿನಿಮಾ ಇದೀಗ ಗಳಿಕೆಯಲ್ಲೂ ಮುಂದಿದೆ. ಇನ್ನೂ ಈ ಸಿನಿಮಾ ಮುಗಿದ ಬೆನ್ನಲ್ಲೇ ಇದೀಗ ನಟ ದರ್ಶನ್ ಒಡೆಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಸಿನಿಮಾ ಚಿತ್ರೀಕರಣ ಕೂಡ ಭರದಿಂದ ಸಾಗುತ್ತಿದೆ.

ಹೌದು, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ದರ್ಶನ್ ಸದ್ಯ ಒಡೆಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಸಿನಿಮಾ ಚಿತ್ರೀಕರಣ ಸಾಗುತ್ತಿದೆ. ಇದೀಗ ಈ ನಟ ಸಿನಿಮಾ ಚಿತ್ರೀಕರಣದ ವೇಳೆ ಗಜರಾಜನನ್ನು ಭೇಟಿಯಾಗಿದ್ದಾರೆ.

ಸಿನಿಮಾದಲ್ಲಿದೆಯಾ ಅನೇಕ ಪಾತ್ರ

ಹೌದು, ಸದ್ಯ ನಟ ದರ್ಶನ್ ನಿಜವಾದ ಗಜನನ್ನು ಭೇಟಿ ಮಾಡಿದ್ದಾರೆ. ಅದರ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಸದ್ಯ ಈ ಫೋಟೋ ನೋಡುತ್ತಿದ್ದರೆ ಸಿನಿಮಾದಲ್ಲಿ ಆನೆಯ ಪಾತ್ರ ಇದೆಯಾ ಎಂಬ ಅನುಮಾನ ಕಾಡುತ್ತಿದೆ. ಇನ್ನೂ ಈ ಸಿನಿಮಾದಲ್ಲಿ ದರ್ಶನ್ ಪಾತ್ರದ ಹೆಸರು ಕೂಡ ಗಜೇಂದ್ರ ಆಗಿರೋದ್ರಿಂದ ಈ ಸಿನಿಮಾದಲ್ಲಿ ಆನೆಯ ಪಾತ್ರ ಇದೆ ಅನ್ನೋದು ಹಲವರ ಮಾತು.

ತಮಿಳಿನ ರೀಮೇಕ್ ಸಿನಿಮಾ ಒಡೆಯ

ಸದ್ಯ ಒಡೆಯ ಸಿನಿಮಾ ತಮಿಳಿನ ವೀರಂ ಸಿನಿಮಾ ರೀಮೇಕ್. ಎಂಡಿ ಶ್ರೀಧರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾಗೆ ಸಂದೇಶ್ ನಾಗರಾಜ್ ಬಂಡವಾಳ ಹೂಡಿದ್ದಾರೆ. ಈ ಸಿನಿಮಾ ದರ್ಶನ್ ಅಭಿನಯದ 52ನೇ ಸಿನಿಮಾವಾಗಿದೆ.

 

View this post on Instagram

 

A post shared by Darshan Thoogudeepa Shrivinas (@darshanthoogudeepaofficial) on

ಹೆಣ್ಮಕ್ಕಳ ಮನ ಕದ್ದ ಆ್ಯಂಟಿಕ್ ಜ್ಯುವೆಲ್ಲರಿ

#balkaninews #sandalwood #darshan #darshanmovies #darshanhits #darshanodeyamovie

Tags